ಹಲವಾರು ಜನರಿಗೆ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ಇರುವುದಿಲ್ಲ. ಏನು ತಿಂದರೂ, ಏನು ಕೊಡಿದರೂ ನಮ್ಮ ದೇಹಕ್ಕೆ ಏನು ಆಗುವುದಿಲ್ಲ ಎನ್ನುವ ಧೈರ್ಯ ಅವರಲ್ಲಿ ಇರುತ್ತದೆ. ಆದರೆ ಇದು ತಪ್ಪು. ಕೆಲವೊಂದು ಸಲ ಯಾವುದೇ ಆಗಲಿ ಅತಿಯಾದರೆ ನಮ್ಮ ಆರೋಗ್ಯವು ಹಾಳಾಗುತ್ತದೆ. ಅದರಲ್ಲೂ ಕೆಲವರು ಫ್ರಿಜ್ ನಲ್ಲಿ ನೀರನ್ನು ಇಟ್ಟು ಅದನ್ನು ಎಲ್ಲಾ ಸಮಯದಲ್ಲೂ ಉಪಯೋಗಿಸುತ್ತಾರೆ. ಅದರಲ್ಲೂ ಬೇಸಿಗೆ ಬಂತು ಅಂದರೆ ಸಾಕು, ಅವರಿಗೆ ಫ್ರಿಡ್ಜ್ ನಲ್ಲಿರುವ ನೀರೇ ಬೇಕು, ಅದು ಬಿಟ್ಟು ಬೇರೆ ಯಾವ ನೀರು ಆಗುವುದಿಲ್ಲ. ತಣ್ಣಗಿನ ನೀರು ಕುಡಿಯುವುದು ದೇಹಕ್ಕೆ ಒಳ್ಳೆಯದು ಎನ್ನುವ ಅಂಶ ನಾವು ಈಗಾಗಲೇ ತಿಳಿದುಕೊಂಡಿದ್ದೇವೆ. ಆದರೆ ಫ್ರಿಜ್ನಲ್ಲಿರುವ ನೀರು ಕುಡಿಯುವುದು ತಪ್ಪು ಎಂದು ಅವರ ವಾದ. ಏಕೆಂದರೆ ತಣ್ಣಗಿನ ನೀರು ಕುಡಿದಾಗ ಹಿತವೆನಿಸುತ್ತದೆ ಆದರೆ ಫ್ರಿಜ್ ನೀರು ಕುಡಿದಾಗ ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸುತ್ತದೆ.
ಊಟ ಅಥವಾ ತಿಂಡಿ ಮಾಡಿದ ತಕ್ಷಣ ಅವರಿಗೆ ಕುಡಿಯಲು ನೀರು ಬೇಕು. ಅದರಲ್ಲಿಯೂ ಅವರಿಗೆ ಫ್ರಿಜ್ ನಲ್ಲಿರುವ ನೀರೇ ಬೇಕು. ಆದರೆ ಇದು ಒಳ್ಳೆಯದಲ್ಲ ಜೀರ್ಣಕ್ರಿಯೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಸದಾ ಕೋಲ್ಡ್ ನೀರು ಕುಡಿಯುವುದರಿಂದ ದೇಹದಲ್ಲಿನ ರೋಗ ನಿರೋಧಕ ಶಕ್ತಿ ಕುಂದುತ್ತದೆ. ಇದರಿಂದ ಮಲಬದ್ಧತೆ ಹಾಗೂ ಗ್ಯಾಸ್ ನಂತ ಸಮಸ್ಯೆ ಎದುರಿಸಬೇಕಾಗುತ್ತದೆ ಹಾಗೂ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ.
ಕೋಲ್ಡ್ ನೀರನ್ನು ಹೆಚ್ಚಾಗಿ ಕುಡಿಯುವುದರಿಂದ ವೇಗಸ್ ನರದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದು ನಮ್ಮ ದೇಹಕ್ಕೆ ತುಂಬಾ ಅಪಾಯಕಾರಿ. ಏಕೆಂದರೆ ಇದರಿಂದ ಹೃದಯ ಬಡಿತದ ವೇಗ ಕಡಿಮೆಯಾಗುತ್ತದೆ. ಇದು ಹೃದಯಕ್ಕೆ ಸಂಬAಧಿಸಿದ ಕಾಯಿಲೆಗಳನ್ನು ಬರುವಂತೆ ಪ್ರಚೋದಿಸುತ್ತದೆ.
ಅತಿಯಾಗಿ ಕೋಲ್ಡ್ ನೀರು ಕುಡಿಯುವುದರಿಂದ ಹಲ್ಲುಗಳು ಸಡಲಿಕೆಯಾಗುತ್ತವೆ. ಹಾಗೂ ವಸಡಿನಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಕೊಲ್ಡ್ ನೀರು ಕುಡಿಯುವುದರಿಂದ ಗಂಟಲಿನ ರಕ್ಷಣಾತ್ಮಕ ಪದರದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದು ನಮ್ಮ ಗಂಟಲಿನಲ್ಲಿ ಸೋಂಕು ಉಂಟಾಗುವAತೆ ಮಾಡುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಕೋಲ್ಡ್ ನೀರನ್ನು ಬಳಸದಂತೆ ನೋಡಿ. ಏಕೆಂದರೆ ಇದರಿಂದ ನಿಮ್ಮ ಆರೋಗ್ಯಕ್ಕೆ ಯಾವುದೇ ಉಪಯೋಗವಿಲ್ಲ ಬರಿ ಹಾನಿ ಮಾತ್ರ ಉಂಟಾಗುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಉಗುರು ಬೆಚ್ಚಗಿರುವ ನೀರು ಮತ್ತು ತಣ್ಣಗಿನ ನೀರನ್ನೇ ಕುಡಿಯುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಯಾವುದೇ ಕಾರಣಕ್ಕೂ ಫ್ರಿಡ್ಜ್ ನೀರನ್ನು ಕುಡಿಯಬೇಡಿ. ಯಾಕೆಂದರೆ ಇದು ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ.
