Home ಅರೋಗ್ಯ ಯೋಗಾಭ್ಯಾಸ ಮಾಡುವ ಮೊದಲು ಅದರ ನಿಯಮಗಳನ್ನ ಸರಿಯಾಗಿ ತಿಳಿದುಕೊಳ್ಳಿ..!

ಯೋಗಾಭ್ಯಾಸ ಮಾಡುವ ಮೊದಲು ಅದರ ನಿಯಮಗಳನ್ನ ಸರಿಯಾಗಿ ತಿಳಿದುಕೊಳ್ಳಿ..!

0
ಯೋಗಾಭ್ಯಾಸ ಮಾಡುವ ಮೊದಲು ಅದರ ನಿಯಮಗಳನ್ನ ಸರಿಯಾಗಿ ತಿಳಿದುಕೊಳ್ಳಿ..!

ಯೋಗ ಅನ್ನೋದು ದೇಹ ಮತ್ತು ಮನಸ್ಸು ಎರಡನ್ನೂ ಸದೃಢವಾಗಿಡುವುದರ ಜೊತೆಗೆ ಮನಸ್ಸಿನ ವಿಶ್ರಾಂತಿಯನ್ನು ನೀಡುತ್ತದೆ. ಯೋಗವನ್ನು ಮಾಡುವುದರಿಂದ ಫಿಟ್ ಆ್ಯಂಡ್ ಫೈನ್ ಆಗಿರಬಹುದು. ದಿನ ನಿತ್ಯ ಯೋಗ ಮಾಡುವವರು ಯೋಗ ಮಾಡದವರಿಗಿಂತ ಬಹಳ ಆ್ಯಕ್ಟಿವ್ ಆಗಿರುತ್ತಾರೆ. ಯೋಗ ಮಾಡುವಾಗ ಅದಕ್ಕೆ ಅನುಸರಿಸಬೇಕಾದ ಕೆಲವೊಂದು ನಿಯಮಗಳನ್ನ ತಪ್ಪದೇ ಪಾಲಿಸಬೇಕು. ಅವುಗಳನ್ನು ಮರೆತಲ್ಲಿ ಏನಾದರೂ ತೊಂದರೆ ಉಂಟಾಗಬಹುದು. ಹೀಗಾಗಿ ಯೋಗ ಕ್ಲಾಸಿಗೆ ಹೋದಾಗ ಅವರು ಮೊದಲು ನಮಗೆ ಕೆಲವು ಸಲಹೆಗಳನ್ನು ಕೊಡುತ್ತಾರೆ. ಆ ಸಲಹೆಗಳನ್ನು ಸರಿಯಾಗಿ ಪಾಲಿಸಿದಾಗ ಮಾತ್ರ ಯೋಗ ಮಾಡುವುದರಿಂದ ನಮಗೆ ಸರಿಯಾದ ಪ್ರಯೋಜನಗಳು ಸಿಗುತ್ತವೆ.

ಹೌದು, ಯೋಗದಿಂದ ಅನೇಕ ಆರೋಗ್ಯಕರ ಪ್ರಯೋಜನಗಳಿವೆ. ಎಷ್ಟೋ ಆರೊಗ್ಯ ಸಮಸ್ಯೆಗಳನ್ನು ಇದರಿಂದ ಗುಣಪಡಿಸಬಹುದಾಗಿದೆ. ಇದನ್ನು ಮಾಡುವುದರಿಂದ ಮಾನಸಿಕ ಆರೋಗ್ಯ ಹೆಚ್ಚುವುದು, ಮನಸ್ಸಿನಲ್ಲಿರುವ ಎಷ್ಟೋ ಗೊಂದಲುಗಳು ನಿವಾರಣೆಯಾಗುತ್ತದೆ. ಯೋಗ ಮಾಡುವ ಮೊದಲು ನಾವು ಆ ಆಸನಗಳ ಬಗ್ಗೆ ಸರಿಯಾಗಿ ತಿಳಿದುಕೊಂಡಿರಬೇಕು. ಇಂದಿನ ಆಧುನಿಕ ದಿನಮಾನದಲ್ಲಿ ಆನ್ ಲೈನ್ ನೋಡಿ ಅಡುಗೆಯಿಂದ ಹಿಡಿದು ಪ್ರತಿಯೊಂದನ್ನೂ ಕಲಿಯುತ್ತಾರೆ. ಅದೇ ರೀತಿ ಯೋಗವನ್ನೂ ಕೂಡ ಮಾಡಿದರೆ ಅದರಿಂದ ಉಂಟಾಗುವ ತೊಂದರೆಗಳಿಗೆ ನಾವೇ ಹೊಣೆಗಾರರಾಗಿರುತ್ತೇವೆ. ನಾವು ಕೆಲವೊಂದು ಕಾಮಿಡಿಗಳನ್ನು ನೊಡುತ್ತಿರುತ್ತೇವೆ ಟಿವಿ ನೊಡಿ ಯೋಗ ಮಾಡುವಾಗ ಅರ್ಧದಲ್ಲೇ ಸಿಗ್ನಲ್ ಹೋಗುವುದು ಅಥವಾ ಕರೆಂಟ್ ಹೋಗುವುದು ಆದಾಗ ಯಾವ ಭಂಗಿಯಲ್ಲಿರುತ್ತೇವೆಯೋ ಹಾಗೆಯೇ ಉಳಿದುಕೊಂಡಿರುತ್ತಾರೆ. ಇದು ಕಾಮಿಡಿ ಆದರೂ ಕೂಡ ಈ ರೀತಿ ಮಾಡುವುದು ಡೇಂಜರ್ ಹೀಗಾಗಿ ಯೋಗವನ್ನು ಪರಿಣಿತರ ಬಳಿಯಿಂದ ಕಲಿಯುವುದು ಒಳ್ಳೆಯದು.

ಯೋಗ ಮಾಡುವಾಗ ಅದರದೇ ಆದ ನಿಯಮಗಳಿರುತ್ತವೆ. ಪ್ರತಿಯೊಂದು ಸಣ್ಣ ಪುಟ್ಟ ನಿಯಮಗಳೂ ಕೂಡ ನಮಗೆ ಬಹಳ ಮುಖ್ಯವಾಗುತ್ತವೆ. ಹೀಗಾಗಿ ಯೋಗ ಮಾಡುವ ಮೊದಲು ಅದರ ನಿಯಮಗಳನ್ನು ಸರಿಯಾಗಿ ತಿಳಿದುಕೊಂಡಿರಬೇಕು. ಇದಕ್ಕೆ ಉದಾಹರಣೆ ಕೊಡುವುದಾದರೆ, ಯೋಗದಲ್ಲಿ ಉಸಿರಾಟದ ನಿಯಮಗಳು ತುಂಬಾನೇ ಮುಖ್ಯವಾಗಿದೆ. ಉಸಿರನ್ನು ಹೇಗೆ ತೆಗೆದುಕೊಳ್ಳಬೇಕು, ಹೇಗೆ ಬಿಡಬೇಕು, ಯಾವಾಗ ದೀರ್ಘ ಉಸಿರು ತೆಗೆದು-ನಿಧಾನಕ್ಕೆ ಬಿಡಬೇಕು, ಯಾವಾಗ ಸಹಜವಾಗಿ ಉಸಿರಾಡಬೇಕು ಈ ಎಲ್ಲಾ ವಿಷಯಗಳನ್ನು ಮೊದಲು ತಿಳಿದುಕೊಳ್ಳಬೇಕು.

 

LEAVE A REPLY

Please enter your comment!
Please enter your name here