Home ಆರೋಗ್ಯ ಹಾಲಿನ ಜೊತೆ ಮೊಸರು ಸೇವಿಸಿದರೆ ವಾಂತಿ ಆಗುವ ಸಂಭವವಿದೆ..!

ಹಾಲಿನ ಜೊತೆ ಮೊಸರು ಸೇವಿಸಿದರೆ ವಾಂತಿ ಆಗುವ ಸಂಭವವಿದೆ..!

0
ಹಾಲಿನ ಜೊತೆ ಮೊಸರು ಸೇವಿಸಿದರೆ ವಾಂತಿ ಆಗುವ ಸಂಭವವಿದೆ..!

ಹಾಲು ದೇಹದ ಆರೋಗ್ಯಕ್ಕೆ ಉತ್ತಮ ಪದಾರ್ಥ. ರಾತ್ರಿ ಮಲಗುವ ಮೊದಲು ಎಲ್ಲರಿಗೂ ಒಂದು ಲೋಟ ಹಾಲನ್ನು ಕುಡಿಯುವ ಅಭ್ಯಾಸ ಇರುತ್ತದೆ. ಈ ಅಭ್ಯಾಸ ಇರುವವರು ಒಂದು ದಿನವೂ ಕೂಡ ತಪ್ಪದೇ ಹಾಲನ್ನು ಕುಡಿದು ಮಲಗುತ್ತಾರೆ. ಇದು ಆರೋಗ್ಯಕರ ಅಭ್ಯಾಸವೇ ಹೌದು. ಆದರೆ ಇನ್ನೂ ಕೆಲವರಿಗೆ ಹಾಲಿನ ಜೊತೆ ಬೇರೆ ಏನಾದರೂ ಆಹಾರವನ್ನು ಸೇವಿಸುವ ಅಭ್ಯಾಸವಿರುತ್ತದೆ. ಅವುಗಳು ಹಣ್ಣಾಗಿರಬಹುದು ಅಥವಾ ಬೇರೆಯೇ ಪದಾರ್ಥವಾಗಿರಬಹುದು. ಹಾಲಿನ ಜೊತೆ ಏನಾದರೂ ಸೇವಿಸುವಾಗ ಅದರ ಬಗ್ಗೆ ಸರಿಯಾಗಿ ತಿಳಿದುಕೊಂಡಿರಬೇಕು. ಕೆಲವೊಂದು ಆಹಾರ ಪದಾರ್ಥಗಳನ್ನು ಹಾಲಿನ ಜೊತೆ ಸೇವಿಸುವುದು ಆರೋಗ್ಯಕ್ಕೆ ಒಳ್ಲೆಯದಲ್ಲ. ಹಾಗಾದ್ರೆ ಯಾವುವು ಆ ಪದಾರ್ಥ ಅಂತಾ ತಿಳಿದುಕೊಳ್ಳಬೇಕಾ..? ಮುಂದೆ ಓದಿ..

ಹಾಲಿನ ಜೊತೆ ಮೊಸರು ಸೇವನೆ ಮಾಡುವ ಅಭ್ಯಾಸ ಅನೇಕರಿಗಿರುತ್ತದೆ. ಅನ್ನಕ್ಕೆ ಹಾಲು, ಮೊಸರು ಸೇರಿಸಿ ಊಟ ಮಾಡ್ತಾರೆ. ಆದ್ರೆ ಇದು ಒಳ್ಳೆಯದಲ್ಲ. ಇವೆರಡನ್ನೂ ಒಟ್ಟಿಗೆ ಸೇವನೆ ಮಾಡುವುದರಿಂದ ಗ್ಯಾಸ್, ಎಸಿಡಿಟಿ ಹಾಗೂ ವಾಂತಿ ಕಾಣಿಸಿಕೊಳ್ಳುತ್ತದೆ. ಮೊಸರು ತಿಂದ ಒಂದೂವರೆ ಎರಡು ಗಂಟೆ ನಂತರ ಹಾಲು ಕುಡಿಯಬೇಕು.

ಹಾಲು ಕುಡಿಯುವ ಮೊದಲು, ನಂತರ ಅಥವಾ ಹಾಲಿನ ಜೊತೆ ಎಂದೂ ಹಣ್ಣನ್ನು ತಿನ್ನಬಾರದು. ಹಾಲಿನ ಜೊತೆ ಅನಾನಸ್, ಕಿತ್ತಳೆ ಹಣ್ಣಿನಂತಹ ಸಿಟ್ರಸ್ ಅಂಶವಿರುವ ಹಣ್ಣು ತಿಂದರೆ ಅಪಾಯ ನಿಶ್ಚಿತ. ಹೀಗೆ ಮಾಡಿದಲ್ಲಿ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ.

ಹಾಲು ಹಾಗೂ ಬಾಳೆಹಣ್ಣನ್ನು ಒಟ್ಟಿಗೆ ಸೇವನೆ ಮಾಡಬಾರದು. ಎರಡೂ ಕಫವನ್ನು ಉತ್ಪತ್ತಿ ಮಾಡುತ್ತವೆ. ಇದರಿಂದ ಕಫ ಜಾಸ್ತಿಯಾಗುವ ಜೊತೆಗೆ ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ.

ಕೆಲವರು ಬೆಳಿಗ್ಗೆ ಹಾಲಿನ ಜೊತೆ ಬ್ರೆಡ್ ಹಾಗೂ ಬೆಣ್ಣೆ ತಿನ್ನುತ್ತಾರೆ. ಆದ್ರೆ ಇದರ ಅವಶ್ಯಕತೆ ಇಲ್ಲ. ಹಾಲಿನ ಜೊತೆ ಬ್ರೆಡ್, ಬೆಣ್ಣೆ ಸೇವನೆ ಮಾಡುವುದರಿಂದ ಹೊಟ್ಟೆ ತುಂಬಿದಂತಾಗಿ ತೊಂದರೆಯಾಗುತ್ತದೆ.

ಹಾಲಿನ ಜೊತೆ ಮೀನನ್ನು ಸೇವನೆ ಮಾಡಬೇಡಿ. ಇದರಿಂದ ಗ್ಯಾಸ್, ಅಲರ್ಜಿ ಹಾಗೂ ಚರ್ಮ ಸಂಬಂಧಿ ಖಾಯಿಲೆಗಳು ಕಾಣಿಸಿಕೊಳ್ಳುತ್ತವೆ.

ಹಾಲಿನ ಜೊತೆ ಉಪ್ಪಿನಕಾಯಿ, ಕರಿದ ಪದಾರ್ಥಗಳನ್ನೂ ತಿನ್ನಬೇಡಿ. ಹಾಲು ಹಾಗೂ ಎಳ್ಳನ್ನು ಒಟ್ಟಿಗೆ ತಿನ್ನುವುದು ಒಳ್ಳೆಯದಲ್ಲ.

 

LEAVE A REPLY

Please enter your comment!
Please enter your name here