Home ಆರೋಗ್ಯ ಊಟ ಮುಗಿದ 45 ನಿಮಿಷಗಳ ನಂತರ ನೀರನ್ನು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು

ಊಟ ಮುಗಿದ 45 ನಿಮಿಷಗಳ ನಂತರ ನೀರನ್ನು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು

ಸಾಮಾನ್ಯವಾಗಿ ಎಲ್ಲರೂ ಮಾಡುವ ದೊಡ್ಡ ತಪ್ಪೆಂದರೆ ಊಟದ ಮಧ್ಯೆ ನೀರು ಕುಡಿಯುವುದು. ಮನೆಯಲ್ಲಿ ಹಿರಿಯರಿದ್ದರೆ ಅವರು ನಮಗೆ ಎಚ್ಚರಿಸುತ್ತಾರೆ, ಊಟದ ಮಧ್ಯೆ ನೀರು ಕುಡಿಯವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು. ಹೀಗೆ ನೀರು ಕುಡಿಯುವುದು ಒಳ್ಳೆಯ ಅಭ್ಯಾಸ ಅಲ್ಲ. ಅದು ಆರೋಗ್ಯಕ್ಕೂ ಕೂಡ ಒಳ್ಳೆಯದಲ್ಲ. ಒಂದು ವೇಳೆ ಅಷ್ಟು ಬಾಯಾರಿಕೆಯಾದಲ್ಲಿ ಊಟಕ್ಕೆ ಮೊದಲು ನೀರನ್ನು ಕುಡಿಯಬೇಕು. ಇಲ್ಲವಾದಲ್ಲಿ ಊಟದ ನಂತರ ನೀರನ್ನು ಕುಡಿಯಬೇಕು. ಈ ರೀತಿ ಮಾಡುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಆಯುರ್ವೇದದ ಪ್ರಕಾರ ಊಟದ ಪ್ರಕ್ರಿಯೆಯಲ್ಲಿ ಶ್ರದ್ಧೆ ಇರಬೇಕು. ಊಟ ಮಾಡುವಾಗ ಆಹಾರ ಪದಾರ್ಥದ ಪರಿಮಳ, ರುಚಿ ಮತ್ತು ವಿನ್ಯಾಸದ ಬಗ್ಗೆ ಸಂಪೂರ್ಣ ಗಮನ ಇರಬೇಕು. ಇದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ.

ಊಟದ ನಡುವೆ ಹೆಚ್ಚಾಗಿ ನೀರು ಕುಡಿಯುವುದು ಒಳ್ಳೆಯದಲ್ಲ. ಹಾಗಾಗಿ ಆಹಾರಕ್ಕೆ ಅತಿಯಾಗಿ ಉಪ್ಪು ಹಾಕಬಾರದು. ಉಪ್ಪು ಜಾಸ್ತಿಯಾದರೆ ಬಾಯಾರಿಕೆ ಉಂಟಾಗುತ್ತದೆ. ಅವಸರವಸರವಾಗಿ ಊಟ ಮಾಡುವುದು ಕೂಡ ತಪ್ಪು. ಯಾವುದೇ ಕಾರಣಕ್ಕೂ ಕೋಲ್ಡ್ ನೀರನ್ನು ಕುಡಿಯುವುದು ಒಳ್ಳೆಯದಲ್ಲ. ಅಂತೆಯೇ ಊಟವಾದ ತಕ್ಷಣ ನೀರನ್ನು ಕುಡಿಯಬಾರದು. ಊಟ ಮಾಡಿ 15 ನಿಮಿಷಗಳ ನಂತರ ನೀರು ಕುಡಿಯಬೇಕು. ಊಟ ಮುಗಿದ 45 ನಿಮಿಷಗಳ ನಂತರ ನೀರನ್ನು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು.

 
Previous articleರಾಜ್ಯದಲ್ಲಿ ನಿಲ್ಲದ ವರುಣಾರ್ಭಟ: ಆಗಸ್ಟ್‌ 6ರವರೆಗೆ ಮಳೆ ಮುಂದುವರಿಯುವ ಸಾಧ್ಯತೆ
Next articleರಾತ್ರಿ ಸಮಯ ಟಿವಿ ನೋಡುವಾಗ ಲೈಟ್ ಅನ್ನು ಆಫ್ ಮಾಡುವುದು ಒಳ್ಳೆಯದಲ್ಲ