Home ಆರೋಗ್ಯ ರಾತ್ರಿ ತಡವಾಗಿ ಊಟ ಮಾಡುವುದು ಆರೋಗ್ಯಕ್ಕೆ ಉತ್ತಮವಲ್ಲ..

ರಾತ್ರಿ ತಡವಾಗಿ ಊಟ ಮಾಡುವುದು ಆರೋಗ್ಯಕ್ಕೆ ಉತ್ತಮವಲ್ಲ..

0
ರಾತ್ರಿ ತಡವಾಗಿ ಊಟ ಮಾಡುವುದು ಆರೋಗ್ಯಕ್ಕೆ ಉತ್ತಮವಲ್ಲ..

ಸಾಮಾನ್ಯವಾಗಿ ಜನರು ಎಲ್ಲಾ ಕೆಲಸವನ್ನು ಮುಗಿಸಿ ರಾತ್ರಿ ಸಮಯವೇ ಸ್ವಲ್ಪ ಫ್ರೀ ಆಗಿರುವುದರಿಂದ ಮನೆಯವರ ಜೊತೆಗೆ ಕುಳಿತು ಹರಟೆ ಹೊಡೆಯುವುದು, ಇಲ್ಲವಾದಲ್ಲಿ ಟಿವಿ ನೋಡುವುದು ಅಥವಾ ಮೊಬೈಲ್ ನೊಡುತ್ತಾ ಕಾಲ ಕಳೆಯುತ್ತಾರೆ. ಹೀಗಾಗಿ ರಾತ್ರಿ ಊಟ ಮಾಡುವುದು ವಿಳಂಬವಾಗುತ್ತದೆ. ಆದರೆ, ವೈದ್ಯರು ಹೇಳುವ ಪ್ರಕಾರ ರಾತ್ರಿ ಊಟ ಸೇವನೆ ತಡವಾಗಿ ಆಗುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ರಾತ್ರಿ ಸಮಯದಲ್ಲಿ ಬೇಗ ಊಟ ಮಾಡುವುದರಿಂದ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹಾಗಾದರೆ ರಾತ್ರಿ ಊಟ ಬೇಗ ಮಾಡುವುದರ ಪ್ರಯೋಜನಗಳ ಬಗ್ಗೆ ಹೇಳ್ತೀವಿ ಮುಂದೆ ಓದಿ…

ಊಟದ ಪ್ರಮಾಣ ಕಡಿಮೆಯಾದರೂ ಕೂಡ ಊಟದ ನಡುವೆ ಅಂತರವಿರಬೇಕು ಮತ್ತು ತಪ್ಪದೆ ಸೇವಿಸಬೇಕು. ಹೆಚ್ಚಿನವರು ತಮ್ಮ ಊಟದ ನಡುವೆ ಮೂರರಿಂದ ಐದು ಗಂಟೆಗಳ ಅಂತರವನ್ನು ಅನುಸರಿಸುತ್ತಾರೆ, ಅದು ಆರೋಗ್ಯಕರ ಜೀವನಶೈಲಿಗೆ ಒಳ್ಳೆಯದು.

ರಾತ್ರಿಯ 7 ರಿಂದ 8 ಗಂಟೆಯ ಸಮಯದಲ್ಲಿ ಅಥವಾ ಸ್ವಲ್ಪ ಮುಂಚಿತವಾಗಿ ರಾತ್ರಿ ಊಟದ ಸೇವನೆಯು ಒಟ್ಟಾರೆ ಕ್ಯಾಲೋರಿ ಸೇವನೆಯನ್ನು ಬಹಳವಾಗಿ ಕಡಿಮೆ ಮಾಡುತ್ತದೆ. ನಾವು ದಿನವಿಡೀ ಸಕ್ರಿಯರಾಗಿರುವುದರಿಂದ, ಸಂಜೆಯ ವೇಳೆಗೆ ಸೇವಿಸಿರುವ ಎಲ್ಲಾ ಕ್ಯಾಲೊರಿಗಳು ಸುಡುತ್ತವೆ. ಆದರೆ, ರಾತ್ರಿಯಲ್ಲಿ ಯಾವುದೇ ಚಟುವಟಿಕೆ ಮಾಡದಿರುವುದರಿಂದ ಜೀರ್ಣಕ್ರಿಯೆ ನಿಧಾನವಾಗುತ್ತದೆ. ಇದರಿಂದ ರಾತ್ರಿ ಅತಿಯಾಗಿ ಸೇವಿಸಿದ ಆಹಾರವು ಕೊಬ್ಬಿನ ರೂಪದಲ್ಲಿ ಶೇಖರಣೆಯಾಗುತ್ತವೆ. ಆದ್ದರಿಂದ ಮಲಗುವ 2-3 ಗಂಟೆಗಳ ಒಳಗೆ ಆಹಾರ ಸೇವಿಸಿದರೆ, ಅದು ದೇಹದಲ್ಲಿ ಕೊಬ್ಬಿನಂತೆ ಶೇಖರಗೊಳ್ಳುತ್ತವೆ ಎಂಬುದನ್ನು ಗಮನದಲ್ಲಿಡಿ.

ದಿನವಿಡೀ ದಣಿದಿರುವುದರಿಂದ, ದೇಹಕ್ಕೆ ಶಕ್ತಿ ತುಂಬಿಸಲು ಊಟದ ಅಗತ್ಯವಿದೆ. ಆದ್ದರಿಂದ ರಾತ್ರಿಯ ಊಟವನ್ನು ಸಂಪೂರ್ಣವಾಗಿ ತ್ಯಜಿಸುವುದು ಅಥವಾ ರಾತ್ರಿಯ ಊಟದಲ್ಲಿ ಹೆಚ್ಚು ತಿನ್ನುವುದು ಎರಡೂ ಪ್ರಯೋಜನಕಾರಿಯಲ್ಲ. ಇದಕ್ಕಾಗಿ ರಾತ್ರಿ ಲಘುವಾಗಿ ಸೇವಿಸಲು ಪ್ರಯತ್ನಿಸಿ, ಹಾಗಂತ ರಾತ್ರಿ ಹಸಿವಿನಿಂದ ಎಚ್ಚರವಾಗುವಂತೆ ಇರಬಾರದು.

ರಾತ್ರಿಯ ಊಟದಲ್ಲಿ ಲಘು ಆಹಾರವನ್ನು ಅಭ್ಯಾಸ ಮಾಡುವಾಗ, ನಿಮ್ಮ ದೇಹವು ಏನು ಹೇಳುತ್ತಿದೆ ಎಂಬುದನ್ನು ಆಲಿಸಿ. ನಮ್ಮಲ್ಲಿ ಕೆಲವರು  ಮಧ್ಯಾಹ್ನ ಅತಿಯಾಗಿ ಆಹಾರ ಸೇವನೆ ಮಾಡುವುದರಿಂದ ರಾತ್ರಿ ಅವರಿಗೆ ಹಸಿವೆಯಾಗುವುದಿಲ್ಲ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಆಯಾ ಸಮಯಕ್ಕೆ ದೇಹಕ್ಕೆ ಒಗ್ಗುವಷ್ಟು ಆಹಾರವನ್ನು ಮಾತ್ರ ಸೇವನೆ ಮಾಡಬೇಕು.

ಆದ್ದರಿಂದ, ಲಘುವಾಗಿ ತಿನ್ನುವುದರ ಜೊತೆಗೆ ನೀವು ಏನು ಆಹಾರ ತಿನ್ನುತ್ತೀರಿ ಎಂಬುದು ಸಹ ಮುಖ್ಯವಾಗಿದೆ. ಪಿಷ್ಟಯುಕ್ತ ತರಕಾರಿಗಳು, ಮೀನು, ಮೊಟ್ಟೆಗಳು, ರಾಗಿಗಳೊಂದಿಗೆ ಲಘು ಭೋಜನವು ಒಳ್ಳೆಯ ಉಪಾಯವಾಗಿದ್ದರೂ ಸಹ, ಇನ್ನೊಂದು ವಿಷಯವೆಂದರೆ ಊಟಕ್ಕೆ ಸೇವಿಸುವ ಪ್ರೋಟೀನ್ ಪ್ರಮಾಣವನ್ನು ಅರ್ಧಕ್ಕೆ ಇಳಿಸುವುದು ಮತ್ತು ನಿಮ್ಮ ಲಘು ಭೋಜನದ ಅನುಭವವು ಹೇಗಿದೆ ಎಂಬುದನ್ನು ನೋಡುವುದು ಮುಖ್ಯವಾಗಿದೆ.

 

LEAVE A REPLY

Please enter your comment!
Please enter your name here