
ಉಡುಪಿ: ಸರ್ಕಾರಿ ಕಚೇರಿಗೆ ನುಗ್ಗಿ ಮುಖ್ಯವಾದ ಕಡತಗಳನ್ನು ಕಳ್ಳರು ಕೊಳ್ಳೆಹೊಡೆದಿರುವ ಘಟನೆ ಉಡುಪಿ ತಾಲೂಕು ಕಛೇರಿಯ ಅಧೀನಕ್ಕೆ ಒಳಪಟ್ಟ ಬನ್ನಂಜೆಯ ಗಾಂಧಿ ಭವನದಲ್ಲಿ ನಡೆದಿದೆ.
ಹಿಂದಿನಿಂದಲೂ ಅಧಿಕಾರಿಗಳು ತಾಲೂಕು ಕಚೇರಿಯ ಅತ್ಯಮೂಲ್ಯ ದಾಖಲೆಗಳನ್ನು ಗಾಂಧಿ ಭವನದಲ್ಲಿ ಶೇಖರಿಸಿಡುತ್ತಿದ್ದರು. ಗಾಂಧಿ ಭವನದ ಹಿಂಬದಿ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ದಾಖಲೆಗಳನ್ನು ಕಳವು ಮಾಡಿರುವುದಾಗಿ ತಾಲೂಕು ಕಚೇರಿಯ ಪ್ರಥಮ ದರ್ಜೆ ಸಹಾಯಕ ನಗರ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರ ದಾಖಲಾಗಿದೆ.
