
ಕಲ್ಲಂಗಡಿ ಹಣ್ಣು ಎಲ್ಲರೂ ಇಷ್ಟಪಟ್ಟು ತಿನ್ನುವ ಆರೋಗ್ಯವನ್ನು ವೃದ್ಧಿಸುವ ಹಣ್ಣುಗಳಲ್ಲಿ ಒಂದು. ಇದು ದೇಹದ ಉಷ್ಣಾಂಶವನ್ನು ಕಡಿಮೆ ಮಾಡಿ ದೇಹಕ್ಕೆ ತಂಪನ್ನು ನಿಡುತ್ತದೆ. ಬೇಸಿಗೆಯಲ್ಲಿ ಇದನ್ನು ಹೆಚ್ಚಾಗಿ ಜನರು ಸೇವಿಸುತ್ತಾರೆ. ಕೆಲವರಿಗೆ ರುಚಿ ಹೆಚ್ಚಿಸಿಕೊಳ್ಳುವ ಸಲುವಾಗಿ, ದೇಹವನ್ನು ಬೇಸಿಗೆಯ ತಾಪದಿಂದ ಕಾಪಾಡಿಕೊಳ್ಳುವ ದೆಸೆಯಿಂದ ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿ ಇಟ್ಟು ತಿನ್ನುವ ಅಭ್ಯಾಸ ಇರುತ್ತದೆ. ಆದರೆ ಈ ಅಭ್ಯಾಸಗಳು ಖಂಡಿತ ಒಳ್ಳೆಯದಲ್ಲ. ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳು ನಮ್ಮನ್ನು ಕಾಡುತ್ತವೆ.
ಕಲ್ಲಂಗಡಿಯನ್ನು ಫ್ರಿಡ್ಜ್ ನಲ್ಲಿ ಇಡಬಾರದು. ಈ ಹಣ್ಣಿನ ಹೊರಭಾಗ ಅಂದರೆ ಸಿಪ್ಪೆ ತುಂಬಾ ದಪ್ಪವಾಗಿರುತ್ತದೆ. ಇದರಿಂದಾಗಿ ಕಲ್ಲಂಗಡಿ ಬೇಗನೆ ಕೆಡುವುದಿಲ್ಲ ಮತ್ತು ಸುಮಾರು ೧೫-೨೦ ದಿನಗಳವರೆಗೆ ಹಾಗೆಯೇ ಇಡಬಹುದು ಫ್ರಿಡ್ಜ್ ನಲ್ಲಿ ಇಡುವ ಅಗತ್ಯವಿಲ್ಲ. ಒಂದು ವೇಳೆ ಹಣ್ಣನ್ನು ಫ್ರಿಡ್ಜ್ ನಲ್ಲಿ ಇಡಲೇ ಬೇಕು ಎಂದಾದರೆ ಈ ಹಣ್ಣನ್ನು ಕತ್ತರಿಸುವ ಮೊದಲು ಇಡಿ. ಕತ್ತರಿಸಿದ ನಂತರ ಯಾವುದೇ ಕಾರಣಕ್ಕೂ ಕಲ್ಲಂಗಡಿ ಯನ್ನು ಫ್ರಿಡ್ಜ್ ನಲ್ಲಿಡಬಾರದು. ಯಾಕೆಂದರೆ ರೆಫ್ರಿಜರೇಟರ್‌ನಲ್ಲಿ ಇರಿಸಲಾದ ಕಲ್ಲಂಗಡಿ ಅದರ ಪೌಷ್ಟಿಕಾಂಶವನ್ನು ಕಳೆದುಕೊಳ್ಳುತ್ತದೆ. ಜೊತೆಗೆ ಅದರಲ್ಲಿ ಕಂಡುಬರುವ ಕ್ಯಾರೊಟಿನಾಯ್ಡ್ ಮಟ್ಟವೂ ಕಡಿಮೆಯಾಗುತ್ತದೆ.
ಕಲ್ಲಂಗಡಿ ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡುವ ಅತಿ ಹೆಚ್ಚು ನೀರಿನಂಶವಿರುವ ಹಣ್ಣು. ಆದರೆ ಇದನ್ನು ಫ್ರಿಡ್ಜ್ ನಲ್ಲಿಟ್ಟರೆ ಅದರ ಪೋಶಕಾಂಶ ಕಡಿಮೆಯಾಗುತ್ತದೆ. ಜೊತೆಗೆ ಕೋಲ್ಡ್ ಕಲ್ಲಂಗಡಿ ತಿಂದರೆ ಕೆಮ್ಮು, ನೆಗಡಿ ಬರುವ ಸಾಧ್ಯತೆ ಇರುತ್ತದೆ. ಇಷ್ಟು ಮಾತ್ರವಲ್ಲ, ಕತ್ತರಿಸಿದ ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ತಿಂದರೆ, ಫುಡ್ ಪಾಯಿಜನ್ ಆಗುವ ಸಾಧ್ಯತೆ ಇದೆ. ಹಾಗಾಗಿ ಕಲ್ಲಂಗಡಿ ಹಣ್ಣನ್ನು ಕತ್ತರಿಸಿ ಫ್ರಿಡ್ಜ್ ನಲ್ಲಿಡಲೇಬಾರದು. ಹೀಗೆ ಮಾಡಿದರೆ ನಿಮ್ಮ ಆರೋಗ್ಯ ಅಥವಾ ನಿಮ್ಮ ಕುಟುಂಬದ ಸದಸ್ಯರ ಆರೋಗ್ಯವನ್ನು ಹಾಳುಮಾಡಿಕೊಳ್ಳುವಂತಾಗುತ್ತದೆ.
