
ಮಳೆಗಾಲ ಆರಂಭವಾಗಿದೆ. ಬಿಸಿಲ ಧಗೆ ಕಡಿಮೆಯಾಗಿದೆ. ಇನ್ನೇನಿದ್ದರೂ ಕೂಲ್ ಆದ ವಾತವರಣ, ಕಾಲ ಬದಲಾದಂತೆ ಕಾಲಕ್ಕೆ ತಕ್ಕಂತೆ ನಮ್ಮ ಆಹಾರ ಕ್ರಮವೂ ಕೂಡ ಬದಲಾಯಿಸಬೇಕಾಗುತ್ತದೆ. ಮಳೆಗಾಲ ಅಂತ ಬಂದಾಗ ಯಾವ ರೀತಿಯ ಆಹಾರ ಕ್ರಮ ಅನುಸರಿದರೆ ಉತ್ತಮ? ಏನು ತಿಂದರೆ ಆರೋಗ್ಯ ಉತ್ತಮ ವಾಗಿರುತ್ತದೆ ಎಂಬ ಮಾಹಿತಿ ಇಲ್ಲಿದೆ.
ಸೊಪ್ಪಿನ ಸೇವನೆ
ಸೊಪ್ಪಿನ ಆಹಾರ ಸೇವನೆ ಎಲ್ಲಾ ಸಮಯದಲ್ಲೂ ಉತ್ತಮ. ಹಾಗಾಗಿ ಮಳೆಗಾಲದಲ್ಲಿ ಸೊಪ್ಪು ಪದಾರ್ಥಗಳನ್ನು ತಿನ್ನಬಹುದಾಗಿದೆ. ಮನೆಯ ಹಿತ್ತಲಿನಲ್ಲಿ ಕಳೆಯಂತೆ ಬೆಳೆಯುವ ದೊಡ್ಡಪತ್ರೆ ಸೊಪ್ಪು ಮಳೆಗಾಲದಲ್ಲಿ ಸೇವಿಸಿದರೆ ಜೀರ್ಣಶಕ್ತಿ ಹೆಚ್ಚಿ ಆರೋಗ್ಯ ವೃದ್ಧಿಯಾಗುತ್ತದೆ. ಆಮಶಂಕೆ, ಲಿವರ್ ನ ಸಮಸ್ಯೆಗಳು, ಕ್ರಿಮಿರೋಗ, ಮೂತ್ರಪಿಂಡದ ಕಲ್ಲು, ಕೆಮ್ಮು, ಮೂತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಗುಣಪಡಿಸಲು ಈ ದೊಡ್ಡಪತ್ರೆ ಸಹಾಯ ಮಾಡಲಿದೆ. ಅದೇ ರೀತಿ ನುಗ್ಗೆಸೊಪ್ಪು ಸೇವನೆ ಉತ್ತಮ. ಇದು ಆಂಟಿಆಕ್ಸಿಡಂಟ್ಗಳನ್ನು ಹೊಂದಿದ್ದು ಹಲವಾರು ಸಮಸ್ಯೆಗಳನ್ನು ತಡೆಯುವ ಶಕ್ತಿ ಹೊಂದಿದೆ.
ಬೆಚ್ಚನೆಯ ಆಹಾರ ಸೇವಿಸಿ
ಮಳೆಗಾಲದಲ್ಲಿ ತೇವಾಂಶ ಹೆಚ್ಚಿರುವ ಕಾರಣ ಬೆಚ್ಚಗಿರುವ ಆಹಾರವನ್ನು ಸೇವಿಸುವುದು ಉತ್ತಮ. ಹಾಗಾಗಿ ಸೂಪ್, ಗ್ರೀನ್ ಟೀ, ಸಾರು, ದಾಲ್, ಮುಂತಾದ ಸಾಕಷ್ಟು ಬೆಚ್ಚಗಿನ ದ್ರವಗಳನ್ನು ಸೇವಿಸಿ…
ಹಾಲಿನ ಸೇವನೆ
ಹಾಲಿನಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇರಲಿದ್ದು, ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಮಳೆಗಾಲದಲ್ಲಿ ಮಿತವಾಗಿ ಹಾಲು ಸೇವನೆ ಮಾಡಬೇಕು. ಮೊಸರು, ಮಜ್ಜಿಗೆ, ಕೆಫೀರ್, ಉಪ್ಪಿನಕಾಯಿ ತರಕಾರಿಗಳಂತಹ ಪ್ರೋಬಯಾಟಿಕ್‌ಗಳನ್ನು ಸೇವಿಸಬಹುದು.
ಮಳೆಗಾಲದಲ್ಲಿ ಶುಂಠಿಯನ್ನು ಹೆಚ್ಚಿನ ಖಾದ್ಯಗಳಿಗೆ ಬಳಕೆ ಮಾಡಲಾಗುತ್ತದೆ. ಇದು ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ಕರಿ ಮೆಣಸು ನೋಡಲು ಸಣ್ಣದಾದರೂ ಹಲವಾರು ರೀತಿಯ ಔಷಧೀಯ ಗುಣಗಳು ಇದರಲ್ಲಿ ಇದೆ. ಹಾಗಾಗಿ ಆಹಾರ ಕ್ರಮದಲ್ಲಿ ಇದನ್ನು ಸೇರಿಸಿ.
ಮಳೆಗಾಲದಲ್ಲಿ ಬೀದಿ ಬದಿಯ ಆಹಾರವನ್ನು ತಿನ್ನುವುದನ್ನು ಕಡಿಮೆ ಮಾಡಿ. ಇದರಿಂದ ಸಾಕಷ್ಟು ತೊಂದರೆಗಳು ಬರಲಿದೆ.
