Home ಕರ್ನಾಟಕ ಕರಾವಳಿ ಒಂದೇ ತರಗತಿಯಲ್ಲಿ 5 ಜೋಡಿ ಅವಳಿ ಮಕ್ಕಳು: ಶಿಕ್ಷಕರು ಫುಲ್‌ ಕನ್‌ಫ್ಯೂಸ್‌

ಒಂದೇ ತರಗತಿಯಲ್ಲಿ 5 ಜೋಡಿ ಅವಳಿ ಮಕ್ಕಳು: ಶಿಕ್ಷಕರು ಫುಲ್‌ ಕನ್‌ಫ್ಯೂಸ್‌

0
ಒಂದೇ ತರಗತಿಯಲ್ಲಿ 5 ಜೋಡಿ ಅವಳಿ ಮಕ್ಕಳು: ಶಿಕ್ಷಕರು ಫುಲ್‌ ಕನ್‌ಫ್ಯೂಸ್‌

ಬಂಟ್ವಾಳ: ಒಂದೇ ರೂಪದ ಏಳು ಜನ ಇರುತ್ತಾರೆ ಎಂದು ನಮ್ಮ ಪೂವಜರು ಹೇಳುತ್ತಿರುವುದನ್ನು ನಾವು ಕೇಳಿರುತ್ತೇವೆ. ಕೆಲವೊಮ್ಮೆ ನೋಡಿರುತ್ತೇವೆ ಕೂಡ. ಅದರಲ್ಲೂ ಅವಳಿ ಜವಳಿ ಮಕ್ಕಳಲ್ಲಿ ಹೆಚ್ಚಾಗಿ ಒಂದೇ ತರಹ ಇರುವವರನ್ನು ನಾವು ನೋಡುತ್ತೇವೆ. ಅವಳಿ ಜವಳಿ ಎಲ್ಲಾ ಮಕ್ಕಳು ನೋಡಲು ಒಂದೇ ತರಹ ಇರುವುದಿಲ್ಲ. ಕೆಲವೊಬ್ಬರು ಬೇರೆ ಬೇರೆ ಮುಖಛರ್ಯೆಯನ್ನು ಹೊಂದಿರುತ್ತಾರೆ. ಹಾಗೆಯೇ ಅಲ್ಲೊಂದು ಇಲ್ಲೊಂದು ಅವಳಿ ಜವಳಿ ಮಕ್ಕಳನ್ನು ನಾವು ನೋಡುತ್ತೇವೆ. ಆದರೆ ಬಂಟ್ವಾಳ ತಾಲೂಕಿನ ಸಜೀಪಮೂಡ ಸಕಾರಿ ಪದವಿ ಪೌವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಮಾತ್ರ ಒಂದೇ ತರಗತಿಯಲ್ಲಿ 5 ಜೋಡಿ ಅವಳಿ ಜವಳಿ ವಿದ್ಯಾಥಿಗಳು ಕಂಡುಬಂದಿರುವುದು ಅಚ್ಚರಿ ಮೂಡಿಸಿದೆ.
8 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಈ ವಿದ್ಯಾಥಿನಿಯರು ಹೆಚ್ಚಾಗಿ ರೂಪದಲ್ಲಿ ಮತ್ತು ಚಟುವಟಿಕೆಯಲ್ಲಿ ಒಂದೇ ಸಮನಾಗಿರುವುದು ಆಶ್ಚಯಸ ಸಂಗತಿಯಾಗಿದೆ. ಈ 5 ಜೋಡಿ ಅವರಳಿ ಮಕ್ಕಳ ಪೈಕಿ ಒಂದು ಜೋಡಿ ಹಿಂದೂ ಸಮುದಾಯದ ಹಾಗೂ ಉಳಿದ ನಾಲ್ಕು ಜೋಡಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಮಕ್ಕಳಾಗಿವೆ. ಆಯಿಷಾ ಝಿಬಾ-ಖತೀಝಾ ಝಿಯಾ, ಶ್ರಣವಿ-ಜಾನವಿ, ಫಾತಿಮತ್‌ ಕಮಿಲ-ಫಾತಿಮತ್‌ ಸಮಿಲ, ಆಯಿಷಾ ರೈಫಾ- ಫಾತಿಮಾ ರೌಲ, ದುಲೈಕತ್‌ ರುಫಿದಾ-ಹಲೀಮತ್‌ ರಾಫಿದ ಎಂಬ 5 ಜೋಡಿ ವಿದ್ಯಾಥಿಗಳು ಒಂದೇ ತರಗತಿಯಲ್ಲಿ ಓದುತ್ತಿದ್ದು, ಕೆಲವೊಮ್ಮೆ ಶಿಕ್ಷಕರು ಮತ್ತು ಅವರ ಸಹಪಾಠಿಗಳಿಗೆ ಕನ್‌ಫ್ಯೂಶನ್‌ ಉಂಟು ಮಾಡುತ್ತದೆ ಎನ್ನಲಾಗಿದೆ.

 

LEAVE A REPLY

Please enter your comment!
Please enter your name here