
ಸಾಮಾನ್ಯವಾಗಿ ಮನುಷ್ಯನ ದೇಹದ ಪ್ರತಿಯೊಂದು ಅಂಗವೂ ಕೂಡ ದೇಹದಲ್ಲಿ ಏನಾದರೂ ಅನಾರೋಗ್ಯ ಕಾಣಿಸಿಕೊಳ್ಳುವುದರ ಮುನ್ಸೂಚನೆಯನ್ನು ನೀಡುತ್ತದೆ. ಆಗಿನ ಕಾಲದಲ್ಲಿ ದೇಹದಲ್ಲಿ ರಕ್ತದ ಪ್ರಮಾಣ ಎಷ್ಟಿದೆ ಎನ್ನವುದನ್ನು ಕಂಡು ಹಿಡಿಯಲು ಕಣ್ಣನ್ನು ಗಮನಿಸುತ್ತಿದ್ದರು. ಆದರೆ ಇಂದಿನ ದಿನಮಾನದಲ್ಲಿ ಎಲ್ಲರೂ ಕೂಡ ಪ್ರತಿಯೊಂದು ಚೆಕಪ್ ಗೂ ವೈದ್ಯರ ಬಳಿ ಹೋಗುತ್ತಾರೆ. ಇದರ ಬದಲಾಗಿ ಮನೆಯಲ್ಲಿಯೇ ಕೆಲವೊಂದು ಲಕ್ಷಣವನ್ನು ತಿಳಿದುಕೊಳ್ಳುವುದು ಹೇಗೆ ಅಂತಾ ಹೇಳ್ತೀವಿ ಮುಂದಿನ ಮಾಹಿತಿ ಓದಿ.
ನಮ್ಮ ನಾಲಿಗೆ ಬಿಳುಚಾಗುವುದು ಕೂಡ ಒಂದು ಅನಾರೋಗ್ಯದ ಲಕ್ಷಣವಾಗಿದೆ. ಬಿಳಿ ನಾಲಿಗೆಯು ಒಂದು ರೋಗಲಕ್ಷಣವಾಗಿದ್ದು, ನಿಮ್ಮ ನಾಲಿಗೆಯ ಮೇಲ್ಭಾಗದಲ್ಲಿ ಅಥವಾ ಎಲ್ಲಾ ಭಾಗಗಳಲ್ಲಿ ದಪ್ಪವಾದ ಬಿಳಿ ಲೇಪನವು ಬೆಳೆಯುತ್ತದೆ. ಬಿಳಿ ನಾಲಿಗೆಯು ಕಡಿಮೆ ಪ್ರತಿರಕ್ಷಣಾ ವ್ಯವಸ್ಥೆಯ ಸೂಚಕವಾಗಿದೆ. ನಿಮ್ಮ ಚರ್ಮ, ಲೋಳೆಯ ಪೊರೆಗಳು ಮತ್ತು ನಿಮ್ಮ ದೇಹದಾದ್ಯಂತ ನೈಸರ್ಗಿಕವಾಗಿ ಇರುವ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳೊಂದಿಗೆ ಇದು ಸಂಬಂಧ ಹೊಂದಿದೆ.
ಸಾಮಾನ್ಯವಾಗಿ, ಈ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಿದ್ದರೆ, ಅವುಗಳ ನಡುವಿನ ಸಮತೋಲನವು ಅಡ್ಡಿಪಡಿಸಬಹುದು, ಇದು ನಿಮ್ಮ ನಾಲಿಗೆಯ ಮೇಲೆ ಬಿಳಿ ಬಣ್ಣವನ್ನು ಉಂಟುಮಾಡುವ ಮೂಲಕ ನಿಮಗೆ ಮುನ್ಸೂಚನೆ ನೀಡುತ್ತದೆ.
ಇದರ ನಿವಾರಣೆಗೆ ಸಾಕಷ್ಟು ಜೀವಸತ್ವಗಳು, ಖನಿಜಗಳು ಮತ್ತು ಫೈಬರ್ ನಂಥ ಆರೋಗ್ಯಕರ ಆಹಾರ ಸೇವಿಸಬಹುದಾಗಿದೆ. ಹೆಚ್ಚು ನೀರು ಕುಡಿಯುವುದರಿಂದ, ಮೃದುವಾದ ಬ್ರಶ್ ಬಳಸಿ ಹಲ್ಲುಜ್ಜುವುದರಿಂದ, ಸಾಕಷ್ಟು ವ್ಯಾಯಾಮವನ್ನು ಮಾಡುವುದರಿಂದ ಈ ಸಮಸ್ಯೆಯನ್ನು ನಿವಾರಣೆ ಮಾಡಬಹುದಾಗಿದೆ
