Home ಕರ್ನಾಟಕ ಶಿವಮೊಗ್ಗದ ಗಲಾಟೆಯ ಕಾರಣೀಕರ್ತ ವಿರುದ್ಧ ಸೂಕ್ತ ಕ್ರಮಕ್ಕೆ ಹಿಂಜಾವೆ ಮನವಿ

ಶಿವಮೊಗ್ಗದ ಗಲಾಟೆಯ ಕಾರಣೀಕರ್ತ ವಿರುದ್ಧ ಸೂಕ್ತ ಕ್ರಮಕ್ಕೆ ಹಿಂಜಾವೆ ಮನವಿ

0
ಶಿವಮೊಗ್ಗದ ಗಲಾಟೆಯ ಕಾರಣೀಕರ್ತ ವಿರುದ್ಧ ಸೂಕ್ತ ಕ್ರಮಕ್ಕೆ ಹಿಂಜಾವೆ ಮನವಿ

ಸಾಗರ: ಶಿವಮೊಗ್ಗದಲ್ಲಿ ಈದ್‌ ಮಿಲಾದ್‌ ಮೆರವಣಿಗೆ ಸಂದರ್ಭ ನಡೆದ ಕಲ್ಲು ತೂರಾಟ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇದೀಗ ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿ ಮಂಗಳವಾರ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಡಿವೈಎಸ್‌ಪಿ ಕಚೇರಿಗೆ ಮನವಿ ಸಲ್ಲಿಸಿದ್ದಾರೆ.
ಈ ವೇಳೆ ಹಿಂದೂ ಜಾಗರಣಾ ವೇದಿಕೆ ಅಧ್ಯಕ್ಷ ಕೆ.ಹೆಚ್‌.ಸುಧೀಂದ್ರ ಮಾತನಾಡಿ, ಈದ್‌ ಮಿಲಾದ್‌ ಮೆರವಣಿಗೆಯಲ್ಲಿ ಹಿಂದೂ ಸಮುದಾಯದ ತೇಜೋವಧೆ ಮಾಡುವ ರೀತಿಯಲ್ಲಿ ವರ್ತನೆ ಮಾಡಿರುವುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಹಿಂದೂ ಧರ್ಮವನ್ನು ಟಾರ್ಗೆಟ್ ಮಾಡುವ ರೀತಿಯಲ್ಲಿ ಘೋಷಣೆ ಕೂಗಿರುವುದು ಸಮಾಜದಲ್ಲಿ ಅಶಾಂತಿ ವಾತಾವರಣವನ್ನು ಸೃಷಿಸುವ ಅಪಾಯವಿದೆ. ಈ ಹಿನ್ನೆಲೆ ಪೊಲೀಸ್‌ ಇಲಾಖೆಯು ಮೆರವಣಿಗೆಯಲ್ಲಿ ಅನಗತ್ಯ ಘೊಷಣೆಯನ್ನು ಕೂಗಿ ಸಮಾಜದ ಶಾಮತಿ ಕದಡುವ ಪ್ರಯತ್ನ ಮಾಡಿದವರನ್ನು ವಶಕ್ಕೆ ಪಡೆದು ಸೂಕ್ತ ವಿಚಾರಣೆ ನಡೆಸಬೇಕು. ಇಲ್ಲವಾದಲ್ಲಿ ವೆದಿಕೆ ವತಿಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನು, ಈ ಸಂದರ್ಭ ಕೋಮಲ್‌ ರಾಘವೇಂದ್ರ, ನಂದೀಶ್‌ ಸೂರಗುಪ್ಪೆ, ಶ್ರೀಧರ್‌ ಸಾಗರ್‌, ಐ.ವಿ.ಹೆಗಡೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here