
ಮೂಡಬಿದಿರೆ: ಹೆತ್ತವರು ಓದು ಎಂದು ಹೇಳಿದ್ದಕ್ಕೆ ಕೋಪಗೊಂಡು ಇಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ನೇಣಿಗೆ ಶರಣಾದ ಘಟನೆ ಅಲಂಗಾರ್ನಲ್ಲಿ ನಡೆದಿದೆ.
ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದ ಇಂಜಿನಿಯರಿಂಗ್ ಓದುತ್ತಿದ್ದ ವಿದ್ಯಾಥಿ ಸಾತ್ವಿಕ್ ಭಂಡಾರಿ(21) ಮೃತ ದುರ್ದೈವಿ.
ಮಲಗಿದ್ದ ಮಗನನ್ನು ಏಳಿಸಿ, ಪರೀಕ್ಷೆ ಹತ್ತಿರ ಬಂತು ಓದು ಎಂದು ಹೇಳಿದ್ದಕ್ಕೆ ಕೋಪಗೊಂಡ ಸಾತ್ವಿಕ್ ಕೋಣೆಗೆ ಹೋಗಿ ನೇಣುಬಿಗಿದುಕೊಂಡಿದ್ದಾರೆ. ಈ ಸಂಬಂದ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
