Home ಕರ್ನಾಟಕ ಜನರಿಗೆ ಬೆಲೆ ಏರಿಕೆ ಶಾಕ್:‌ ಒಮ್ಮೆಲೇ ಗಗನಕ್ಕೇರಿದ ಟೊಮ್ಯಾಟೊ ಬೆಲೆ

ಜನರಿಗೆ ಬೆಲೆ ಏರಿಕೆ ಶಾಕ್:‌ ಒಮ್ಮೆಲೇ ಗಗನಕ್ಕೇರಿದ ಟೊಮ್ಯಾಟೊ ಬೆಲೆ

0
ಜನರಿಗೆ ಬೆಲೆ ಏರಿಕೆ ಶಾಕ್:‌ ಒಮ್ಮೆಲೇ ಗಗನಕ್ಕೇರಿದ ಟೊಮ್ಯಾಟೊ ಬೆಲೆ

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರ ನಡೆಸುತ್ತಿದೆ. ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್‌ ಸರ್ಕಾರ ನೀಡಿದಂತಹ ಉಚಿತ ಯೋಜನೆಗಳನ್ನು ಜನರು ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಈ ನಡುವೆ ದಿನನಿತ್ಯ ಬಳಕೆಯ ವಸ್ತುಗಳ ಬೆಲೆಯಲ್ಲಿ ಭಾರೀ ಏರಿಕೆಯಾಗುತ್ತಿದೆ. ತರಕಾರಿ, ಹಣ್ಣು, ಬೇಳೆಕಾಳುಗಳ ಬೆಲೆ ದುಬಾರಿಯಾಗುತ್ತಿದೆ. ಅದರಲ್ಲೂ ಟೊಮ್ಯಾಟೊ ಬೆಲೆ ಗಗನಮುಖಿಯಾಗಿರುವುದು ಜನರಿಗೆ ಕಳವಳವನ್ನುಂಟು ಮಾಡಿದೆ.
ಹೌದು, ಕಳೆದ ಕೆಲವು ದಿನಗಳ ಹಿಂದೆ 20 -30ರೂ ಇದ್ದ ಟೊಮ್ಯಾಟೊ ಬೆಲೆ ಇದೀಗ ಒಂದೇ ಬಾರಿಗೆ ಕೆ.ಜಿಗೆ 80-100 ರೂಗೆ ಏರಿಕೆಯಾಗಿದೆ. ಇದರಿಂದಾಗಿ ಜನರು ಟೊಮ್ಯಾಟೋವನ್ನು ಖರೀದಿಸಲು ಹಿಂದೇಟು ಹಾಕುತ್ತಿದ್ದು, ಮಳೆಗಾಲದ ವಿಳಂಬ ಮತ್ತು ಅತಿಯಾದ ಬಿಸಿಲಿನ ಬೇಗೆ ಟೊಮ್ಯಾಟೊ ದರದಲ್ಲಿ ಏರಿಕೆ ಕಾರಣ ಎನ್ನಲಾಗುತ್ತಿದೆ.

 

LEAVE A REPLY

Please enter your comment!
Please enter your name here