Home ಆರೋಗ್ಯ ಗ್ಯಾಸ್ಟ್ರಿಕ್‌ ಸಮಸ್ಯೆ ಇದೆಯೇ?ಈ ಆಹಾರ ಪದಾರ್ಥಗಳನ್ನು ಸೇವಿಸಿ

ಗ್ಯಾಸ್ಟ್ರಿಕ್‌ ಸಮಸ್ಯೆ ಇದೆಯೇ?ಈ ಆಹಾರ ಪದಾರ್ಥಗಳನ್ನು ಸೇವಿಸಿ

0
ಗ್ಯಾಸ್ಟ್ರಿಕ್‌ ಸಮಸ್ಯೆ ಇದೆಯೇ?ಈ ಆಹಾರ ಪದಾರ್ಥಗಳನ್ನು ಸೇವಿಸಿ

ಇತ್ತೀಚಿನ ದಿನಗಳಲ್ಲಿ ಎಲ್ಲ ವಯಸ್ಸಿನವರಲ್ಲೂ ಗ್ಯಾಸ್ಟ್ರಿಕ್‌, ಹೈಪರ್‌ ಆ್ಯಸಿಡಿಟಿ, ಅಲ್ಸರ್‌ಗಳು ಸಾಮಾನ್ಯವಾಗಿ ಕಾಡುತ್ತಿದ್ದು ದಿನ ನಿತ್ಯದ ಜೀವನ ಶೈಲಿಯಲ್ಲಿ ಇದು ಬಹಳಷ್ಟು ತೊಂದರೆ ಮಾಡುತ್ತದೆ. ಬಹುತೇಕ ಜನರು ಇಂದು ಹೊರಗಿನ ಪುಡ್ ಗೆ ಹೆಚ್ಚು ಮಾನ್ಯತೆ ನೀಡುತ್ತಾರೆ. ಕೆಲವು ಬಾರಿ ಹೆಚ್ಚು ಮಸಾಲೆಯುಕ್ತ ಆಹಾರ ಸೇವಿಸಿದ ನಂತರ ನಮ್ಮ ಎದೆಯಲ್ಲಿ ಉರಿಯುವ ಅನುಭವ ಉಂಟಾಗುತ್ತದೆ. ಗ್ಯಾಸ್ಟ್ರಿಕ್ , ಸಮಸ್ಯೆಯಿಂದಾಗಿ ಹೆಚ್ಚಿನವರಿಗೆ ಹೊಟ್ಟೆ ಉಬ್ಬರ, ತಲೆ ಸುತ್ತುವುದು, ಎದೆಯುರಿ ಸೇರಿದಂತೆ ಹಲವು ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ.

ಪರಿಹಾರ ಏನು?

ಜೇನುತುಪ್ಪವನ್ನು ಬೆಚ್ಚಗಿನ ನೀರಿನೊಂದಿಗೆ ಸೇವಿಸುವುದರಿಂದ ಗ್ಯಾಸ್ಟ್ರಿಕ್‌ ಸಮಸ್ಯೆ ಕಡಿಮೆ ಮಾಡುತ್ತದೆ. ಇದಕ್ಕೆ ಸ್ವಲ್ಪ ನಿಂಬೆಹಣ್ಣನ್ನು ಸೇರಿಸುವುದರಿಂದ ಹೊಟ್ಟೆಯಲ್ಲಿರುವ ಆಮ್ಲವನ್ನು ನಿಯಂತ್ರಣ ದಲ್ಲಿ ಇಡುತ್ತದೆ

ಓಂ ಕಾಳುಗಳು ಗ್ಯಾಸ್ಟ್ರಿಕ್ ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ.‌ ಇದು ಸರಿಯಾದ ಜೀರ್ಣಕ್ರಿಯೆಗೆ ಸಹಾಯ ಮಾಡುವುದರೊಂದಿಗೆ ದೇಹವನ್ನು ಕ್ರಿಯಾಶೀಲ ಗೊಳಿಸುತ್ತದೆ.

ಗ್ಯಾಸ್ಟ್ರಿಕ್ ಮತ್ತು ಎದೆಯುರಿ ಸಮಸ್ಯೆಗೆ ರಾಮಬಾಣವಾಗಿ ಏಲಕ್ಕಿ ಕೆಲಸ ನಿರ್ವಹಿಸುತ್ತದೆ. ಇದರಲ್ಲಿ ಹೊಟ್ಟೆಯ ಭಾಗದಲ್ಲಿ ಉತ್ಪತ್ತಿಯಾಗುವ ಆಮ್ಲಿಯ ಪ್ರಮಾಣವನ್ನು ಕಡಿಮೆ ಮಾಡುವ ಗುಣ ಹೊಂದಿರುತ್ತದೆ

ಎಳನೀರು ದೇಹಕ್ಕೆ ಬಹಳ ಉತ್ತಮ ಇದು ನಿಮ್ಮ ಗ್ಯಾಸ್ಟ್ರಿಕ್ ಸಮಸ್ಯೆಗೆ ಕೇವಲ ಕೆಲವೇ ಹೊತ್ತಿನಲ್ಲಿ ಪರಿಹಾರ ನೀಡುತ್ತದೆ. ಇದು ಆಲ್ಕಲೈನ್ ಗುಣ ಲಕ್ಷಣಗಳನ್ನು ಒಳಗೊಂಡಿರುತ್ತದೆ.

ಬಾದಾಮಿಯಲ್ಲಿ ಪೋಷಕಾಂಶಗಳು ಹೆಚ್ಚಿದ್ದು ಎದೆಯುರಿ ಅಪಾಯವನ್ನು ಕಡಿಮೆ ಮಾಡಲು ಮತ್ತು ಆಮ್ಲವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.

ಇನ್ನೂ ಬಾಳೆಹಣ್ಣಿನ ಸೇವನೆಯು ಬಹಳ ಉತ್ತಮ. ಇದು ಆಮ್ಲೀಯತೆಯನ್ನು ತಟಸ್ಥಗೊಳಿಸುದರ ಜೊತೆಗೆ ಎದೆಯುರಿಯಿಂದ ಪರಿಹಾರವನ್ನು ನೀಡುತ್ತದೆ. ಹಾಲು ಮತ್ತು ಬಾಳೆಹಣ್ಣಿನ ಮಿಶ್ರಣ ಮಾಡಿ ಕುಡಿದರೆ ದೇಹಕ್ಕೆ ಬಹಳ ಉತ್ತಮ.

ಇಂಗು ಮಕ್ಕಳಿಂದ ಹಿರಿಯರವರೆಗೆ ಎಲ್ಲರಿಗೂ ಗ್ಯಾಸ್ಟ್ರಿಕ್ ಸಮಸ್ಯೆಗೆ ಪರಿಹಾರ ನೀಡುತ್ತದೆ. ಇದಕ್ಕಾಗಿ ನೀವು ಸ್ವಲ್ಪ ಪ್ರಮಾಣದ ಇಂಗನ್ನು ತೆಗೆದುಕೊಳ್ಳಿ. ಇದನ್ನು ಉಗುರುಬೆಚ್ಚಗಿನ ನೀರಿಗೆ ಬೆರೆಸಿ ಕುಡಿಯಿರಿ.

ಅದೇ ರೀತಿ ನೀವು ಗ್ಯಾಸ್ಟ್ರಿಕ್ ಸಮಸ್ಯೆ ಹೋಗಲಾಡಿಸಲು ಶುಂಠಿ ರಸ ಬಳಸಬಹುದು.

 

LEAVE A REPLY

Please enter your comment!
Please enter your name here