Home ಆರೋಗ್ಯ ರಕ್ತಹೀನತೆ ಸಮಸ್ಯೆ ಎದುರಿಸುತ್ತಿರುವವರಿಗೆ ನೇರಳೆಹಣ್ಣು ಉತ್ತಮ ಮನೆಮದ್ದು..!

ರಕ್ತಹೀನತೆ ಸಮಸ್ಯೆ ಎದುರಿಸುತ್ತಿರುವವರಿಗೆ ನೇರಳೆಹಣ್ಣು ಉತ್ತಮ ಮನೆಮದ್ದು..!

0
ರಕ್ತಹೀನತೆ ಸಮಸ್ಯೆ ಎದುರಿಸುತ್ತಿರುವವರಿಗೆ ನೇರಳೆಹಣ್ಣು ಉತ್ತಮ ಮನೆಮದ್ದು..!

ನೇರಳೆ ಹಣ್ಣು ಆಗಿನ ಕಾಲದಲ್ಲಿ ಕಾಡುಮೇಡು ಜಾಸ್ತಿ ಇದ್ದುದರಿಂದ ಹೇರಳವಾಗಿ ನಮ್ಮ ಕೈಗೆ ಸಿಗುತ್ತಿತ್ತು. ಆಗಿನ ಕಾಲದಲ್ಲಿ ಮಕ್ಕಳು ಶಾಲೆಯಿಂದ ಬರುವಾಗ ದಾರಿಯಲ್ಲಿ ಸಿಗುವ ನೇರಳೆಹಣ್ಣನ್ನು ಕೊಯ್ದು ತಿನ್ನುತ್ತಾ ಬರುತ್ತಾರೆ. ಬಾಯೆಲ್ಲಾ ನೇರಳೆ ಬಣ್ಣಕ್ಕೆ ತಿರುಗಿರುತ್ತದೆ. ಹೀಗಾಗಿ ಆಗಿನ ಮಕ್ಕಳು ಬಹಳ ಗಟ್ಟಿಮುಟ್ಟಾಗಿ ಆರೋಗ್ಯವಂತರಾಗಿರುತ್ತಿದ್ದರು. ಇಂದಿನ ದಿನಮಾನದಲ್ಲಿ ನೇರಳೆಹಣ್ಣು ಸಿಗುವುದು ವಿರಳ. ಕಾಡುಗಳನ್ನು ಕಡಿದಿರುವುದರಿಂದ ಕೇವಲ ಅಂಗಡಿಗಳಲ್ಲಿ ಮಾತ್ರ ಈ ಹಣ್ಣು ದೊರಕುತ್ತದೆ. ನೇರಳೆಹಣ್ಣು ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾ ಪ್ರಯೋಜನಗಳಿವೆ. ಅವುಗಳು ಯಾವುವು ಅಂತಾ ಮುಂದೆ ಓದಿ…

* ನೇರಳೆ ಹಣ್ಣುಗಳಲ್ಲಿ ಕ್ಯಾಲ್ಸಿಯಂ, ಮೆಗ್ನೀಷಿಯಂ, ಫಾಸ್ಪರಸ್, ಸೋಡಿಯಂ, ವಿಟಮಿನ್ ಸಿ, ಥಿಯಾಮಿನ್, ಫೋಲಿಕ್ ಆಸಿಡ್, ನಾರಿನಂಶ, ಕೆರೋಟಿನ್ ಮತ್ತು ಪ್ರೋಟೀನ್ ಗಳು ಹೇರಳವಾಗಿದೆ.

* ಮಧುಮೇಹ ಇರುವವರಿಗೆ ನೇರಳೆಹಣ್ಣು ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದನ್ನು ಸೇವಿಸಿದರೆ ರಕ್ತದಲ್ಲಿ ಸಕ್ಕರೆ ಮಟ್ಟವು ನಿಯಂತ್ರಣಕ್ಕೆ ಬರುತ್ತದೆ.

* ಜೀರ್ಣ ವ್ಯವಸ್ಥೆಗೆ ನೇರಳೆ ಹಣ್ಣು ಬಹಳ ಸಹಾಯ ಮಾಡುತ್ತದೆ. ದೇಹದಲ್ಲಿನ ವ್ಯರ್ಥ ಪದಾರ್ಥಗಳನ್ನು ಹೊರಕ್ಕೆ ಪಂಪ್ ಮಾಡುತ್ತದೆ. ರಕ್ತವು ಶುದ್ಧಿಯಾಗುತ್ತದೆ.

* ರಕ್ತ ಹೀನತೆ ಸಮಸ್ಯೆ ಎದುರಿಸುವವರು ನೇರಳೆ ಹಣ್ಣನ್ನು ತಿನ್ನುವುದರಿಂದ ಬಳಲಿಕೆ ತೊಲಗುತ್ತದೆ. ಶಕ್ತಿ, ಚೈತನ್ಯ ಬರುತ್ತದೆ. ದೇಹಕ್ಕೆ ಸಾಕಷ್ಟು ಕಬ್ಬಿಣಾಂಶವು ಲಭ್ಯವಾಗುತ್ತದೆ.

* 100 ಗ್ರಾಂಗಳ ನೇರಳೆ ಹಣ್ಣಿನಲ್ಲಿ ಶೇಕಡ ೫೫ರಷ್ಟು ಪೊಟ್ಯಾಶಿಯಂ ಇರುತ್ತದೆ. ಹೃದಯ, ಮಧುಮೇಹ, ರಕ್ತದೊತ್ತಡ ಇರುವವರು ಒಂದೇ ಒಂದು ಹಣ್ಣು ತಿಂದರೂ ಸರಿಹೋಗುತ್ತದೆ.

* ಜೀರ್ಣಶಕ್ತಿ ಸರಿಯಾಗಿಲ್ಲದಿರುವಾಗ ಒಂದು ಕಪ್ ಮೊಸರಿಗೆ 4 ಚಮಚ ನೇರಳೆ ಹಣ್ಣಿನ ರಸ ಬೆರೆಸಿ ಸೇವಿಸಿದರೆ ಉಪಶಮನವಾಗುತ್ತದೆ.

* ಒಸಡಿನಿಂದ ರಕ್ತಸ್ರಾವವಾಗುತ್ತಿದ್ದರೆ, ಮಾತನಾಡಲು ಆಗದೆ ಹಲ್ಲುಗಳು ನೋಯುತ್ತಿದ್ದರೆ, ಬಾಯಿ ದುರ್ವಾಸನೆ ಸಮಸ್ಯೆಗಳಿಗೆ ನೇರಳೆಹಣ್ಣು ಉತ್ತಮ ಔಷಧ.

* ನೇರಳೆಹಣ್ಣನ್ನು ಎಂಥ ಪರಿಸ್ಥಿತಿಯಲ್ಲೂ ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು. ತಪ್ಪದೇ ಏನಾದರೂ ಸ್ವಲ್ಪ ಆಹಾರವನ್ನು ಸೇವಿಸಿದ ಆನಂತರವೇ ತಿನ್ನಬೇಕು. ಶಸ್ತ್ರಚಿಕಿತ್ಸೆ ಮಾಡಿಕೊಂಡಿರುವವರು ವೈದ್ಯರ ಸಲಹೆ ಮೇರೆಗೆ ನೇರಳೆಹಣ್ಣನ್ನು ಸೇವಿಸಬಹುದು.

 

LEAVE A REPLY

Please enter your comment!
Please enter your name here