Home ಆರೋಗ್ಯ ದೇಹದ ತೂಕ ಹೆಚ್ಚಿಸಿಕೊಳ್ಳಲು ಇಲ್ಲಿದೆ ಕೆಲವೊಂದು ಟಿಪ್ಸ್

ದೇಹದ ತೂಕ ಹೆಚ್ಚಿಸಿಕೊಳ್ಳಲು ಇಲ್ಲಿದೆ ಕೆಲವೊಂದು ಟಿಪ್ಸ್

0
ದೇಹದ ತೂಕ ಹೆಚ್ಚಿಸಿಕೊಳ್ಳಲು ಇಲ್ಲಿದೆ ಕೆಲವೊಂದು ಟಿಪ್ಸ್

ಹೆಚ್ಚಿನ ಜನರು ತೂಕ ಇಳಿಕೆ ಮಾಡುವ ಬಗ್ಗೆ ಡಯಟ್ ಪ್ಲಾನ್ ಅನ್ನು ಬೆಳೆಸಿ ಕೊಂಡಿರುತ್ತಾರೆ. ಆದರೆ ತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರ ಜೊತೆಗೆ ತೂಕ ಹೆಚ್ಚಾಗಬೇಕು ಎಂದು ಪ್ರಯತ್ನ ಮಾಡುವವರು ಕೂಡ ಹೆಚ್ಚು ಮಂದಿ ಇದ್ದಾರೆ. ಅಧಿಕ ತೂಕ ಇರುವುದು ಎಷ್ಟು ಅಪಾಯವೋ ಅತ್ಯಂತ ಕಡಿಮೆ ತೂಕ ಇರುವುದು ಕೂಡ ಅಷ್ಟೇ ಅಪಾಯಕಾರಿ ಎನ್ನಬಹುದು. ದೇಹ ಸರಿ ಪ್ರಮಾಣದಲ್ಲಿ ತೂಕ ಇದ್ದರೆ ಮಾತ್ರ ಅಂದ್ರೆ ವಯಸ್ಸಿಗೆ ಸರಿಯಾಗಿ ತೂಕ ಇರುವುದು ಸಹ ಮುಖ್ಯವಾಗುತ್ತದೆ.ದೇಹದಲ್ಲಿ ಕಾರ್ಬೋಹೈಡ್ರೇಟ್‌ ಮತ್ತು ಕೊಬ್ಬು ಅಧಿಕವಾಗಿರುವ ಆಹಾರವನ್ನು ಸೇವಿಸುವುದು ಆರೋಗ್ಯಕ ರವಾಗಿ ತೂಕವನ್ನು ಹೆಚ್ಚಿಸಿಕೊಳ್ಳುವ ಅತ್ಯುತ್ತಮ ವಿಧಾನ ಆಗಿದೆ.

ಈ ವಿಧಾನ‌ ಬೆಳೆಸಿಕೊಳ್ಳಿ

ಕೆಲವರು ಷ್ಟೇ ತಿಂದರೂ ಅವರು ದಪ್ಪ ಅಥವಾ ಆರೋಗ್ಯವಂತರಾಗಿ ಕಾಣದೆ ಸಣ್ಣಕೆ ಕಾಣಿಸುತ್ತಾರೆ. ಇದಕ್ಕಾಗಿ ನೀವು ಬೇಗನೆ ದಪ್ಪವಾಗ ಬೇಕು ಎಂದು ಇದ್ದರೆ ‌ಹಾಲು, ಮೊಸರು, ಬೆಣ್ಣೆ, ಉತ್ಪನ್ನಗಳನ್ನು ಸೇವನೆ ಮಾಡಬಹುದಾಗಿದೆ. ಇದು ನಿಮಗೆ ದಪ್ಪಗಾಗಲು ಸಹಾಯ ಮಾಡುತ್ತದೆ

ಇನ್ನೂ ತೂಕ ಹೆಚ್ಚು ಮಾಡಿಕೊಳ್ಳಲು ಬೆಲ್ಲ ಮತ್ತು ತುಪ್ಪ ಉತ್ತಮ ಪದಾರ್ಥಗಳು. ಇದರ ಸೇವನೆಯಿಂದ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದಾಗಿದೆ.

ಒಣದ್ರಾಕ್ಷಿ ಹಣ್ಣುಗಳಲ್ಲಿ ಉತ್ತಮ‌ ಪೋಷಕಾಂಶಗಳು ಇದ್ದು, ಇದು ಅಪಾರ ಪ್ರಮಾಣದ ಕ್ಯಾಲೋರಿ ಅಂಶಗಳನ್ನು ದೇಹಕ್ಕೆ ನೀಡುತ್ತದೆ.ಇದು ದೇಹದ ತೂಕವನ್ನು ಹೆಚ್ಚು ಮಾಡುವಲ್ಲಿ ಸಹಕಾರಿ ಯಾಗುತ್ತದೆ.

ಬಾದಾಮಿ ಹಾಲಿನ ಜೊತೆ ಹಸಿ ಅಥವಾ ಒಣ ಕರ್ಜುರ ಮತ್ತು ಒಣದ್ರಾಕ್ಷಿ ಹಾಕಿ ಸೇವನೆ ಮಾಡುವ ಅಭ್ಯಾಸ ಇಟ್ಟುಕೊಳ್ಳಬೇಕು.

ಕೆಲವರಿಗೆ ತೆಳ್ಳಗಿರುವುದು ವಂಶ ಪಾರಂಪರಿಕವಾಗಿ ಬಂದಿರುವಂತದ್ದು ಹಾಗಾಗಿ ಅಂತಹ ಜನರು ಎಷ್ಟೆ ತಿಂದರೂ ದಪ್ಪ ವಾಗುವುದಿಲ್ಲ. ತೂಕ ಕಡಿಮೆಯಾಗಲು ಅಜೀರ್ಣ ಕೂಡ ಕಾರಣ ವಾಗಿದ್ದು, ಸೊಪ್ಪು, ತರಕಾರಿ, ಹಣ್ಣನ್ನು ಹೆಚ್ಚಾಗಿ ತಿಂದರೆ ನಿಮ್ಮ ತೂಕವನ್ನು ಹೆಚ್ಚು ಮಾಡಿಕೊಳ್ಳಬಹುದಾಗಿದೆ.

ಅಷ್ಡೆ ಅಲ್ಲದೆ ನೀವು ಎಣ್ಣೆಯಿಂದ ನಿಮ್ಮ ದೇಹದ ಮಸಾಜ್ ಮಾಡಬೇಕು. ಎಣ್ಣೆ ಮಸಾಜ್‌ನಿಂದ ನಿಮ್ಮ ಹೊಟ್ಟೆಯ ಸಮಸ್ಯೆ, ವಾಯು ಸಮಸ್ಯೆ ಸರಿಯಾಗುತ್ತದೆ. ಇದರಿಂದ ತೂಕ ಸಹ ಹೆಚ್ಚಾಗುತ್ತದೆ

ಇನ್ನೂ ನೀವು ಅಕ್ಕಿ, ಧಾನ್ಯಗಳು, ಓಟ್ಸ್, ಗಿಣ್ಣು, ಆವಕಾಡೊ, ತೆಂಗಿನ ಎಣ್ಣೆ, ಮೊಟ್ಟೆ, ಕುಂಬಳಕಾಯಿ ಇತ್ಯಾದಿ ಸೇವಿಸುವುದರಿಂದ ತೂಕ ಹೆಚ್ಚಾಗುತ್ತದೆ.

ಪ್ರತಿದಿನ ಆಲುಗಡ್ಡೆ ಸೇವಿಸಿದರೆ ನಿಮ್ಮ‌ ತೂಕವನ್ನು ಹೆಚ್ಚು ಮಾಡಿಕೊಳ್ಳಬಹುದಾಗಿದೆ.ಇದನ್ನು ಸೇವಿಸುದರಿಂದ ನಿಮ್ಮ ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚುತ್ತದೆ. ಬೇಯಿಸಿದ ಆಲೂಗಡ್ಡೆಯನ್ನು ತಿನ್ನುವುದರಿಂದ ದೇಹಕ್ಕೆ ಬಹಳ ಒಳ್ಳೆಯದು.

 

LEAVE A REPLY

Please enter your comment!
Please enter your name here