
ಈಗಾಗಲೇ ಮಳೆಗಾಲ ಆರಂಭವಾಗಿದೆ. ತಂಪಿನ ವಾತವರಣ ಇದ್ದರೂ ಈ ಸಂದರ್ಭದಲ್ಲಿ ಆರೋಗ್ಯ ಕೆಡುವುದು ಸಾಮಾನ್ಯ. ಅದರಲ್ಲೂ ಜ್ವರ, ಶೀತ, ಕೆಮ್ಮು ಸಾಮಾನ್ಯವಾಗಿ ಬರಲಿದೆ. ಹಾಗೆಯೇ ಮಳೆಗಾಲದಲ್ಲಿ ತಿನ್ನುವ ಆಹಾರದ ಬಗ್ಗೆಯೂ ನಾವು ಕಾಳಜಿ ವಹಿಸಬೇಕು. ಕೆಲವೊಂದು ಆಹಾರ ಕ್ರಮಗಳು ನಮ್ಮ ಆರೋಗ್ಯಕ್ಕೆ ತೊಂದರೆ ಮಾಡೋದು ಖಂಡಿತ ಹಾಗಾಗಿ ಈ ಬಗ್ಗೆ ಗಮನ ವಹಿಸಿ.
ಇದಕ್ಕೆ ಬ್ರೇಕ್ ನೀಡಿ
*ಇಂದು ಹೆಚ್ಚಾಗಿ ಜನರು ತರಕಾರಿ, ಹಣ್ಣು ತಿನ್ನುತ್ತಾರೆ. ಹಾಗಾಗಿ ಬೀದಿ ಬದಿ ರಸ್ತೆ ಬದಿ ಮಾರುವವರ ಸಂಖ್ಯೆ ಹೆಚ್ಚಾಗಿದೆ. ಬೀದಿಯಲ್ಲಿ ಕತ್ತರಿಸಿ ಇಟ್ಟ ಹಣ್ಣುಗಳನ್ನು ತಪ್ಪಿಯೂ ಸೇವಿಸಬೇಡಿ. ಕತ್ತರಿಸಿ ಮಾರಾಟ ಮಾಡುವ ಹಣ್ಣುಗಳನ್ನು ತಿಂದರೆ ಮಳೆಗಾಲದಲ್ಲಿ ಬಹಳಷ್ಟು ಸಮಸ್ಯೆ ಆಗಲಿದೆ.
*ಹಾಲು, ಮೊಸರು ಮತ್ತು ಪನ್ನೀರ್‌ನಂತಹ ಉತ್ಪನ್ನಗಳು ಮಳೆಗಾಲದ ವಾತಾವರಣದಲ್ಲಿ ಬೇಗನೆ ಕೆಡುತ್ತವೆ.
*ಮಳೆಗಾಲದಲ್ಲಿ ಮಾಂಸಾಹಾರ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದರಿಂದ ಕೂಡ ಆರೋಗ್ಯ ಕೆಡುತ್ತದೆ.
*ಹುಳಿ ಆಹಾರಗಳಾದ ಉಪ್ಪಿನಕಾಯಿ, ಚಟ್ನಿ, ಹುಳಿ ಹುಣಸೆಹಣ್ಣು ಮುಂತಾದವುಗಳನ್ನು ನೀವು ಮಳೆಗಾಲ ಸಮಯದಲ್ಲಿ ತಪ್ಪಿಸಬೇಕು
*ಜನರು ಮಳೆಗಾಲದಲ್ಲಿ ಎಣ್ಣಿ ತಿಂಡಿ ಇಷ್ಟ ಪಡುತ್ತಾರೆ. ಮನೆಗಳಲ್ಲಿ ಚಹಾದೊಂದಿಗೆ ಪಕೋಡ, ಸಮೋಸಾಗಳನ್ನು ತಿನ್ನಲು ಬಯಸುತ್ತಾರೆ. ಆದರೆ ಈ ಋತುವಿನಲ್ಲಿ ಎಣ್ಣೆಯುಕ್ತ ಆಹಾರವನ್ನು ಸೇವಿಸಬಾರದು
*ಮಳೆಗಾಲದಲ್ಲಿ ಸಲಾಡ್ ತಿನ್ನುವುದನ್ನು ದೂರವಿಡಬೇಕು. ಏಕೆಂದರೆ ಸಲಾಡ್ ಗಳಿಗೆ ಬಳಸುವ ಹಸಿ ತರಕಾರಿಗಳು ಮಳೆಗಾಲದಲ್ಲಿ ಬ್ಯಾಕ್ಟೀರಿಯಾಕ್ಕೆ ಗುರಿಯಾಗುತ್ತವೆ.
*ಅಣಬೆಗಳು ಸೇವಿಸುವುದು ಸಹ ಮಳೆಗಾಲದಲ್ಲಿ ತಪ್ಪು. ಅಣಬೆ ತಿನ್ನುವುದರ ಮೂಲಕ ಸೋಂಕಿನ ಅಪಾಯ ಹೆಚ್ಚಾಗುವ ಸಾಧ್ಯತೆ ಇರಲಿದೆ.
ಈ ಆಹಾರ ಉತ್ತಮ
*ಮಳೆಗಾಲದಲ್ಲಿ ತೇವಾಂಶ ಹೆಚ್ಚಿರುವ ಕಾರಣ ಬೆಚ್ಚಗಿರುವ ಆಹಾರವನ್ನು ಸೇವಿಸಿ ಹಾಗಾಗಿ ಸೂಪ್, ಮಸಾಲಾ ಟೀ, ಗ್ರೀನ್ ಟೀ, ಸಾರು, ದಾಲ್, ಮುಂತಾದ ಸಾಕಷ್ಟು ಬೆಚ್ಚನೆ ಪದಾರ್ಥಗಳ ಸೇವನೆ ಮಾಡಿ
*ಅರಿಶಿಣ ಮತ್ತು ಶುಂಠಿ ನಂಜು ನಿರೋಧಕಗಳು. ಇವು ಉರಿಯೂತ ವಿರೋಧ ಅಂಶಗಳನ್ನೂ ಹೊಂದಿದ್ದು ದೇಹಕ್ಕೆ ಉತ್ತಮ
*ಪೀಚ್, ಪ್ಲಮ್, ಚೆರ್ರಿ, ನೇರಳೆ, ದಾಳಿಂಬೆಯಂತಹ ಮಳೆಗಾಲದಲ್ಲಿ ಸಿಗುವ ಹಣ್ಣುಗಳಲ್ಲಿ ವಿಟಮಿನ್ ಎ ಮತ್ತು ಸಿ, ಫೈಬರ್ ಅಂಶ ಇರಲಿದ್ದು ಹಣ್ಣಿನ ಸೇವನೆಗೆ ಅಗತ್ಯತೆ ನೀಡಿ.
