
ಸಾಮಾನ್ಯವಾಗಿ ರಾತ್ರಿಯ ಸಮಯ ಟಿವಿಯನ್ನು ನೋಡುವಾಗ ಎಲ್ಲರೂ ಕೂಡ ಮಾಡುವ ದೊಡ್ಡ ತಪ್ಪು ಎಂದರೆ ಲೈಟ್ ಎಲ್ಲಾ ಆಫ್ ಮಾಡಿ ಕೇವಲ ಟಿವಿಯನ್ನು ಮಾತ್ರ ಆನ್ ಮಾಡಿ ನೋಡುತ್ತಿರುತ್ತಾರೆ. ಕೆಲವರು ಕರೆಂಟ್ ಬಿಲ್ ಉಳಿಸಲು ಹೋಗಿ ಈ ರೀತಿ ಮಾಡುತ್ತಾರೆ. ಹೀಗೆ ಮಾಡುವುದರಿಂದ ಕಣ್ಣಿನ ದೃಷ್ಟಿಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಕಣ್ಣಿನ ದೃಷ್ಟಿಯ ಮೇಲೆ ದುಷ್ಪರಿಣಾಮ ಬೀರುವುದರಿಂದ ಡಬಲ್ ಖರ್ಚುಗಳಾಗುತ್ತವೆ. ಹೀಗಾಗಿ ರಾತ್ರಿ ಟಿವಿಯನ್ನು ನೋಡುವಾಗ ಕೋಣೆಯ ಲೈಟ್ ಅನ್ನು ಆಫ್ ಮಾಡಿ ಟಿವಿಯನ್ನು ನೋಡಬಾರದು. ಯಾಕೆಂದರೆ ಟಿವಿಯಿಂದ ಹೊರಬರುವ ಬೆಳಕಲ್ಲಿ ಸ್ವಲ್ಪ ಪ್ರಮಾಣದಲ್ಲಿ ಅತಿನೇರಳೆ ಕಿರಣಗಳು ಇರುವುದರಿಂದ ಕಣ್ಣಿನಲ್ಲಿರುವ ರೆಟೀನಾಗೆ ಹಾನಿಯುಂಟು ಮಾಡುತ್ತದೆ.
ಕೋಣೆಯಲ್ಲಿ ಲೈಟ್ ಇದ್ದರೆ ಆ ಬೆಳಕಿನ ಕಿರಣಗಳ ಜೊತೆ ಅತಿನೇರಳೆ ಕಿರಣಗಳು ಒಂದಾಗಿ ಕಣ್ಣಿನ ಮೇಲೆ ಬೀಳುವುದಾಗಲಿ, ರೆಟೀನಾಗೆ ಹಾನಿ ಉಂಟು ಮಾಡುವಂತಹ ತೀವ್ರತೆ ಮಾಡುತ್ತದೆ. ಹಗಲಿನಲ್ಲಿ ಆದರೆ ಸೂರ್ಯನ ಕಿರಣಗಳು ಇದ್ದೇ ಇರುತ್ತದೆ. ಹೀಗಾಗಿ ಹಗಲಿನ ಸಮಯದಲ್ಲಿ ಟಿವಿ ನೋಡುವುದರಿಂದ ಕಣ್ಣಿನ ದೃಷ್ಟಿಯ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಆದರೆ ಟಿವಿಯನ್ನು ಕನಿಷ್ಠ ಐದು ಅಡಿಗಳ ದೂರದಿಂದ ನೋಡಬೇಕು.
