Home ಆರೋಗ್ಯ ಮಲಗುವ ಮುನ್ನ ಪ್ರೋಟಿನ್ ಶೇಕ್ ಸೇವಿಸುವುದರಿಂದ ದೇಹದ ತೂಕ ಆಟೋಮ್ಯಾಟಿಕ್ ಇಳಿಕೆಯಾಗುತ್ತೆ

ಮಲಗುವ ಮುನ್ನ ಪ್ರೋಟಿನ್ ಶೇಕ್ ಸೇವಿಸುವುದರಿಂದ ದೇಹದ ತೂಕ ಆಟೋಮ್ಯಾಟಿಕ್ ಇಳಿಕೆಯಾಗುತ್ತೆ

ದೇಹದ ತೂಕ ಹೆಚ್ಚಾಗುವುದು ಇಂದಿನ ದಿನಮಾನದಲ್ಲಿ ಸರ್ವೇ ಸಾಮಾನ್ಯವಾಗಿರುವ ಸಮಸ್ಯೆಯಾಗಿದೆ. ದೇಹದ ತೂಕ ಹೆಚ್ಚಾಗುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ನಮ್ಮನ್ನು ಕಾಡುತ್ತಿರುತ್ತವೆ. ತೂಕ ಹೆಚ್ಚಾಗುವುದು ಬಿಡುವುದು ಯಾವುದೂ ನಮ್ಮ ಕೈಯಲ್ಲಿ ಇರುವುದಿಲ್ಲ. ಆದರೆ ತೂಕ ಹೆಚ್ಚಾದಾಗ ಅದನ್ನು ಇಳಿಸಿಕೊಳ್ಳಲು ನಾವು ಸ್ವಲ್ಪ ಪ್ರಯತ್ನ ಪಡಬೇಕಾಗುತ್ತದೆ. ತೂಕ ಇಳಿಸಿಕೊಳ್ಳುವ ಸಲುವಾಗಿ ಸುಲಭ ಮಾರ್ಗವನ್ನು ಕಂಡುಕೊಳ್ಳಲು ಹೋಗಿ ಊಟ ಬಿಡುವುದು, ಜಿಮ್ ಗೆ ಹೋಗುವುದು ಈ ರೀತಿ ಮಾಡುವುದರಿಂದ ಕೆಲವರ ದೇಹದ ಮೇಲೆ ಅಡ್ಡಪರಿಣಾಮಗಳು ಬೀರುತ್ತವೆ. ಹೀಗಾಗಿ ಇದರ ಬದಲು ಮನೆಯಲ್ಲಿಯೇ ಕೆಲವೊಂದು ನಿಯಮಗಳನ್ನು ಅನುಸರಿಸುವ ಮೂಲಕ ತೂಕ ಇಳಿಸಿಕೊಳ್ಳಬಹುದಾಗಿದೆ.

ಹೌದು, ರಾತ್ರಿ ಮಲಗುವ ಮೊದಲು, ನೀವು ಕೆಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು, ಇದರಿಂದಾಗಿ ತೂಕವು ವೇಗವಾಗಿ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಹಾಗಾದರೆ ತ್ವರಿತವಾಗಿ ತೂಕ ಇಳಿಸಲು ಸಹಾಯವಾಗುವಂತ ಸಿಂಪಲ್ ಸಲಹೆ ಏನು ಎನ್ನುವುದನ್ನು ಹೇಳುತ್ತೇವೆ ಮುಂದಿನ ಮಾಹಿತಿ ಓದಿ.

ಆರೋಗ್ಯಕರ ಜೀವನಕ್ಕಾಗಿ ನಿದ್ದೆ ಬಹಳ ಮುಖ್ಯ ಎಂದು ಎಲ್ಲರಿಗೂ ತಿಳಿದಿದೆ. ನಿತ್ಯ 8 ಗಂಟೆಗಳ ಕಾಲ ನಿದ್ದೆ ಮಾಡುವುದರಿಂದ ಹಲವು ಕಾಯಿಲೆಗಳಿಂದ ದೂರ ಉಳಿಯಬಹುದು. ಅಂತೆಯೇ, ಸರಿಯಾದ ಪ್ರಮಾಣದಲ್ಲಿ ನಿದ್ದೆ ಮಾಡುವುದು ನಿಮ್ಮ ತೂಕವನ್ನು ಕಡಿಮೆ ಮಾಡಲು ಸಹ ಸಹಾಯಕವಾಗಿದೆ.
ಇನ್ನು, ನಿತ್ಯ ಸಾಕಷ್ಟು ನಿದ್ದೆ ಮಾಡುವುದು ಮಾತ್ರವಲ್ಲ, ಮಲಗುವ ಮೊದಲು ದೇಹಕ್ಕೆ ಅಗತ್ಯ ಪ್ರೋಟಿನ್ ಒದಗಿಸುವುದು ಕೂಡ ಅತ್ಯಗತ್ಯ. ಮಲಗುವ ಮುನ್ನ ನೀವು ಪ್ರೋಟಿನ್ ಶೇಕ್ ಅನ್ನು ಸೇವಿಸಿದರೂ ಸಹ, ನೀವು ಅನೇಕ ದೊಡ್ಡ ಪ್ರಯೋಜನಗಳನ್ನು ಪಡೆಯುತ್ತೀರಿ. ಪ್ರೋಟೀನ್ ಕಾರ್ಬೋಹೈಡ್ರೇಟ್‌ಗಳು ಅಥವಾ ಕೊಬ್ಬಿಗಿಂತ ಹೆಚ್ಚು ಥರ್ಮೋಜೆನಿಕ್ ಎಂದು ನಂಬಲಾಗಿದೆ, ಇದು ನಿಮ್ಮ ದೇಹವು ಹೆಚ್ಚು ಕ್ಯಾಲೊರಿಗಳನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದರಿಂದಲೂ ನೀವು ಸುಲಭವಾಗಿ ತೂಕ ಇಳಿಸಿಕೊಳ್ಳಬಹುದಾಗಿದೆ.

 
Previous articleಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಗ್ರೀನ್ ಟೀ ಮತ್ತು ಟೊಮೆಟೋ ಜ್ಯೂಸ್ ರಾಮಬಾಣ
Next articleಉಡುಪಿ ಜಿಲ್ಲಾ ಪೊಲೀಸ್‌ ಕಚೇರಿಯ ಹೆಡ್‌ ಕಾನ್‌ಸ್ಟೇಬಲ್‌ ಬಿ.ವಿಜಯ್‌ ಕುಮಾರ್‌ ಗೆ ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕ