Home ಆರೋಗ್ಯ ಗರ್ಭಿಣಿ ಮಹಿಳೆಯರು ಪಾಲಿಸಲೇಬೇಕು ಈ ಎಲ್ಲಾ ನಿಯಮಗಳನ್ನು

ಗರ್ಭಿಣಿ ಮಹಿಳೆಯರು ಪಾಲಿಸಲೇಬೇಕು ಈ ಎಲ್ಲಾ ನಿಯಮಗಳನ್ನು

0
ಗರ್ಭಿಣಿ ಮಹಿಳೆಯರು ಪಾಲಿಸಲೇಬೇಕು ಈ ಎಲ್ಲಾ ನಿಯಮಗಳನ್ನು

ಓರ್ವ ಮಹಿಳೆಗೆ ತಾನು ಗರ್ಭಿಣಿ ಎಂದು ತಿಳಿದ ಮರುಕ್ಷಣವೇ ಆಕೆಯಲ್ಲಿ ಸಂತೋಷ ಮನೆಮಾಡುತ್ತದೆ. ತನ್ನೊಳಗೆ ಒಂದು ಪುಟ್ಟ ಜೀವ ಬೆಳೆಯುತ್ತಿರುವುದರಿಂದ ಆಕೆ ಹೆಚ್ಚಿನ ಆರೈಕೆಯನ್ನು ಮಾಡಲು ಆರಂಭಿಸುತ್ತಾಳೆ. ಮಗು ಹೊಟ್ಟೆಯಲ್ಲಿರುವಾಗಿನಿಂದಲೇ ಅವಳು ಕೆಲವೊಂದು ವಿಚಾರದಲ್ಲಿ ತ್ಯಾಗವನ್ನು ಮಾಡಲು ಆರಂಭಿಸುತ್ತಾಳೆ. ತನ್ನ ಮಗುವಿಗೆ ಯಾವುದು ಒಳ್ಳೆಯದಲ್ಲವೋ ಆ ಆಹಾರವನ್ನು ಅವಳು ತನಗೆ ಇಷ್ಟವಿದ್ದರೂ ಅದನ್ನು ತ್ಯಜಿಸುತ್ತಾಳೆ. ಅಲ್ಲದೇ ಈ ಸಂದರ್ಭ ಅವಳಿಗೆ ಮನೆಯವರ ಆರೈಕೆ ಕೂಡ ಬಹಳ ಮುಖ್ಯವಾಗುತ್ತದೆ. ಜೊತೆಗೆ ಅವಳ ಆರೈಕೆಯನ್ನೂ ಕೂಡ ಅವಳು ಮಾಡಿಕೊಳ್ಳಬೇಕಾಗುತ್ತದೆ.

ಆಯುರ್ವೇದದ ಪ್ರಕಾರ ಭ್ರೂಣದಲ್ಲಿ ಬೆಳೆಯುವ ಮಗು ತನ್ನ 5ನೇ ತಿಂಗಳಿನಿಂದ ಬುದ್ದಿ ಬೆಳವಣಿಗೆ ಪ್ರಾರಂಭವಾಗುತ್ತದೆ. ಇದನ್ನ ಮಹಿಳೆಯ ‘ಗೋಲ್ಡನ್ ಪಿರೇಡ್’ ಎಂದರೂ ತಪ್ಪಾಗಲಾರದು. ಇಂತಹ ಸಂದರ್ಭದಲ್ಲಿ ತಾಯಿ ಒಳ್ಳೆಯ ಯೋಚನೆ, ಉತ್ತಮ ಅಭ್ಯಾಸಗಳು, ಪುಸ್ತಕ ಓದುವುದು ಮುಂತಾದವುಗಳನ್ನು ಮಗುವಿಗೆ ಅವಶ್ಯಕವಾಗಿರುತ್ತದೆ.

ಗರ್ಭಿಣಿಯಾದ ಮಹಿಳೆಯರು ಉತ್ತಮ ಹವ್ಯಾಸಗಳ ಜೊತೆಗೆ ನ್ಯೂಟ್ರಿಶಿಯಸ್ ಆಹಾರಗಳನ್ನು ಕೂಡ ನಮ್ಮ ದೇಹಕ್ಕೆ ಒದಗಿಸುವುದು ಉತ್ತಮ. ನಮ್ಮ ದೇಹದ ಆರೋಗ್ಯದ ಜೊತೆಗೆ ಮಗುವಿನ ಬೆಳವಣಿಗೆ ಹಾಗೂ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಆಹಾರಗಳನ್ನು ಸೇವಿಸುವುದು ಉತ್ತಮ.

ಈಗಿನ ಸಮಾಜದಲ್ಲಿ ಎಲ್ಲಾ ಮಹಿಳೆಯರು ಹೆಚ್ಚಾಗಿ ಕೆಲಸದ ಒತ್ತಡದಲ್ಲಿ ತಮ್ಮ ಆಹಾರದ ಬಗ್ಗೆ ಗಮನ ಕೊಡಲು ಸಾಧ್ಯವಾಗುವುದಿಲ್ಲ. ಕೆಲಸದಲ್ಲಿ ತೊಡಗಿಸಿಕೊಳ್ಳುವ ಗರ್ಭಿಣಿ ಮಹಿಳೆಯರಿಗೆ ಅಲ್ಲಿನ ಸಕಾರಾತ್ಮಕ ಹಾಗೂ ನಕಾರಾತ್ಮಕ ಒತ್ತಡಗಳು ಹೆಚ್ಚಾದಂತೆ ಅದು ಮಗುವಿನ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಇಂತಹ ಸಮಯದಲ್ಲಿ ಸಾಧ್ಯವಾದಷ್ಟು ಒಳ್ಳೆಯ ಪುಸ್ತಕ ಓದುವುದು,ಉತ್ತಮ ಸಂಗೀತಗಳನ್ನು ಕೇಳುವ ಅಭ್ಯಾಸ ಬೆಳೆಸಿಕೊಳ್ಳಬೇಕು.

ಗರ್ಭಾವಸ್ಥೆಯಲ್ಲಿ ಅವರಿಗೆ ಬಯಕೆಯಾದಂತಹ ಆಹಾರಗಳಲ್ಲಿ ಎಲ್ಲವನ್ನು ಸೇವಿಸುವುದು ತಾಯಿ ಮತ್ತು ಮಗುವಿಗೆ ಖಂಡಿತ ಉತ್ತಮವಲ್ಲ. ಕೆಲವು ಆಹಾರಗಳು ಚಾಟ್ಸ್, ಕೇಕ್, ನೂಡಲ್ಸ್, ಪೇಸ್ಟ್ರಿ, ಸ್ವೀಟ್ಸ್, ಇಂತಹ ಆಹಾರಗಳಲ್ಲಿ ನ್ಯೂಟ್ರಿಶಿಯಸ್ ಅನ್ನುವ ಭಾಗವೇ ಇರುವುದಿಲ್ಲ, ಆದರೂ ಇಂತಹ ಆಹಾರಗಳ ಸೇವನೆಯೇ ಜಾಸ್ತಿಯಾಗಿರುತ್ತದೆ.

ಈ ರೀತಿಯ ಆಹಾರ ಸೇವಿಸುವುದರಿಂದ ಮಗುವಿಗೆ ಯಾವ ರೀತಿಯ ನ್ಯೂಟ್ರಿಶಿಯನ್ ಸಿಗಲು ಖಂಡಿತ ಸಾಧ್ಯವಿಲ್ಲ, ಜೊತೆಗೆ ಮಗುವಿಗೆ ಉತ್ತಮ ನ್ಯೂಟ್ರಿಶಿಯನ್ ಆಹಾರ ಸಿಗದಿದ್ದರೆ ಮಗುವಿನ ಬೆಳವಣಿಗೆಯ ಮೇಲೆ ಬಹಳ ದೊಡ್ಡ ಪರಿಣಾಮ ಬೀರಬಹುದು, ಹೀಗಾಗಿ ಮಗು ಗರ್ಭಾವಸ್ಥೆಯಲ್ಲಿ ಇದ್ದಾಗ ಜಂಕ್ ಫುಡ್‌ಗಳನ್ನು ಸೇವಿಸದಿರುವುದು ಬಹಳ ಉತ್ತಮ. ನ್ಯೂಟ್ರಿಶಿಯಸ್ ಹೆಚ್ಚಾಗಿರುವ ಹಣ್ಣುಗಳು, ಡ್ರೈಫೂಟ್ಸ್, ಹಸಿರು ತರಕಾರಿ ಇಂತಹ ಆಹಾರ ಅಭ್ಯಾಸಗಳನ್ನು ಆಹಾರದಲ್ಲಿ ಬೆಳೆಸಿಕೊಳ್ಳುವುದು ಗರ್ಭಿಣಿ ಮಹಿಳೆಯರಿಗೆ ಹಾಗೂ ಮಗುವಿನ ಬೆಳವಣಿಗೆಗೆ ಉತ್ತಮ.

 

LEAVE A REPLY

Please enter your comment!
Please enter your name here