Home ಕರ್ನಾಟಕ ಮನೆ ಬಾಗಿಲಿಗೆ ಬರ್ತಿದೆ ಗೃಹಜ್ಯೋತಿ ಯೋಜನೆ: ನೋಂದಣಿಗೆ ಮನೆಗೆ ಬರ್ತಾರೆ ಅಧಿಕಾರಿಗಳು

ಮನೆ ಬಾಗಿಲಿಗೆ ಬರ್ತಿದೆ ಗೃಹಜ್ಯೋತಿ ಯೋಜನೆ: ನೋಂದಣಿಗೆ ಮನೆಗೆ ಬರ್ತಾರೆ ಅಧಿಕಾರಿಗಳು

0
ಮನೆ ಬಾಗಿಲಿಗೆ ಬರ್ತಿದೆ ಗೃಹಜ್ಯೋತಿ ಯೋಜನೆ: ನೋಂದಣಿಗೆ ಮನೆಗೆ ಬರ್ತಾರೆ ಅಧಿಕಾರಿಗಳು

ಬೆಂಗಳೂರು: ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್‌ ಸರ್ಕಾರ ನೀಡಿದ್ದ 5 ಭರವಸೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಗೆ ಈಗಾಗಲೇ ಭರ್ಜರಿ ರೆಸ್ಪಾನ್ಸ್‌ ದೊರಕುತ್ತಿದೆ. ಜನರು ನೂಕು ನುಗ್ಗಲಿನಲ್ಲಿ ಹೋಗಿ ನೋಂದಣಿ ಮಾಡಿಸುತ್ತಿದ್ದಾರೆ. ಈ ನಡುವೆ ಬೆಸ್ಕಾಂ ಅಧಿಕಾರಿಗಳು ಮನೆ ಮನೆಗೆ ತೆರಳಿ ಗೃಹಜ್ಯೋತಿ ಯೋಜನೆಯ ನೋಂದಣಿ ಮಾಡಿಸಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಸೂಚಿಸಿದ್ದಾರೆ.
ಈ ಬಗ್ಗೆ ಕೆಡಿಪಿ ಸಭೆಯಲ್ಲಿ ಪ್ರಸ್ತಾಪಿಸಿದ ಅವರು, ಈಗಾಗಲೇ ಗೃಹಜ್ಯೋತಿ ಯೋಜನೆಗೆ ಜನರು ಅರ್ಜಿ ಸಲ್ಲಿಸುತ್ತಿದ್ದು, ಬೆಸ್ಕಾಂನವರು ಮನೆಮನೆಗೆ ತೆರಳಿ ಪ್ರಚಾರ ನಡೆಸಿ ಗೃಹಜ್ಯೋತಿ ಯೋಜನೆಯ ನೋಂದಣಿ ಮಾಡಿಸಬೇಕು ಎಂದು ಹೇಳಿದ್ದಾರೆ. ಗೃಹಜ್ಯೋತಿ ಯೋಜನೆಗೆ ರಾಜ್ಯದಲ್ಲಿ ಈಗಾಗಲೇ ಉತ್ತಮ ರೆಸ್ಪಾನ್ಸ್‌ ದೊರಕುತ್ತಿದ್ದು, ಈವರೆಗೆ ಒಟ್ಟು 61,70,044 ಮಂದಿ ನೋಂದಣಿ ಮಾಡಿಸಿಕೊಂಡಿದ್ದಾರೆ.
ಇನ್ನು, ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಸೈಬರ್‌ ಗಳಲ್ಲಿ ಹಣವನ್ನು ತೆಗೆದುಕೊಳ್ಳುವಂತಿಲ್ಲ. ಒಂದು ವೇಳೆ ತೆಗೆದುಕೊಂಡಲ್ಲಿ ಅಂತಹ ಸೈಬರ್‌ ಗಳ ಲೈಸನ್ಸ್‌ ಅನ್ನು ರದ್ದುಗೊಳಿಸಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಎಚ್ಚರಿಕೆಯನ್ನು ನೀಡಿದ್ದಾರೆ. ಅರ್ಜಿಗಳನ್ನು ಕೇವಲ ಆನ್‌ಲೈನ್‌ಮೂಲಕ ಮಾತ್ರ ಅಲ್ಲದೇ ಇಂಧನ ಇಲಾಖೆಯಿಂದ ಬಿಡುಗಡೆ ಮಾಡಿರುವ ಕ್ಯೂರ್‌ಸ್ಕ್ಯಾನ್‌ಮೂಲಕವು ಅರ್ಜಿ ಸಲ್ಲಿಸಬಹುದಾಗಿದೆ. ಈ ಯೋಜನೆಯ ಕುರಿತು ಏನಾದರೂ ಅನುಮಾನಗಳಿದ್ದಲ್ಲಿ ಸಹಾಯವಾಣಿ ಸಂಖ್ಯೆ 1912 ಕ್ಕೆ ಕರೆ ಮಾಡಿ ಪರಿಹಾರ ಕಂಡುಕೊಳ್ಳಬಹುದಾಗಿದೆ.

 

LEAVE A REPLY

Please enter your comment!
Please enter your name here