Home ಆರೋಗ್ಯ ಲಿವರ್ ಸಮಸ್ಯೆ ನಿಮ್ಮನ್ನ ಕಾಡ್ತಿದ್ರೆ ಒಣದ್ರಾಕ್ಷಿಯಲ್ಲಿದೆ ಉತ್ತಮ ಪರಿಹಾರ

ಲಿವರ್ ಸಮಸ್ಯೆ ನಿಮ್ಮನ್ನ ಕಾಡ್ತಿದ್ರೆ ಒಣದ್ರಾಕ್ಷಿಯಲ್ಲಿದೆ ಉತ್ತಮ ಪರಿಹಾರ

0
ಲಿವರ್ ಸಮಸ್ಯೆ ನಿಮ್ಮನ್ನ ಕಾಡ್ತಿದ್ರೆ ಒಣದ್ರಾಕ್ಷಿಯಲ್ಲಿದೆ ಉತ್ತಮ ಪರಿಹಾರ

ಲಿವರ್ ಸಮಸ್ಯೆ ಬಂದರೆ ಎಲ್ಲರೂ ಹೆದರುತ್ತಾರೆ. ಲಿವರ್ ಸಮಸ್ಯೆ ಹೆಚ್ಚಾಗಿ ಕಾಡುವುದು ಮಧ್ಯಪಾನ ಮಾಡುವವರಿಗೆ. ಒಂದೊಂಮ್ಮೆ ಲಿವರ್ ಸಮಸ್ಯೆ ಬಂದರೆ ಅದರಿಂದ ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. ಹೀಗಾಗಿ ಲಿವರ್ ಸಮಸೆಯ ಬರುವ ಮೊದಲೇ ಅದು ಬಾರದ ರೀತಿ ತಡೆಯುವುದು ಉತ್ತಮ. ಒಂದು ವೇಳೆ ಬಂತೆಂದಾದರೆ ಅದನ್ನು ಹೇಗೆ ಗುಣಪಡಿಸಿಕೊಳ್ಳುವುದು ಎನ್ನುವ ಬಗ್ಗೆ ಯೋಚಿಸುವುದು ಬಹಳ ಮುಖ್ಯ. ಈ ಲಿವರ್ ಸಮಸ್ಯೆಯಿಂದ ದೂರವಾಗಲು ಕೇವಲ ಇಂಗ್ಲಿಷ್ ಮಡಿಸಿನ್ಸ್ ಗಳ ಮೊರೆಹೋಗುವುದು ಸರಿಯಲ್ಲ. ಬದಲಾಗಿ ಮನೆಮದ್ದನ್ನು ಉಪಯೋಗಿಸಿ ಲಿವರ್ ತೊಂದರೆಯಿಂದ ದೂರ ಇರಬಹುದು.

2 ಕಪ್ ನೀರನ್ನು ಕುದಿಸಿ. ಅದರಲ್ಲಿ 150 ಗ್ರಾಂ ಒಣದ್ರಾಕ್ಷಿಯನ್ನು ನೆನೆಹಾಕಿ. ರಾತ್ರಿ ಪೂರ್ತಿ ದ್ರಾಕ್ಷಿ ನೀರಿನಲ್ಲೇ ಇರಲಿ. ಮುಂಜಾನೆ ದ್ರಾಕ್ಷಿಯ ಹಾಕಿಟ್ಟ ನೀರನ್ನು ಸೋಸಿದ ಬಳಿಕ ಸ್ವಲ್ಪ ಬಿಸಿ ಮಾಡಿ ಕುಡಿಯಿರಿ. ಈ ನೀರನ್ನು ಕುಡಿದ ನಂತರ ಅರ್ಧ ಗಂಟೆ ಏನನ್ನೂ ಸೇವಿಸಬೇಡಿ. ತಿಂಗಳಲ್ಲಿ 4 ದಿನ ಹೀಗೆ ದ್ರಾಕ್ಷಿಯ ನೀರನ್ನು ಕುಡಿಯುವುದರಿಂದ ಲಿವರ್‌ನ ತೊಂದರೆಗಳು ದೂರವಾಗುತ್ತವೆ. ಇದರಿಂದ ರಕ್ತಶುದ್ಧಿಯಾಗಿ ಜೀರ್ಣಕ್ರಿಯೆ ಸರಾಗವಾಗಿ ನಡೆಯುತ್ತದೆ. ದ್ರಾಕ್ಷಿಯಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಮತ್ತು ಮಿನರಲ್ ಇರುವುದರಿಂದ ಇದು ಆರೋಗ್ಯಕರವಾಗಿದೆ.

ಒಣದ್ರಾಕ್ಷಿಯನ್ನು ನೀರಲ್ಲಿ ನೆನೆಸುವುದರಿಂದ ಅದರಲ್ಲಿನ ಸಕ್ಕರೆಯ ಪ್ರಮಾಣ ಕಡಿಮೆಯಾಗುತ್ತದೆ. ಹಾಗಾಗಿ ಇದು ಲಿವರ್ ಗೆ ಒಳ್ಳೆಯ ಔಷಧವಾಗಿದೆ. ಹೆಚ್ಚಿನ ಹೊಳಪನ್ನು ಹೊಂದಿರುವ ದ್ರಾಕ್ಷಿಯನ್ನು ಆಯ್ಕೆ ಮಾಡಬೇಡಿ. ಏಕೆಂದರೆ ಅಂತಹ ದ್ರಾಕ್ಷಿ ಕೆಮಿಕಲ್ ನಿಂದ ಕೂಡಿರುತ್ತದೆ.

 

LEAVE A REPLY

Please enter your comment!
Please enter your name here