
ಗಂಗೊಳ್ಳಿ: ಮೂರು ವರ್ಷಗಳ ಬಳಿಕ ದುಬೈನಿಂದ ಮರಳಿದ್ದ ಯುವಕ ಮೀನು ಖರೀದಿಯ ನೆಪದಲ್ಲಿ ತನ್ನ ಮೀನುಗಾರ್ತಿ ತಾಯಿಗೆ ಸರ್ಪ್ರೈಸ್ ನೀಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದ್ದು, ವಿಡಿಯೋ ನೋಡಿದ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಹೌದು, ಮೂರು ವರ್ಷಗಳ ಹಿಂದೆ ದುಬೈಗೆ ತೆರಳಿದ್ದ ಗಂಗೊಳ್ಳಿ ನಿವಾಸಿ ರೋಹಿತ್ ಯಾರಿಗೂ ಮಾಹಿತಿ ನೀಡದೇ ಸ್ವದೇಶಕ್ಕೆ ಬಂದಿದ್ದಾರೆ. ಬಳಿಕ ತನ್ನ ತಾಯಿಗೆ ಸರ್ಪ್ರೈಸ್ ನೀಡುವ ಹಿನ್ನೆಲೆ ನೇರವಾಗಿ ಗಂಗೊಳ್ಳಿ ಬಂದರಿನ ಬಳಿ ಆಕೆ ಮೀನು ಮಾರುವ ಸ್ಥಳಕ್ಕೆ ಬಂದು ಮೀನು ಖರೀದಿಸುವ ನಾಟಕವಾಡಿದ್ದಾರೆ.
ಈ ವೇಳೆ ರೋಹಿತ್ ತನ್ನ ತಾಯಿಗೆ ಗೊತ್ತಾಗಬಾರದು ಎಂದು ಮುಖಕ್ಕೆ ಬಟ್ಟಕಟ್ಟಿಕೊಂಡಿದ್ದರು. ಆದರೆ, ಆತನ ಹಾವಭಾವ ಹಾಗೂ ಸ್ವರ ಗಮನಿಸಿದ ಆತನ ತಾಯಿ ಆತನ ಮುಖದಲ್ಲಿ ಖರವಸ್ತ್ರವನ್ನು ಸರಿಸಿ ನೋಡಿದಾಗ ಆತನ ಮಗನೇ ಎಂದು ತಿಳಿದು ತಕ್ಷಣ ಮಗನನ್ನು ಬಿಗಿದಪ್ಪಿಕೊಳ್ಳುತ್ತಾರೆ. ತನ್ಸ ಮಗನನ್ನು ನೋಡಿದ ಸಂತೋಷದಿಂದ ತಾಯಿ ಕಣ್ಣೀರು ಒರೆಸಿಕೊಳ್ಳುತ್ತಿರುವ ದೃಶ್ಯ ಇದೀಗ ಎಲ್ಲಡೆ ವೈರಲ್ ಆಗುತ್ತಿದೆ.
