Home ಆರೋಗ್ಯ ಹೊಟ್ಟೆಯಲ್ಲಿನ ಗ್ಯಾಸ್ ಸಮಸ್ಯೆ ನಿವಾರಣೆಗೆ ಲಾವಂಚ ರಾಮಬಾಣ..!

ಹೊಟ್ಟೆಯಲ್ಲಿನ ಗ್ಯಾಸ್ ಸಮಸ್ಯೆ ನಿವಾರಣೆಗೆ ಲಾವಂಚ ರಾಮಬಾಣ..!

0
ಹೊಟ್ಟೆಯಲ್ಲಿನ ಗ್ಯಾಸ್ ಸಮಸ್ಯೆ ನಿವಾರಣೆಗೆ ಲಾವಂಚ ರಾಮಬಾಣ..!

ಈ ಮನೆಮದ್ದುಗಳೇ ಹಾಗೆ. ನಮ್ಮ ಸುತ್ತಮುತ್ತ ಬೆಳೆಯುವ ಕೆಲವೊಂದು ಗಿಡಗಳಲ್ಲಿ ಅನೇಕ ಔಷಧೀಯ ಗುಣಗಳಿರುತ್ತವೆ. ಆದರೆ, ಇದರ ಬಗ್ಗೆ ನಮಗೆ ಅರಿವಿರುವುದಿಲ್ಲ. ಕೆಲವೊಂದು ಗಿಡಗಳ ಬಗ್ಗೆ ನಮಗೆ ಅರಿವೇ ಇರುವುದಿಲ್ಲ. ಅಂತಹುದೇ ಒಂದು ಗಿಡದ ಬೇರು ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಬಹಳ ಉತ್ತಮ ಕೆಲಸವನ್ನು ಮಾಡುತ್ತದೆ. ಅದುವೇ ಈ ಲಾವಂಚದ ಬೇರು. ಇದರ ಹೆಸರನ್ನು ಕೆಲವರು ಕೇಳಿಯೂ ಇರಲಿಕ್ಕಿಲ್ಲ. ಆದರೆ ಇದರಿಂದ ಅನೇಕ ಪ್ರಯೋಜನಗಳೊವೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ..


ಇತ್ತೀಚಿಗೆ ಜನರು ಲಾವಂಚ ಅಥವಾ ಮಡಿವಾಳ ಹುಲ್ಲಿನ ಬೇರುಗಳನ್ನು ಬಳಸುವುದನ್ನೇ ಮರೆತು ಬಿಟ್ಟಿದ್ದಾರೆ. ಫ್ರಿಡ್ಜ್ ಇಲ್ಲದ ಕಾಲದಲ್ಲಿ ದೇಹವನ್ನು ತಂಪಾಗಿಸಲು ಲಾವಂಚ ಬಳಸಲಾಗುತ್ತಿತ್ತು. ಅದರಲ್ಲಿಯೂ ವಿಶೇಷವಾಗಿ ಬೇಸಿಗೆ ಕಾಲದಲ್ಲಿ ಲಾವಂಚ ಬಳಸುವುದರಿಂದ ಬೇಸಿಗೆಯಲ್ಲಿ ಬರುವ ರೋಗಗಳಿಂದ ರಕ್ಷಣೆ ಸಿಗುತ್ತಿತ್ತು. ಲಾವಂಚ ನೀರನ್ನು ಸೇವಿಸುವ ಮೂಲಕ ದೇಹವನ್ನು ತಂಪಾಗಿರಿಸಿಕೊಳ್ಳಬಹುದು. ಹಾಗಾದರೆ ಬನ್ನಿ ಲಾವಂಚ ನೀರು ಸೇವನೆಯಿಂದಾಗುವ ಪ್ರಯೋಜನಗಳೇನು ತಿಳಿದುಕೊಳ್ಳೋಣ.

ಬೇಸಿಗೆ ಕಾಲದಲ್ಲಿ ಲಾವಂಚ ನೀರನ್ನು ಹೇಗೆ ಸೇವಿಸಬೇಕು?
ಮೊದಲಿಗೆ ಲಾವಂಚ ಬೇರಿನ ಒಂದು ಸೂಡನ್ನು ಮಣ್ಣಿನ ಗಡಿಗೆಯಲ್ಲಿರಿಸಿ, ಅದನ್ನು ನೀರಿನಿಂದ ತುಂಬಿ. ಮೂರು ದಿನಗಳವರೆಗೆ ಲಾವಂಚ ಸೂಡನ್ನು ನೀವು ನೀರಿನಲ್ಲಿರಿಸಬಹುದು ಮತ್ತು ಅದರ ನೀರನ್ನು ಸೇವಿಸಬಹುದು. ಮೂರು ದಿನಗಳ ಬಳಿಕ ಮಣ್ಣಿನ ಪಾತ್ರೆಯಿಂದ ನೀರನ್ನು ಖಾಲಿ ಮಾಡಿ, ಗಡಿಗೆಯನ್ನು ಬಿಸಿಲಲ್ಲಿ ಒಣಗಿಸಿ, ಮತ್ತೆ ಅದನ್ನು ನೀರಿನಿಂದ ತುಂಬಿ ಅದರಲ್ಲಿ ಮತ್ತೆ ಆ ಲಾವಂಚ ಸೂಡನ್ನು ಹಾಕಬೇಕು. ಈ ರೀತಿ ಹಲವು ಬಾರಿ ಮಾಡಿದಾಗ ಸೂಡು ಮಣ್ಣಿನ ಪಾತ್ರೆಯ ತಳಭಾಗಕ್ಕೆ ತಲುಪುತ್ತದೆ.

ಬೇಸಿಗೆಯಲ್ಲಿ ದೇಹದ ದುರ್ವಾಸನೆ ಒಂದು ಸಾಮಾನ್ಯ ಸಮಸ್ಯೆಯಾಗಿರುತ್ತದೆ, ಇದನ್ನು ತಪ್ಪಿಸಲು ನೀವು ಲಾವಂಚ ನೀರನ್ನು ಸೇವಿಸಬೇಕು. ಲಾವಂಚ ನೀರನ್ನು ಕುಡಿದರೆ ದೇಹದಲ್ಲಿರುವ ದುರ್ವಾಸನೆಯ ಸಮಸ್ಯೆ ದೂರವಾಗುತ್ತದೆ. ಹೊಟ್ಟೆಯನ್ನು ಸ್ವಚ್ಛಗೊಳಿಸಲು ನೀವು ಲಾವಂಚ ನೀರನ್ನು ಕುಡಿಯಬಹುದು. ಇದು ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಮಲಬದ್ಧತೆಯಿಂದ ಬಳಲುತ್ತಿರುವವರು ಲಾವಂಚ ನೀರನ್ನು ಕುಡಿಯಬೇಕು. ಲಾವಂಚ ನೀರು ಹೊಟ್ಟೆಯನ್ನು ತಂಪಾಗಿಸುತ್ತದೆ ಮತ್ತು ಹೊಟ್ಟೆಯಲ್ಲಿನ ಗ್ಯಾಸ್, ಮಲಬದ್ಧತೆ ಇತ್ಯಾದಿ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ.

ನೀವು ಲಾವಂಚ ಬೇರಿನ ನೀರನ್ನು ಸೇವಿಸಿದರೆ ಬೇಸಿಗೆಯಲ್ಲಿನ ಕೂದಲು ಉದುರುವಿಕೆ ಸಮಸ್ಯೆ ದೂರಾಗುತ್ತದೆ. ಲಾವಂಚ ಬೇರುಗಳನ್ನು ನೀರಿನಲ್ಲಿ ಹಾಕಿ ಕುದಿಸಿ ಭಟ್ಟಿ ಇಳಿಸುವ ಮೂಲಕ ಅದರಿಂದ ತೈಲವನ್ನು ತಯಾರಿಸಲಾಗುತ್ತದೆ. ಈ ತೈಲವನ್ನು ಸಾಮಾನ್ಯವಾಗಿ ಸಾಬೂನು, ಸುಗಂಧವರ್ಧಕ, ಅಗರಬತ್ತಿ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಈ ತೈಲವನ್ನು ಮೈ-ಕೈ ನೋವು ನಿವಾರಿಸಲು ಕೂಡ ಬಳಸಲಾಗುತ್ತದೆ. ಇದಲ್ಲದೆ ವಾತ, ಹೊಟ್ಟೆಯಲ್ಲಿ ಜಂತುವಿನ ಸಮಸ್ಯೆ, ಹೊಟ್ಟೆಶೂಲೆ ಇತ್ಯಾದಿಗಳ ಸಮಸ್ಯೆ ನಿವಾರಣೆಗೆ ಲಾವಂಚ ಬೆರೆಸಿದ ನೀರನ್ನು ಕುದಿಸಿ, ನಂತರ ಸೋಸಿ ಕುಡಿಯಬಹುದು. ಹಲವಾರು ಆಯುರ್ವೇದ ಔಷಧಿಗಳಲ್ಲಿ ಇದನ್ನು ಬಳಸಲಾಗುತ್ತದೆ.

 

LEAVE A REPLY

Please enter your comment!
Please enter your name here