Home ಆರೋಗ್ಯ ಚಳಿಗಾಲದಲ್ಲಿ ಆರೋಗ್ಯ ಕಾಪಡಿಕೊಳ್ಳಲು ಈ ಆಹಾರ ಕ್ರಮ‌ ಅನುಸರಿಸಿ

ಚಳಿಗಾಲದಲ್ಲಿ ಆರೋಗ್ಯ ಕಾಪಡಿಕೊಳ್ಳಲು ಈ ಆಹಾರ ಕ್ರಮ‌ ಅನುಸರಿಸಿ

ಈಗಾಗಲೇ ಚಳಿಯ ವಾತವರಣ ಆರಂಭವಾಗಿದೆ. ಈ ಚಳಿಗಾಲದ ಸಂದರ್ಭದಲ್ಲಿ ಆರೋಗ್ಯ ಸಮಸ್ಯೆಗಳು ಕಾಡುವುದು ಸಹ ಹೆಚ್ಚು.ಕೆಲವರಿಗೆ ತಂಪು ವಾತಾವರಣಗಳು ಮುಂಜಾನೆ ಎದ್ದ ತಕ್ಷಣ ಬಹಳಷ್ಟು ಕಿರಿಕಿರಿ ಉಂಟು ಮಾಡುತ್ತದೆ. ಹೌದು ನೆಗಡಿ, ಕಫ, ಕೆಮ್ಮು, ಜ್ವರ ಇತ್ಯಾದಿ ಆರಂಭವಾಗಿ ಆರೋಗ್ಯ ಕೆಡುತ್ತದೆ‌. ಚಳಿಗಾಲದ ಹವಾಮಾನ ಬದಲಾವಣೆ ಇಂದಾಗಿ ಅಸ್ತಮಾ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಇದರಿಂದ ಕೆಮ್ಮು, ಉಸಿರಾಟ ಮಾಡುವ ಶ್ವಾಸಕೋಶ ಸಮಸ್ಯೆ ಉಂಟಾಗುತ್ತದೆ. ಬಹಳಷ್ಟು ಅಲರ್ಜಿನ್‌ ಆರಂಭವಾಗಿ ಇದು ತೀವ್ರವಾದ ಸಮಸ್ಯೆಗೆ ಕಾರಣವಾಗುತ್ತದೆ. ಇದಕ್ಕಾಗಿ ಮಾಸ್ಕ್ ಧರಿಸುವುದು ಉತ್ತಮ.

ಈ ಸಲಹೆ ಪಾಲಿಸಿ

ಸಾಕಷ್ಟು ಪ್ರಮಾಣದ ನೀರು ಕುಡಿಯಿರಿ

ಚಳಿಗಾಲದ ಸಂಧರ್ಭದಲ್ಲಿ ಬಾಯಾರಿಕೆಯಾಗುವುದು ಕಡಿಮೆ. ಆದರೆ ಈ ವಾತಾವರಣ ದಲ್ಲಿ ನೀವು ಸಾಕಷ್ಟು ಪ್ರಮಾಣದ ನೀರು ಕುಡಿಯುದು ಅಗತ್ಯವಾಗಿ ಇರುತ್ತದೆ. ದೇಹದಲ್ಲಿ ಜೀರ್ಣ ಕ್ರಿಯೇ, ಚಯಪಚಯ ಕ್ರಿಯೆ ಕಾರ್ಯ ಚಟುವಟಿಕೆ ಸುಧಾರಿಸಲು ನೀರು ಕುಡಿಯುವುದು ಮುಖ್ಯವಾಗಿರುತ್ತದೆ.

ಕರಿದ ಆಹಾರ ಕಡಿಮೆ ಮಾಡಿ

ಇನ್ನೂ ಚಳಿಗಾಲದಲ್ಲಿ ನೀವು ಕರಿದ, ಮಸಾಲೆಯುಕ್ತ ಆಹಾರ, ಹೊರಗಿನ ಊಟ ಇತ್ಯಾದಿಯನ್ನು ಕಡಿಮೆ ಮಾಡಿಕೊಳ್ಳಿ.‌ ಚಳಿಗಾಲದಲ್ಲಿ ಅತಿಯಾದ ಮಸಾಲೆ ಪದಾರ್ಥಗಳ ಆಹಾರವು ಜೀರ್ಣಕ್ರಿಯೆ ಸಮಸ್ಯೆ, ಹೊಟ್ಟೆ ನೋವು, ಇತ್ಯಾದಿ ಕಾಡಬಹುದು.

ತರಕಾರಿಗಳ ಸೇವನೆ ಅಗತ್ಯ

ಚಳಿಗಾಲದಲ್ಲಿ ನೀವು ದೇಹವನ್ನು ರಕ್ಷಿಸಿಕೊಳ್ಳಲು ಹಾಗೂ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡಲು ಕಾಳು ಮೆಣಸು, ಶುಂಠಿ ಇತ್ಯಾದಿ ಕಷಾಯ, ಹಣ್ಣುಗಳ ಸೇವನೆ, ತರಕಾರಿಗಳ ಸೇವನೆ ಬಹಳಷ್ಟು ಮುಖ್ಯ.

ನೆಗಡಿ, ಶೀತದ ಸಮಸ್ಯೆ ಇದ್ದರೆ ಹೀಗೆ ಮಾಡಿ

ಅರಿಶಿನ ಸೇವನೆ ಚಳಿಗಾಲದಲ್ಲಿ ಉತ್ತಮ.ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವ ಗುಣವನ್ನು ಹೊಂದಿದ್ದು ಇದು ಚಳಿಗಾಲದಲ್ಲಿಉಂಟಾಗುವ ಗಂಟಲು, ಕೆಮ್ಮು ಮುಂತಾದ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಪ್ರತಿ ದಿನ ಹಾಲಿಗೆ ಸ್ವಲ್ಪ ಪ್ರಮಾಣದ ಅರಶಿನ ಹುಡಿಯನ್ನು ಹಾಕಿ ಕುಡಿದರೆ ಉತ್ತಮ.

ಇನ್ನು ಚಳಿಗಾಲದ ಆಹಾರ ಕ್ರಮದಲ್ಲಿ ನೀವು ಸ್ವಲ್ಪ‌ ಜೇನುತುಪ್ಪವನ್ನು ಸೇರಿಸಿ. ಇದು ಜೀರ್ಣಕ್ರಿಯೆಗೆ ಸಹಕಾರಿಯಾಗುತ್ತದೆ. ಇದರಿಂದ ನಿಮ್ಮ ಆರೋಗ್ಯ ಸುಧಾರಿಸುತ್ತದೆ.

 
Previous articleಮಣಿಪಾಲ ಪದವಿಪೂರ್ವ ಕಾಲೇಜಿನ ಅಮೃತ ಮಹೋತ್ಸವ ಸಂಭ್ರಮ ‘ಅಮೃತ ಪರ್ವ’
Next articleಜಮೀನು ಹೊಂದಿರುವ ರೈತರಿಗೆ ದಾರಿ ಇಲ್ಲದೆ ಸಮಸ್ಯೆಯಾಗಿದೆಯೇ? ಇನ್ಮುಂದೆ ಈ ಭಯ ಇಲ್ಲ