ಇದೀಗ ಮತ್ತೆ ಕೊರೊನಾ ಹಾವಳಿಯ ಅಲೆ ಪ್ರಾರಂಭವಾಗಿದೆ.ಇದೀಗ ಕೋವಿಡ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾದ ಹಿನ್ನೆಲೆ ಸಾರ್ವಜನಿಕರು ಕೆಲವೊಂದು ನಿಮಯಗಳನ್ನು ಪಾಲಿಸಬೇಕೆಂದು ಆರೋಗ್ಯ ಇಲಾಖೆ ತಿಳಿಸಿದೆ. ಕಳೆದ ಮೂರು ಕೋವಿಡ್ ಅಲೆಗಳೂ ಕೂಡ ಭಾರಿ ಅವಾಂತರ ಸೃಷ್ಟಿಸಿತ್ತು. ಈಗ ಮತ್ತೇ ರಾಜ್ಯಕ್ಕೆ ಈ ಭೀತಿ ಕಾಡಿದ್ದು ಇದೀಗ ದೇಶಕ್ಕೆ ನಾಲ್ಕನೇ ಅಲೆ ಕೇರಳದಿಂದಲೇ ಶುರುವಾಗಿದ್ದು ಕೇಂದ್ರ ದಿಂದ ಈ ಬಗ್ಗೆ ಮಾರ್ಗ ಸೂಚಿ ಬಿಡುಗಡೆಯಾಗಿದೆ.
ಈ ಪ್ರದೇಶದಲ್ಲಿ ಹೆಚ್ಚಳ
ತಮಿಳುನಾಡು (Tamilnadu) ಹಾಗೂ ಕೇರಳ (Kerala) ರಾಜ್ಯದಲ್ಲಿ ಕೋವಿಡ್ 19ನ ಉಪತಳಿ JN.1 ಈಗಾಗಲೇ ಹೆಚ್ಚಾಗಿದೆ. ಇನ್ಮುಂದೆ ಕೆಲವೊಂದು ಹಬ್ಬ, ಮದುವೆ ಸಮಾರಂಭ ಗಳು ಹೆಚ್ಚಾಗಿರುವುದರಿಂದ ಸಾರ್ವಜನಿಕರಿಗೆ ಕೆಲವೊಂದು ನಿಯಮ ಪಾಲನೆ ಮಾಡುವಂತೆ ಸಲಹೆ ನೀಡಲಾಗಿದೆ. ದೇಶದಲ್ಲಿ ಈಗಾಗಲೇ ಅಧಿಕಕೋವಿಡ್ ಪ್ರಕರಣಗಳು ದಾಖಲಾಗಿದ್ದು,ಇನ್ನೂ ಸಕ್ರಿಯ ಪ್ರಕರಣ ಏರಿಕೆಯಾಗಿದೆ
ಈ ನಿಯಮ ಪಾಲಿಸಿ
*60 ವರ್ಷ ಮೇಲ್ಪಟ್ಟು ಇರುವವರು ಮಾಸ್ಕ್ ಧರಿಸುವುದು ಕಡ್ಡಾಯ.
*ಜ್ವರ ಕೆಮ್ಮು, ಶೀಥ, ಲಕ್ಷಣ ಇರುವವರು ವೈದ್ಯಕೀಯ ತಪಾಸಣೆ ಮಾಡಿಸುವುದು ಕಡ್ಡಾಯ
*ಜ್ವರ , ಕೆಮ್ಮು ಸಮಸ್ಯೆ ಇದ್ದರೆ ಬೇರೆಯವರ ಜೊತೆ ಸಂಪರ್ಕ ಹೊಂದದಿರಲು ಹಿರಿಯರಿಂದ, ಮಕ್ಕಳಿಂದ ದೂರ ಇರಲು ಸಲಹೆ.
*ಹೆಚ್ಚಿನ ಕಾಯಿಲೆಗಳಿಂದ ಬಳಲುತ್ತಿರುವವರು ಹೆಚ್ಚಿನ ಮುನ್ನೆಚ್ಚರಿಕೆ ವಹಿಸಲು ಸೂಚನೆ
*ವೈಯಕ್ತಿಕ ಸ್ವಚ್ಛತೆ, ಆಗಾಗ್ಗೆ ಕೈಗಳನ್ನು ಸೋಪು ಹಾಗೂ ನೀರಿನಿಂದ ತೊಳೆದುಕೊಳ್ಳುವುದು ಅಗತ್ಯ
*ಆರೋಗ್ಯ ಸಮಸ್ಯೆಗಳು ಇದ್ದಲ್ಲಿ ಮನೆಯಲ್ಲಿ ರೆಸ್ಟ್ ಮಾಡುವುದು.
ಇದೀಗ ಕೇಂದ್ರ ಸರ್ಕಾರ ಕೋವಿಡ್ ಅಲೆಯ ಬಗ್ಗೆ ಹೈ ಅಲರ್ಟ್ ಆಗಿದ್ದು, ಮುಂಜಾಗ್ರತೆ ವಹಿಸುವಂತೆ ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಿದೆ.
