
ಕಿಡ್ನಿ ಸಮಸ್ಯೆ, ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡುಬರುವ ಒಂದು ಸಮಸ್ಯೆಯಾಗಿದೆ. ಸರಿಯಾಗಿ ನೀರನ್ನು ಕುಡಿಯದೇ ಇರುವುದು, ಮಧ್ಯಪಾನ ಮಾಡುವುದು ಮುಂತಾದವುಗಳಿಂದ ಈ ಕಿಡ್ನಿ ಸಮಸ್ಯೆ ನಮ್ಮನ್ನು ಬಹುವಾಗಿ ಕಾಡುತ್ತದೆ. ಈ ಕಿಡ್ನಿ ಸಮಸ್ಯೆ ಬಂದಾಗ ಬಹಳ ಜಾಗರೂಕರಾಗಿರಬೇಕಾಗುತ್ತದೆ. ಕಿಡ್ನಿ ಸಮಸ್ಯೆ ಬರುವ ಮೊದಲೂ ಕೂಡ ನಾವು ಎಚ್ಚರಿಕೆ ವಹಿಸಿದಾಗ ಮಾತ್ರ ಇಂತಹ ಸಮಸ್ಯೆಯಿಂದ ದೂರ ಇರಬಹುದು. ಮೂತ್ರಪಿಂಡವು ದೇಹದ ಅತ್ಯಂತ ಸೂಕ್ಷ್ಮವಾದ ಅಂಗ ಇದರ ಕಾಳಜಿ ಬಹಳ ಮುಖ್ಯ.
ನಿಮ್ಮ ಆಹಾರ ಕ್ರಮದಲ್ಲಿ ಹಣ್ಣುಗಳು ಮತ್ತು ತರಕಾರಿಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಮೂತ್ರಪಿಂಡ ಅಥವಾ ಕಿಡ್ನಿಯ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು. ಆದರೆ ಈಗಾಗಲೇ ಮೂತ್ರಪಿಂಡದ ಸಮಸ್ಯೆಗೆ ಒಳಗಾದವರು ತಮ್ಮ ಆಹಾರದಲ್ಲಿ ಪೊಟಾಷಿಯಂ ಅಂಶ ಕಡಿಮೆ ಇರುವ ಆಹಾರಗಳನ್ನು ಸೇವಿಸುವುದು ಉತ್ತಮ. ಇಂತಹ ಸಮಯದಲ್ಲಿ ಸೇಬು, ಪೇರಳೆ, ಪಪ್ಪಾಯಿ ಮುಂತಾದ ಹಣ್ಣುಗಳನ್ನು ತಿನ್ನುವುದರಿಂದ ದೇಹದಲ್ಲಿ ಸಕ್ಕರೆ ಅಂಶ ಕೂಡ ನಿಯಂತ್ರಣದಲ್ಲಿಟ್ಟುಕೊಳ್ಳಬಹುದು.
ದಿನದ ಯಾವುದೇ ಸಮಯದಲ್ಲಿ ಯಾವುದೇ ವಯಸ್ಸಿನವರು ಮಾಡಬಹುದಾದ ಸುಲಭವಾದ ಮತ್ತು ಸರಳವಾದ ವ್ಯಾಯಾಮ ವಾಕಿಂಗ್. ವ್ಯಾಯಾಮ ಮಾಡಲು ಸಮಯ ಸಿಗದವರಿಗೆ ಅಥವಾ ವ್ಯಾಯಾಮವನ್ನೇ ಮಾಡದವರಿಗೆ ವಾಕಿಂಗ್ ಉತ್ತಮ ವ್ಯಾಯಾಮ. ಆರಂಭದಲ್ಲಿ 10-15 ನಿಮಿಷಗಳ ಕಾಲ ನಡೆದು, ನಂತರ ಕ್ರಮೇಣ ಇದರ ಅವಧಿಯನ್ನು ಹೆಚ್ಚಿಸಬಹುದು.
ಯೋಗಾಭ್ಯಾಸ: ಮೂತ್ರಪಿಂಡದ ಕಾಯಿಲೆಯಿಂದ ಉಂಟಾಗುವ ಆತಂಕ ಮತ್ತು ಒತ್ತಡವನ್ನು ನಿವಾರಿಸುತ್ತದೆ. ವೈದ್ಯರು ಮತ್ತು ಯೋಗ ತರಬೇತುದಾರರೊಂದಿಗೆ ಚರ್ಚಿಸಿ ಸುಲಭವಾದ ಯೋಗ ಭಂಗಿಗಳ ಬಗ್ಗೆ ಮಾಹಿತಿ ಪಡೆದು, ಅವುಗಳನ್ನು ಅಭ್ಯಾಸ ಮಾಡಿ.
ಯೋಗಾಭ್ಯಾಸವು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಲು ಉತ್ತಮ ಮಾರ್ಗವಾಗಿದೆ. ಯೋಗ ಮತ್ತು ಧ್ಯಾನವನ್ನು ಅಭ್ಯಾಸ ಮಾಡುವುದರಿಂದ ಮನಸ್ಸು ಶಾಂತಗೊಳ್ಳುತ್ತದೆ.
ರಕ್ತದಲ್ಲಿ ಗ್ಲೂಕೋಸ್ ಮಟ್ಟವನ್ನು ಕಾಪಾಡಿಕೊಳ್ಳಿ: ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುವುದರಿಂದ ಕಿಡ್ನಿ ಸಮಸ್ಯೆಗಳನ್ನು ಕೂಡ ದೂರ ಇಡಬಹುದಾಗಿದೆ. ಜೀವನಶೈಲಿ ಬದಲಾವಣೆಯಿಂದಾಗಿ ತೂಕವನ್ನು ನಿಯಂತ್ರಣದಲ್ಲಿಡುವುದು ಸ್ವಲ್ಪ ಕಷ್ಟ. ವ್ಯಾಯಾಮ ಮಾಡಿ, ಧ್ಯಾನ ಮಾಡಿ, ಉಪ್ಪು ಕಡಿಮೆ ಇರುವ ಆಹಾರ ಸೇವಿಸಿ, ಮದ್ಯಪಾನ ಕಡಿಮೆ ಮಾಡಿ ಆಗ ರಕ್ತದೊತ್ತಡವೂ ನಿವಾರಣೆಯಾಗಲಿದೆ.
