Home ಆರೋಗ್ಯ ಪ್ರತಿ ದಿನ ಚಪ್ಪಾಳೆ ತಟ್ಟಿ ಫಿಟ್ ಆ್ಯಂಡ್ ಫೈನ್ ಆಗಿರಿ..!

ಪ್ರತಿ ದಿನ ಚಪ್ಪಾಳೆ ತಟ್ಟಿ ಫಿಟ್ ಆ್ಯಂಡ್ ಫೈನ್ ಆಗಿರಿ..!

0
ಪ್ರತಿ ದಿನ ಚಪ್ಪಾಳೆ ತಟ್ಟಿ ಫಿಟ್ ಆ್ಯಂಡ್ ಫೈನ್ ಆಗಿರಿ..!

ಇಂದಿನ ದಿನಮಾನದಲ್ಲಿ ಮಾನವ ಒತ್ತಡದ ಜೀವನದಿಂದಾಗಿ ದಣಿದು ಹೋಗಿದ್ದಾನೆ. ಅವನಿಗಾಗಿ ಸಮಯವನ್ನು ಕಳೆಯುವುದೇ ಕಡಿಮೆಯಾಗಿ ಬಿಟ್ಟಿದೆ. ಮೂರು ಹೊತ್ತು ಆಫೀಸ್ ಕೆಲಸದ ಕಡೆಗೆ ಚಿಂತಿಸುವ ಭರದಲ್ಲಿ ತನ್ನ ಆರೋಗ್ಯವನ್ನು ನೋಡಿಕೊಳ್ಳಲು ಕೂಡ ಆತನಿಗೆ ಸಮಯ ಇಲ್ಲವಾಗಿ ಬಿಟ್ಟಿದೆ. ಈ ಹಿನ್ನೆಲೆ ಇಂದಿನ ಕಾಲದಲ್ಲಿ ಜನರು ಬಹು ಬೇಗ ಅನಾರೋಗ್ಯಕ್ಕೆ ತುತ್ತಾಗುವುದರ ಜೊತೆಗೆ ಅಕಾಲಿಕ ಮರಣವನ್ನು ಹೊಂದುತ್ತಾರೆ. ದೇಹಕ್ಕೆ ಬೇಕಾಗುವ ವ್ಯಾಯಾಮ, ಆರೋಗ್ಯಕರ ಹವ್ಯಾಸಗಳನ್ನು ರೂಢಿಸಿಕೊಳ್ಳದಿದ್ದಲ್ಲಿ ಮೈಯೆಲ್ಲಾ ಜಡ್ಡು ಕಟ್ಟಿದಂತಾಗುವುದು ಸಾಮಾನ್ಯ. ಕೆಲವೊಮ್ಮೆ ಆರೋಗ್ಯ ಸಮಸ್ಯೆ ಕಾಡಿದಾಗ ಜಾಗಿಂಗ್, ಸೈಕ್ಲಿಂಗ್‌ನಂತಹ ಅಭ್ಯಾಸಗಳ ಮೊರೆ ಹೋಗುತ್ತಾರೆ. ಆದರೆ ವಾಸ್ತವವಾಗಿ ಆರೋಗ್ಯ ಹದಗೆಡುವ ಮೊದಲೇ ದೇಹವನ್ನು ಫಿಟ್ ಆಗಿಡುವ ಕೆಲವೊಂದು ಸಿಂಪಲ್ ಅಭ್ಯಾಸಗಳನ್ನು ಬೆಳಸಿಕೊಳ್ಳುವುದು ಉತ್ತಮ. ಹಾಗಾದ್ರೆ ಯಾವುದು ಈ ಸಿಂಪಲ್ ಅಭ್ಯಾಸ ಅಂತಾ ಯೋಚಿಸ್ತಿದೀರಾ..? ಮುಂದೆ ಓದಿ..

ಸಾಮಾನ್ಯವಾಗಿ ಪ್ರೋತ್ಸಾಹ ನೀಡಲು ಅಥವಾ ಖುಷಿಗೊಳಿಸಲು ನಾವು ಚಪ್ಪಾಳೆ ತಟ್ಟುತ್ತೇವೆ. ಆದರೆ ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು ಎನ್ನುವ ವಿಷಯ ಅನೇಕರಿಗೆ ತಿಳಿದಿಲ್ಲ. ಚಪ್ಪಾಳೆ ತಟ್ಟುವಾಗ ಕೈಗಳ ಎಲ್ಲ ಬಿಂದುಗಳು ಸ್ಪರ್ಶಿಸುವುದರಿಂದ ಅನೇಕ ರೋಗಗಳು ಕಡಿಮೆಯಾಗುತ್ತವೆ.

ಚಪ್ಪಾಳೆ ತಟ್ಟುವುದರಿಂದ ರಕ್ತ ಸಂಚಾರ ಸುಗಮವಾಗಿ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಮಕ್ಕಳ ಬರವಣಿಗೆಯಲ್ಲಿ ಸಾಕಷ್ಟು ಸುಧಾರಣೆಯಾಗುತ್ತದೆ.

ಡಯಾಬಿಟಿಸ್, ಅಸ್ತಮಾ, ಹೃದಯ ಸಂಬಂಧಿ ಖಾಯಿಲೆ, ಸಂಧಿವಾತದಂತಹ ಖಾಯಿಲೆಯಿಂದ ಮುಕ್ತಿ ಸಿಗುತ್ತದೆ. ಚಪ್ಪಾಳೆ ತಟ್ಟುವುದರಿಂದ ದೇಹಕ್ಕೆ ಆರಾಮ ಸಿಗುತ್ತದೆ.

ಚಪ್ಪಾಳೆಯಿಂದ ಬಿಳಿ ರಕ್ತ ಕಣಗಳು ಹೆಚ್ಚಾಗಿ ರೋಗದಿಂದ ನಮ್ಮ ದೇಹವನ್ನು ರಕ್ಷಣೆ ಮಾಡುತ್ತವೆ. ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಆಮ್ಲಜನಕ ಸಿಗುವ ಜೊತೆಗೆ ದೇಹ ಆರೋಗ್ಯವಾಗಿರುತ್ತದೆ.

ಪ್ರತಿದಿನ ಚಪ್ಪಾಳೆ ತಟ್ಟುವುದರಿಂದ ಶೀತ, ನೆಗಡಿ, ಕೂದಲು ಉದುರುವ ಸಮಸ್ಯೆ, ಶರೀರದಲ್ಲಿ ಕಾಣಿಸಿಕೊಳ್ಳುವ ನೋವು ಕಡಿಮೆಯಾಗುತ್ತದೆ. ಇದ್ರ ಜೊತೆಗೆ ಎಲ್ಲ ಅಂಗಗಳೂ ಆರೋಗ್ಯಕರವಾಗಿರುತ್ತವೆ.

 

LEAVE A REPLY

Please enter your comment!
Please enter your name here