
ಉಡುಪಿ: ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಗಳು ಸುಮಾರು 40 ಅಡಿ ಆಳದ ಬಾವಿಗೆ ಇಳಿದು ಬೆಕ್ಕೊಂದನ್ನು ರಕ್ಞಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ದೇವಸ್ಥಾನದ ಬಾವಿಯೊಳಗೆ ಬೆಕ್ಕೊಂದು ಬಿದ್ದಿರುವ ಕುರಿತು ಸಿಬ್ಬಂದಿಯೊಬ್ಬರು ಹೇಳಿದಾಗ, ಕೂಡಲೇ ಬಾವಿಯತ್ತ ತೆರಳಿದ ಸ್ವಾಮೀಜಿ, ಬಕೆಟ್ ಮೂಲಕ ಬೆಕ್ಕನ್ನು ಮೇಲಕ್ಕೆತ್ತಲು ಪ್ರಯತ್ನಿಸಿದ್ದಾರೆ. ಇದು ಫಲಕಾರಿಯಾಗದ ಕಾರಣ ಸ್ವತಃ ತಾವೇ ಬಾವಿಗಿಳಿದು ಬೆಕ್ಕನ್ನು ಮೇಲಕ್ಕೆತ್ತಿದ್ದಾರೆ. ಮೇಲಕ್ಕೆ ಬರುತ್ತಿದ್ದಂತೆ ಬೆಕ್ಕು ಓಡಿಹೋಯಿತು. ಬಳಿಕ ಸ್ವಾಮೀಜಿ ಪೇಜಾವರ ಮಠಕ್ಕೆ ಪೂಜೆಗೆ ತೆರಳಿದರು.
