Home ಆರೋಗ್ಯ ಉಗುರು ಹಳದಿ ಬಣ್ಣಕ್ಕೆ ತಿರುಗುತ್ತಿದ್ದರೆ ಇರಲಿ ಎಚ್ಚರ

ಉಗುರು ಹಳದಿ ಬಣ್ಣಕ್ಕೆ ತಿರುಗುತ್ತಿದ್ದರೆ ಇರಲಿ ಎಚ್ಚರ

0
ಉಗುರು ಹಳದಿ ಬಣ್ಣಕ್ಕೆ ತಿರುಗುತ್ತಿದ್ದರೆ ಇರಲಿ ಎಚ್ಚರ

ಇಂದಿನ ದಿನಗಳಲ್ಲಿ ಮಧುಮೇಹಗಳಿಗೆ ತಮ್ಮ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎನ್ನುವುದರ ಬಗ್ಗೆ ಸರಿಯಾಗಿ ತಿಳಿದಿರುವುದಿಲ್ಲ. ಏಕೆಂದರೆ ಅವರು ತಮಗೆ ಮಧುಮೇಹ ಬಂದಿದೆ ಎಂದು ತುಂಬಾ ಯೋಚಿಸುತ್ತಾ ನರಳುತ್ತಾ ಇರುತ್ತಾರೆ. ಈ ಕಾಯಿಲೆಯ ಬಗ್ಗೆ ಹೆಚ್ಚು ಗಮನಹರಿಸಿ ಏಕೆಂದರೆ ಒಂದೊಂದು ಸಲ ಇದು ನಮ್ಮ ಜೀವಕ್ಕೆ ಕುತ್ತು ತರುತ್ತದೆ. ಕೆಲವೊಂದು ಚಿಕ್ಕ ಲಕ್ಷಣವನ್ನು ನಿರ್ಲಕ್ಷಿಸಿದರೂ ಕೂಡ ಅದರಿಂದ ನಮಗೆ ಅಪಾಯಗಳೇ ಜಾಸ್ತಿ.

ಉಗುರು ಹಳದಿ ಬಣ್ಣಕ್ಕೆ ತಿರುಗುವುದರಿಂದ ನಮಗೆ ಅನೇಕ ಕಾಯಿಲೆಗಳು ಬರುತ್ತವೆ. ನಮ್ಮ ಉಗುರಿನ ಮೇಲೆ ಇರುವ ಬಣ್ಣ ಬದಲಾಗುತ್ತಿದ್ದರೆ, ಇದು ನಮ್ಮ ದೇಹವು ಇತರೆ ಕಾಯಿಲೆಗಳಿಗೆ ತುತ್ತಾಗುವಂತೆ ಮಾಡುತ್ತಿದೆ ಎನ್ನುವುದನ್ನು ತೋರಿಸುವ ಮುನ್ಸೂಚನೆಯಾಗಿದೆ. ಆದ್ದರಿಂದ ದೇಹದ ಯಾವ ಭಾಗದಲ್ಲಿ ಯಾವುದೇ ತರಹ ಸೂಚನೆ ನೋಡಿದರೂ ಸಹ ಅದನ್ನು ನಿರ್ಲಕ್ಷಿಸಬೇಡಿ. ಕೂಡಲೇ ವೈದ್ಯರ ಬಳಿ ಹೋಗಿ ಅವರಲ್ಲಿ ತಮ್ಮಲಾದ ಬದಲಾವಣೆಗಳನ್ನು ಹೇಳಿಕೊಳ್ಳಿ ಏಕೆಂದರೆ ಈ ರೀತಿ ಮಾಡುವುದರಿಂದ ನಮಗೆ ಬರುವ ದೊಡ್ಡ ಕಾಯಿಲೆಗಳಿಂದ ರಕ್ಷಿಸಿಕೊಳ್ಳಬಹುದು. ಇಲ್ಲದಿದ್ದರೆ ಕ್ಯಾನ್ಸರ್ ನಂತಹ ಮಾರಕ ಕಾಯಿಲೆಗಳು ಕೂಡ ನಮ್ಮನ್ನು ಆವರಿಸಿಕೊಳ್ಳಬಹುದು. ಆದ್ದರಿಂದ ವೈದ್ಯರ ಬಳಿ ಯಾವುದನ್ನು ಮುಚ್ಚಿಡದೆ ಎಲ್ಲವನ್ನು ಹೇಳಿಕೊಳ್ಳಿ. ಸಾಧ್ಯವಾದಷ್ಟು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

 

LEAVE A REPLY

Please enter your comment!
Please enter your name here