Home ಆರೋಗ್ಯ ರಾತ್ರಿ ವೇಳೆ ಭೂರಿ ಭೋಜನ ಮಾಡಿ ಮಲಗುವುದು ಆರೋಗ್ಯಕ್ಕೆ ಹಾನಿಕರ..!

ರಾತ್ರಿ ವೇಳೆ ಭೂರಿ ಭೋಜನ ಮಾಡಿ ಮಲಗುವುದು ಆರೋಗ್ಯಕ್ಕೆ ಹಾನಿಕರ..!

0
ರಾತ್ರಿ ವೇಳೆ ಭೂರಿ ಭೋಜನ ಮಾಡಿ ಮಲಗುವುದು ಆರೋಗ್ಯಕ್ಕೆ ಹಾನಿಕರ..!

ರಾತ್ರಿ ಸಮಯ ಹೆಚ್ಚಿನ ಜನರು ಊಟ ಮಾಡುತ್ತಾರೆ. ಈ ಭಾಗದ ಜನರು ಅನ್ನಕ್ಕೆ ಹೆಚ್ಚಿನ ಒತ್ತನ್ನು ನಿಡುತ್ತಾರೆ. ಇನ್ನೂ ಕೆಲ ಭಾಗದ ಜನರು ಮುದ್ದೆ, ಚಪಾತಿಯಂತಹ ತಿನಿಸುಗಳ ಕಡೆಗೆ ಹೆಚ್ಚಿನ ಒತ್ತನ್ನು ಕೊಡುತ್ತಾರೆ. ಈ ಡಯೆಟ್‌ನಂತಹ ಕಾರ್ಯದಲ್ಲಿ ತೊಡಗಿರುವವರು ಚಪಾತಿಯನ್ನೇ ಹೆಚ್ಚಾಗಿ ಇಷ್ಟಪಡುತ್ತಾರೆ. ಇನ್ನೂ ಕೆಲವರು ರಾತ್ರಿ ಸಮಯದಲ್ಲಿಯೂ ಕೂಡ ಬೇಕಾಬಿಟ್ಟಿಯಾಗಿ ಆಹಾರವನ್ನು ಸೇವಿಸುವ ಅಭ್ಯಾಸವನ್ನು ರೂಢಿಸಿಕೊಂಡಿರುತ್ತಾರೆ. ಅದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ರಾತ್ರಿ ಸಮಯದಲ್ಲೂ ಕೂಡ ಹೆಲ್ದಿ ಆಹಾರವನ್ನು ಸೇವಿಸಿದಾಗ ಮಾತ್ರ ಆರೋಗ್ಯಕರ ಜೀವನ ನಮ್ಮದಾಗುತ್ತದೆ.

ಇದಲ್ಲದೆ ನಿದ್ರಾಹೀನತೆ, ಮಲಬದ್ಧತೆ, ಗ್ಯಾಸ್ ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ರಾತ್ರಿ ಅನಾರೋಗ್ಯಕರ ಅಥವಾ ಹೆವಿಯಾದ ತಿನಿಸುಗಳನ್ನು ತಿಂದರೆ ಹೊಟ್ಟೆಯಲ್ಲಿ ಬಾಧೆ ಶುರುವಾಗುವ ಅಪಾಯವೂ ಇರುತ್ತದೆ. ಯಾವ್ಯಾವ ತಿನಿಸುಗಳನ್ನು ರಾತ್ರಿ ಸೇವನೆ ಮಾಡದೇ ಇರುವುದು ಉತ್ತಮ ಅನ್ನೋದನ್ನ ನೋಡೋಣ.

ಹೆಚ್ಚಿನವರು ರಾತ್ರಿಯಲ್ಲಿ ಮಾತ್ರ ಮದ್ಯಪಾನ ಮಾಡುತ್ತಾರೆ. ಆದರೆ ಮದ್ಯ ಸೇವನೆ ಆರೋಗ್ಯಕ್ಕೆ ಹಾನಿಕರ. ಅದರಲ್ಲೂ ರಾತ್ರಿ ಆಲ್ಕೋಹಾಲ್ ಸೇವಿಸಿದ್ರೆ ನಿದ್ರೆಗೆ ಅಡ್ಡಿಪಡಿಸುತ್ತದೆ. ರಾತ್ರಿಯಲ್ಲಿ ಆಲ್ಕೋಹಾಲ್ ಸೇವನೆಯನ್ನು ಸಂಪೂರ್ಣವಾಗಿ ತ್ಯಜಿಸಬೇಕು. ರಾತ್ರಿ ಊಟಕ್ಕೆ ಮಸಾಲೆಯುಕ್ತ ಆಹಾರವನ್ನು ಸೇವಿಸುವುದು ಒಳ್ಳೆಯದಲ್ಲ. ಅತಿಯಾದ ಖಾರ ಹಾಗೂ ಮಸಾಲೆಯುಕ್ತ ಆಹಾರವು ನಿದ್ರೆ ಮತ್ತು ಜೀರ್ಣಾಂಗ ವ್ಯವಸ್ಥೆಗೆ ಅಡ್ಡಿಪಡಿಸುತ್ತದೆ. ಆದ್ದರಿಂದ ರಾತ್ರಿ ಕಡಿಮೆ ಮಸಾಲೆ ಇರುವ ಲೈಟ್ ಫುಡ್ ತೆಗೆದುಕೊಳ್ಳಿ. ಇದಲ್ಲದೆ ಗ್ಯಾಸ್ಟ್ರಿಕ್‌ಗೆ ಕಾರಣವಾಗುವಂತಹ ಪದಾರ್ಥಗಳನ್ನು ಕೂಡ ರಾತ್ರಿ ತಿನ್ನಬಾರದು. ಏಕೆಂದರೆ ರಾತ್ರಿ ಅಂತಹ ಆಹಾರವನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ಆದ್ದರಿಂದ ರಾತ್ರಿ ಡ್ರೈಫ್ರೂಟ್ಸ್, ಬೀನ್ಸ್, ಕೋಸುಗಡ್ಡೆ, ಹೂಕೋಸು, ಮೊಳಕೆ ಕಾಳು ಮುಂತಾದವುಗಳನ್ನು ತಿನ್ನಬೇಡಿ.

 

LEAVE A REPLY

Please enter your comment!
Please enter your name here