
ಈಗಾಗಲೇ ಚಳಿಗಾಲದ ಅವಧಿ ಆರಂಭವಾಗಿದ್ದು ಚಳಿಯಿಂದ ರಕ್ಷಿಸಿ ಕೊಳ್ಳಲು ಬೆಚ್ಚನೆಯ ಉಡುಪು ಸಹ ಬಹಳಷ್ಟು ಅಗತ್ಯವಾಗಿದೆ.ಅದರ ಜೊತೆ ಗೆ ನಾವು ಅನುಸರಿಸುವ ಆಹಾರ ಕ್ರಮಗಳು ಕೂಡ ಮುಖ್ಯವಾಗುತ್ತದೆ. ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ಪೋಷಕಾಂಶ ಯುಕ್ತವಾದ ಆಹಾರ ವನ್ನು ಕೊಡಬೇಕು. ಚಳಿಗಾಲದ ತಂಪು ವಾತಾವರಣವು ನಿಮ್ಮ ದೇಹದಲ್ಲಿ ಉಷ್ಣತೆಯನ್ನು ಕಡಿಮೆಮಾಡುವ ಗುಣವನ್ನು ಹೊಂದಿದೆ.ಆ ಸಮಯದಲ್ಲಿ ನಿಮ್ಮ ದೇಹವನ್ನು ಬೆಚ್ಚಗಿಡುವುದುಸಹ ಮುಖ್ಯವಾಗುತ್ಯದೆ. ದೇಹಕ್ಕೆ ಕ್ಯಾಲೋರಿ-ಭರಿತ ಆಹಾರಗಳ ಅವಶ್ಯಕ ಇದ್ದು ನಿಮ‌್ಮ ದೇಹಕ್ಕೆ ಬೇಕಾದ ಆಹಾರ ಕ್ರಮವನ್ನೇ ನೀವು ಅನುಸರಿಸಬೇಕು.
ಅನೇಕ ಆರೋಗ್ಯ ಸಮಸ್ಯೆ ಕಾಡುತ್ತದೆ
ಚಳಿಗಾಲದಲ್ಲಿ ಅನೇಕ ರೋಗಗಳು ಕಾಡುತ್ತದೆ. ತ್ವಚೆಯ ಸಮಸ್ಯೆಯಿಂದ ಹಿಡಿದು, ಉಸಿರಾಟ, ಅಸ್ತಮಾ, ಶೀತ, ಸೇರಿದಂತೆ ಕೆಲವೊಮ್ಮೆ ಅಜೀರ್ಣ ಸಮಸ್ಯೆ ಕೂಡ ಕಾಡುತ್ತವೆ. ಹಾಗಾಗಿ ಚಳಿಗಾಲದಲ್ಲಿ ಕೆಲವು ಆಹಾರ ಕ್ರಮಗಳನ್ನು ಅನುಸರಿಸುವುದು ಬಹಳ ಮುಖ್ಯವಾಗುತ್ತದೆ.
ಇದನ್ನು ಸೇವನೆ ಮಾಡಬೇಡಿ
ಚಳಿಗಾಲದಲ್ಲಿ ತಂಪಾದ ವಾತಾವರಣ ಇರುವುದರಿಂದ ನೀವು ಐಸ್ ಜ್ಯೂಸ್ ಅಥವಾ ತಂಪು ಪಾನೀಯ ಸೇವಿಸಿದರೆ ಅದು ದೇಹಕ್ಕೆ ಹಾನಿ ಉಂಟು ಮಾಡುತ್ತದೆ.
ಇನ್ನೂ ಚಳಿಗಾಲದಲ್ಲಿ ಅತಿಯಾದ ಕೊಬ್ಬಿನ ಅಂಶವಿರುವ ಆಹಾರವನ್ನು ಸೇವಿಸಿದರೆ ನಿಮ್ಮ ಅಪಧಮನಿಗಳ ಮೇಲೆ ಕೆಲವು ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಇದು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಐಸ್ ಕ್ರೀಮ್ ಮತ್ತು ಕೇಕ್, ಪೇಸ್ಟ್ರಿ ಮತ್ತು ಕುಕ್ಕೀಸ್ ನಂತಹ ಆಹಾರಗಳನ್ನು ನೀವು ಸೇವಿಸಬಾರದು.
ಪ್ರತಿಯೊಬ್ಬರಿಗೂ ಚಳಿಗಾಲದಲ್ಲಿ ಎಣ್ಣೆಯಲ್ಲಿ ಕರಿದ ಆಹಾರಗಳ ಬಗ್ಗೆ ಹೆಚ್ಚು ಆಸಕ್ತಿಯನ್ನು ವಹಿಸುತ್ತಾರೆ. ಆಲೂಗಡ್ಡೆ ಚಿಪ್ಸ್, ಪಕೋಡ, ಚಿಕನ್ ಇತ್ಯಾದಿ. ಆದರೆ ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡಿದ್ರೆ ದೇಹದಲ್ಲಿ ಸಮಸ್ಯೆ ಬರುವುದಂತು ಪಕ್ಕವಾಗಿದೆ.
ಇದನ್ನು ಸೇವಿಸಿ
ಚಳಿಗಾಲದಲ್ಲಿ ತರಕಾರಿ, ಬೇಳೆಕಾಳುಗಳು, ಇತ್ಯಾದಿಯಿಂದ ತಯಾರಿಸಿದ ಸೂಪ್‌ಗಳನ್ನು ಸೇವನೆ ಮಾಡಿದ್ರೆ ಬಹಳಷ್ಟು ಉತ್ತಮ.
ತುಪ್ಪವು ಪ್ರತಿ ಆಹಾರ, ಚಪಾತಿ, ರೈಸ್ ಇತ್ಯಾದಿಗಳೊಂದಿಗೆ ಬಳಸಬಹುದಾಗಿದೆ. ತುಪ್ಪವು ನಿಮ್ಮ ದೇಹದ ಉಷ್ಣತೆಯನ್ನು ಹೆಚ್ಚುಮಾಡುತ್ತದೆ ಜೊತೆಗೆ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ದೇಹದಲ್ಲಿ ಉತ್ತಮ ಚಯ ಪಚಯ ಕ್ರಿಯೆಯನ್ನು ನಡೆಸಲು ಸಹಕಾರಿ ಯಾಗುತ್ತದೆ.
ಬೆಲ್ಲವನ್ನು ಸೇವನೆ ಮಾಡಿದ್ರು ಉತ್ತಮ. ಇದು ಕಬ್ಬಿಣಾಂಶವನ್ನು ಒಳಗೊಂಡಿದ್ದು, ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಣೆ ಮಾಡುತ್ತದೆ. ಹಾಗೂ ದೇಹದ ಉಷ್ಣತೆಯನ್ನು ಸಮತೋಲನದಲ್ಲಿ ಇಡಲು ಸಹಾಕಾರಿ ಯಾಗುತ್ತದೆ.
ಎಳ್ಳನ್ನು ಸೇವಿಸದರೂ ಉತ್ತಮ. ಇದರ ಜೊತೆಗೆ ಇತರ ಧಾನ್ಯ ಕಾಳುಗಳನ್ನು ಸೇವನೆ ಮಾಡಿದ್ರೆ ಚಳಿಗಾಲದಲ್ಲಿ ಆರೋಗ್ಯದ ರಕ್ಷಣೆಯನ್ನು ನೀವು ಮಾಡಬಹುದಾಗಿದೆ.
