ಯಾವುದೇ ಆಹಾರವನ್ನಾಗಲಿ ಮಿತವಾಗಿ ತಿನ್ನುವುದು ಒಳ್ಳೆಯದು. ರುಚಿಯನ್ನು ಹುಡುಕುವ ಸಲುವಾಗಿ ಯಾವುದೇ ಒಂದು ಪದಾರ್ಥವನ್ನು ಹೆಚ್ಚಾಗಿ ಸೇವಿಸುವುದರಿಂದ ಆರೋಗ್ಯ ಹಾಳಾಗುವ ಸಂಭವವೇ ಹೆಚ್ಚು. ಅದೇ ರೀತಿ ಊಟದ ಜೊತೆಗೆ ತಿನ್ನುವ ಹಪ್ಪಳವೂ ಕೂಡ ಹೆಚ್ಚಾಗಿ ತಿನ್ನುವುದು ಒಳ್ಳೆಯದಲ್ಲ. ಅರೆ..! ಹಪ್ಪಳವೂ ಅಪಾಯಕಾರಿನಾ..? ಅಂತಾ ನೀವು ಯೋಚಿಸ್ತಿರಬಹುದು.
ಹೌದು, ಹಪ್ಪಳವನ್ನು ಕೆಡದಂತೆ ರಕ್ಷಿಸಲು ರಾಸಾಯನಿಕವನ್ನು ಬಳಸ್ತಾರೆ. ಈ ಹಿನ್ನೆಲೆ ಅದು ಆರೋಗ್ಯಕ್ಕೆ ಅಷ್ಟು ಉಪಯುಕ್ತ ಅಲ್ಲ. ಹಪ್ಪಳದಲ್ಲಿ ಉಪ್ಪು ಹಾಗೂ ಸೋಡಿಯಂ ಲವಣಗಳು ಸೇರಿರುತ್ತವೆ. ಇದು ಹಪ್ಪಳದ ರುಚಿಯನ್ನು ಹೆಚ್ಚಿಸುತ್ತದೆ. ಆದರೆ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಹಪ್ಪಳದಲ್ಲಿ ಬಳಸುವ ಸಂರಕ್ಷಕಗಳಿಂದಾಗಿ ಕಿಡ್ನಿ ಹಾಗೂ ಹೃದಯ ಸಂಬಂಧಿ ಖಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಹಪ್ಪಳದಲ್ಲಿ ಎರಡು ರೊಟ್ಟಿಯಷ್ಟು ಕ್ಯಾಲೋರಿ ಇರುತ್ತದೆ. ಇದನ್ನು ತಿನ್ನುವುದರಿಂದ ಬೊಜ್ಜು ಬರುವ ಸಂಭವ ಜಾಸ್ತಿ ಇದೆ. ಇದಕ್ಕೆ ಮಸಾಲೆ ಹಾಗೂ ಆರ್ಟಿಫಿಶಿಯಲ್ ಕಲರ್ ಬಳಸುವುದರಿಂದ ಅಸಿಡಿಟಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
