
ಮಧುಮೇಹ ಸಮಸ್ಯೆ ಇಂದಿನ ದಿನಮಾನದ ಜನರಿಗೆ ಹೆಚ್ಚಾಗಿ ಕಾಡುವ ಸಮಸ್ಯೆಯಾಗಿದೆ. ಇದು ಬಂದಾಗ ಇನ್ನು ನಾನಾತರದ ಖಾಯಿಲೆಗಳು ಬಂದು ಒಕ್ಕರಿಸಿಕೊಳ್ಳುತ್ತದೆ. ಇದು ಬಂದಾಗ ಆಹಾರದಲ್ಲಿ ಸಾಕಷ್ಟು ರೀತಿಯ ಕಂಟ್ರೋಲ್ ಅನ್ನು ಮಾಡಬೇಕಾಗುತ್ತದೆ. ಇದಕ್ಕೆ ವೈದ್ಯರ ಸಲಹೆಯನ್ನು ಸರಿಯಾಗಿ ಪಾಲಿಸುವುದರಿಂದ ಮಧುಮೇಹದಿಂದ ಪರಿಹಾರವನ್ನು ಕಂಡುಕೊಳ್ಳಬಹುದು. ಇದರೊಂದಿಗೆ ಕೆಲವೊಂದು ತರಕಾರಿ ಸೇವನೆ ಕೂಡ ಬಹಳ ಸಹಕಾರಿಯಾಗುತ್ತದೆ. ಹಾಗಾದ್ರೆ ಯಾವೆಲ್ಲಾ ತರಕಾರಿ ಸೇವನೆಯಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ ಅಂತಾ ಮುಂದೆ ಓದಿ…
ಹಸಿರು, ಹಳದಿ ಮತ್ತು ಕೆಂಪು ಮೆಣಸುಗಳಲ್ಲಿರುವ ಗ್ಲೂಕೋಸಡೇಸ್ ಮತ್ತು ಲಿಪಿಡ್ ತೆಗೆಯುವ ಕಿಣ್ವ ಪ್ಯಾಂಕ್ರಿಯಾಟಿಕ್ ಲಿಪೇಸ್ಪೋ ಆಲ್ಫಾ ಪೋಷಣೆ ಜೀರ್ಣಕಾರಿ ಕಿಣ್ವಗಳು ಕಾರ್ಬೊಹೈಡ್ರೇಟ್ ವಿಭಾಗಿಸುವುದರಲ್ಲಿ ಯಶಸ್ವಿಯಾಗಿದ್ದು, ಇದು ಮಧುಮೇಹವನ್ನು ತಡೆಯಲು ಸಹಕಾರಿಯಾಗುತ್ತದೆ ಎನ್ನಲಾಗಿದೆ.
ಹಳದಿ ಮತ್ತು ಕೆಂಪು ಕ್ಯಾಪ್ಸಿಕಂ ಮೆಣಸುಗಳಲ್ಲಿ ಕಾರ್ಬೋಹೈಡ್ರೇಟ್‌ಗಳು ಮತ್ತು ಲಿಕ್ವಿಡ್‌ಗಳ ಜೀರ್ಣಕ್ರಿಯೆ ನಿಧಾನವಾಗಿ ಕಂಡುಬಂದಿದ್ದು, ಅದರಲ್ಲಿಯೂ ಹಸಿರು ಕ್ಯಾಪ್ಸಿಕಂಗೆ ಹೋಲಿಸಿದರೆ ಹಳದಿ ಕ್ಯಾಪ್ಸಿಕಂ ಗಮನಾರ್ಹವಾಗಿ ಆಲ್ಫಾ ಗ್ಲೂಕೋಸಡೇಸ್ ಮತ್ತು ಲಿಪೇಸ್ ಕಿಣ್ವದ ಚಟುವಟಿಕೆಯನ್ನು ಪ್ರತಿಬಂಧಿಸುತ್ತದೆ ಎನ್ನಲಾಗಿದೆ.
