
ನಟ ರಾಮ್ಚರಣ್ ಅವರು ಹೆಣ್ಣುಮಗುವಿಗೆ ತಂದೆಯಾಗಿದ್ದಾರೆ. ಮದುವೆಯಾಗಿ 10 ವರ್ಷದ ಬಳಿಕ ರಾಮ್ಚರಣ್ ಹಾಗೂ ಉಪಾಸನಾ ದಂಪತಿಗೆ ಹೆಣ್ಣುಮಗು ಜನಿಸಿದೆ. ಮನೆಗೆ ಮಹಾಲಕ್ಷ್ಮೀಯ ಆಗಮನದಿಂದ ಮೆಗಾಸ್ಟಾರ್ ಚಿರಂಜೀವಿ ಕುಟುಂಬ ಸಂತಸದಿಂದಿದ್ದು, ಚಿರಂಜೀವಿ ಇಂದು ಮುಂಜಾನೆಯೇ ಆಸ್ಪತ್ರೆಗೆ ಆಗಮಿಸಿ ಮಗುವನ್ನು ನೋಡಿ ಮನೆಗೆ ತೆರಳಿದ್ದಾರೆ.
ಹೈದರಾಬಾದ್ ನ ಜುಬ್ಲಿ ಹಿಲ್ಸ್ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಹೆರಿಗೆಯಾಗಿದ್ದು, ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎನ್ನಲಾಗಿದೆ. ಮಗುವನ್ನು ನೋಡಲು ರಾಮ್ಚರಣ್ ಅಭಿಮಾನಿಗಳು ಆಗಮಿಸಿದ್ದು, ಆಸ್ಪತ್ರೆಯ ಮುಂದೆ ನೆರೆದಿದ್ದಾರೆ.
