
ಬ್ರಹ್ಮಾವರ: ಮುಂಜಾನೆ ಬೈಕ್ ನಲ್ಲಿ ಕೆಲಸಕ್ಕೆ ತೆರಳುತ್ತಿದ್ದ ವೇಳೆ ತುಂಡಾದ ವಿದ್ಯುತ್ ತಂತಿ ತಗುಲಿ ಮೀನುಗಾರನೋರ್ವ ಸಾವನ್ನಪ್ಪಿರುವ ಘಟನೆ ಶನಿವಾರ ಬ್ರಹ್ಮಾವರ ಸಮೀಪದ ಉಪ್ಪೂರು ಅಮ್ಮುಂಜೆ ಎಂಬಲ್ಲಿ ನಡೆದಿದೆ.
ಮೃತರನ್ನು ಧನಂಜಯ ಕುಂದರ್(60) ಎಂದು ಗುರುತಿಸಲಾಗಿದೆ. ರಾತ್ರೀ ಸುರಿದ ಗಾಳಿ ಮಳೆಗೆ ವಿದ್ಯುತ್ ತಂತಿ ತುಂಡಾಗಿ ರಸ್ತೆಗೆ ಅಡ್ಡವಾಗಿ ಬಿದ್ದಿದ್ದು, ಇದನ್ನು ಗಮನಿಸದ ಧನಂಜಯ್ ವಿದ್ಯುತ್ ತಂತಿಯನ್ನು ಸ್ಪಶಿಸಿದ್ದಾರೆ. ಇದನ್ನು ಗಮನಿಸಿದ ಆತನ ಸಂಬಂಧಿಯೋವರು ಮೆಸ್ಕಾಂಗೆ ಸುದ್ದಿ ತಿಳಿಸಿ ವಿದ್ಯುತ್ ಸಂಪಕ ಕಡಿತಗೊಳಿಸಿದ್ದಾರೆ. ಆದಾಗಲೇ ಸಾಕಷ್ಟು ಸಮಯ ಕಳೆದಿರುವುದರಿಂದ ವಿದ್ಯುತ್ ಶಾಕ್‌ನಿಂದಾಗಿ ಅಸ್ವಸ್ಥಗೊಂಡಿದ್ದ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುತ್ತಿರುವಾಗಲೇ ಮಾಗಮಧ್ಯದಲ್ಲೇ ಸಾವನ್ನಪ್ಪಿರುವುದಾಗಿ ಮಣಿಪಾಲ ಖಾಸಗಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
