
ಪ್ರತಿದಿನ ಬೆಳಿಗ್ಗೆ ಇತರ ಉಪಹಾರದ ಬದಲು ರಾಗಿ ಅಂಬಲಿ ಕುಡಿಯುವುದರಿಂದ ದಿನವಿಡೀ ನಿಮ್ಮನ್ನು ಶಕ್ತಿಯುತರನ್ನಾಗಿ ಮತ್ತು ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ. ರಾಗಿ ಮುದ್ದೆ ತಿಂದರೆ ಎಂತಹ ಕೆಲಸವನ್ನಾದರೂ ಮಾಡುವ ಶಕ್ತಿ ನಮ್ಮ ದೇಹಕ್ಕೆ ದೊರೆಯುತ್ತದೆ ಎಂದು ಹಿಂದಿನ ಕಾಲದಿಂದಲೂ ಹಿರಿಯರು ಹೇಳುತ್ತಾ ಬಂದಿದ್ದಾರೆ. ಆದೇ ರೀತಿ ರಾಗಿ ಅಂಬಲಿ ಕುಡಿದರೂ ದೇಹಕ್ಕೆ ಉಪಯುಕ್ತ ಪೋಷಕಾಂಶಗಳು ದೊರೆಯುತ್ತದೆ.
ಏನೆಲ್ಲಾ ಪ್ರಯೋಜನ ಇದೆ?
ರಾಗಿ ಗಂಜಿಯಲ್ಲಿ ಮೆಕ್ಯುನೈನ್ ಅಮೈನೋ ಆಮ್ಲ ಹೆಚ್ಚಾಗಿ ಇದ್ದು ಇದು ದೇಹದ ಆರೋಗ್ಯವನ್ನು ಕಾಪಾಡುತ್ತದೆ. ರಾಗಿಯಲ್ಲಿ ಕ್ಯಾಲ್ಸಿಯಂ ಹೆಚ್ಚಿನ ಪ್ರಮಾಣದಲ್ಲಿ ಇದ್ದು ಮೂಳೆಗಳನ್ನು ವೃದ್ದಿ ಪಡಿಸುತ್ತದೆ.
ಮಹಿಳೆಯರಲ್ಲಿ ಹೆಚ್ಚಾಗಿ ರಕ್ತಹೀನತೆ ಕಂಡುಬಂದರೆ ರಾಗಿಯಲ್ಲಿ ಕೆಂಪು ರಕ್ತ ಕಣಗಳಿಗೆ ಬೇಕಾದ ಹಿಮೋಗ್ಲೋಬಿನ್ ಅಂಶವು ಜಾಸ್ತಿ ಇರಲಿದ್ದು ರಕ್ತ ಹೀನತೆ ಕಡಿಮೆ ಮಾಡುತ್ತದೆ.
ರಾಗಿಯಲ್ಲಿ ನೈಸರ್ಗಿಕ ಕೊಬ್ಬಿನಾಂಶವಿದ್ದು, ಇದು ಆರೋಗ್ಯದ ರಕ್ಷಣೆ ಮತ್ತು ತೂಕ ಸಮತೋಲನದಲ್ಲಿ ಇಡಲು ಸಹಕಾರಿ ಆಗುತ್ತದೆ.
ರಾಗಿ ಅಂಬಲಿ ಮಕ್ಕಳ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದು ಮೆದುಳನ್ನು ಸಕ್ರಿಯವಾಗಿ ಇಡಲು ಕ್ರಿಯಾತ್ಮಕವಾಗಿ ಕೆಲಸ ಮಾಡಲು ಸಹಾಯಕವಾಗಿದೆ.
ರಾಗಿಯು ಡಯಾಬಿಟಿಸ್ ರೋಗಿಗಳು ಮತ್ತು ಅಸ್ವಸ್ಥತೆಯ ಸಮಯದಲ್ಲಿ ತುಂಬಾ ಉತ್ತಮವೆಂದು ಹೇಳಲಾಗುತ್ತದೆ.
ರಾಗಿ ಸೇವನೆ ಮಾಡುವುದರಿಂದ ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಅತ್ಯುತ್ತಮವಾಗಿ ನಿರ್ವಹಿಸಿಕೊಳ್ಳಲು ಅನುಕೂಲವಾಗುತ್ತದೆ. ಅಲ್ಲದೇ ಕೊಲೆಸ್ಟ್ರಾಲ್ ಅಂಶಗಳು ಸಹ ಕಡಿಮೆಯಾಗುತ್ತದೆ.
ರಾಗಿ ಮಾಲ್ಟ್‌ನಲ್ಲಿ ಬಿ ಕಾಂಪ್ಲೆಕ್ಸ್ ವಿಟಮಿನ್‌ಗಳಾದ ಥಯಾಮಿನ್, ರೈಬೋಫ್ಲಾವಿನ್, ನಿಯಾಸಿನ್ ಮತ್ತು ಫೋಲಿಕ್ ಆಮ್ಲಗಳು ಇರಲಿದ್ದು ದೇಹದ ತೂಕವನ್ನು ಸಮತೋಲನದಲ್ಲಿ ಇಡುತ್ತದೆ.
ರಾಗಿ ಅಂಬಲಿ ಮಾಡಲು ಟಿಪ್ಸ್ ಇಲ್ಲಿದೆ
ರಾಗಿಯಿಂದ ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳಿದ್ದು ರಾಗಿಯನ್ನು ನಾವು ದೋಸೆ, ಮುದ್ದೆ ಅಂಬಲಿ, ಹೀಗೆ ವಿಧ ವಿಧವಾಗಿ ನಾವು ಸೇವನೆ ಮಾಡಲು ಅವಕಾಶ ಇದೆ. ರಾಗಿ ಅಂಬಲಿ ಮಾಡುದಾದ್ರೆ ಒಂದು ಪಾತ್ರೆಯಲ್ಲಿ ಮೂರು ಲೋಟದಷ್ಟು ನೀರನ್ನು ಹಾಕಿ ಅದಕ್ಕೆ ಬೇಕಾದ ಪ್ರಮಾಣದ ರಾಗಿ ಹಿಟ್ಟನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಮತ್ತು ಬೆಲ್ಲವನ್ನು ಸೇರಿಸಿ, ನಂತರ ಒಲೆಯ ಮೇಲೆ ಒಂದು ಪಾತ್ರೆ ಇಟ್ಟು, ರಾಗಿ ಹಿಟ್ಟಿನ ಮಿಶ್ರಣವನ್ನ ಗಂಟಾಗದಂತೆ ಕೈಯ್ಯಾಡಿಸುತ್ತಾ 5ನಿಮಿಷ ವರೆಗೆ ಕಾಯಿಸಿಕೊಳ್ಳಿ. ಈ ಬಿಸಿ ಬಿಸಿಯಾದ ರಾಗಿ ಅಂಬಲಿ ಕುಡಿದರೆ ದೇಹವನ್ನು ಬಹಳಷ್ಟು ತಂಪಾಗಿರುಸುತ್ತದೆ.
