Home ಸುದ್ದಿಗಳು ರಾಷ್ಟ್ರೀಯ ಇಂದು ವಿಶ್ವ ಯೋಗದಿನ: ನ್ಯೂಯಾರ್ಕ್ ನಲ್ಲಿ ಆಚರಿಸಲಿರುವ ಮೋದಿ

ಇಂದು ವಿಶ್ವ ಯೋಗದಿನ: ನ್ಯೂಯಾರ್ಕ್ ನಲ್ಲಿ ಆಚರಿಸಲಿರುವ ಮೋದಿ

0
ಇಂದು ವಿಶ್ವ ಯೋಗದಿನ: ನ್ಯೂಯಾರ್ಕ್ ನಲ್ಲಿ ಆಚರಿಸಲಿರುವ ಮೋದಿ

ನವದೆಹಲಿ: ಇಂದು ವಿಶ್ವದಾದ್ಯಂತ ಯೋಗದಿನವನ್ನು ಆಚರಿಸಲಾಗುತ್ತಿದೆ. ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಪ್ರಧಾನಿ ಮೋದಿಯವರು ಯೋಗ ದಿನವನ್ನು ಆಚರಿಸಲಿದ್ದಾರೆ. ಮೂರು ದಿನಗಳ ಕಾಲ ಅಮೇರಿಕ ಪ್ರವಾಸದಲ್ಲಿರುವ ಮೋದಿಯವರು ನ್ಯೂಯಾರ್ಕ್ ನ ವಿಶ್ವಸಂಸ್ಥೆ ಕೇಂದ್ರ ಕಚೇರಿಯಲ್ಲಿ ಯೋಗ ದಿನವನ್ನು ಆಚರಿಸಲಿದ್ದಾರೆ.
ವಿಶ್ವದಾದ್ಯಂತ ಇಂದು ಯೋಗದಿನವನ್ನು ಸಂತಸದಿಂದ ಆಚರಿಸಲಾಗುತ್ತಿದೆ. ಕರ್ನಾಟಕದಲ್ಲಿ ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳಲ್ಲಿ ಯೋಗದಿನವನ್ನು ಆಚರಿಸುವುದು ಕಡ್ಡಾಯಗೊಳಿಸಲಾಗಿದೆ. ರಾಜ್ಯದ ಎಲ್ಲಾ ಪದವಿ ಕಾಲೇಜುಗಳಲ್ಲಿ ಯೋಗ ದಿನಾಚರನೆ ಆಚರಿಸುವುದರ ಜೊತೆಗೆ ಅದರ ಮಹತ್ವ ಮತ್ತು ಪ್ರಯೋಜನಗಳ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕು ಎಂದು ತಿಳಿಸಿದೆ. ಇದರೊಂದಿಗೆ ಯೋಗ ದಿನಾಚರಣೆಯ ಫೋಟೋವನ್ನು ಕಾಲೇಜಿನ ವೆಬ್‌ಸೈಟ್‌ನಲ್ಲಿ ಅಪ್ಲೋಡ್‌ಮಾಡುವಂತೆ ಸೂಚಿಸಲಾಗಿದೆ.

 

LEAVE A REPLY

Please enter your comment!
Please enter your name here