Home ಕರ್ನಾಟಕ ಡಯಾಲಿಸಿಸ್ ರೋಗಿಗಳ‌ ಸಮಸ್ಯೆ ಪರಿಹರಿಸಬೇಕಾದ ರಾಜ್ಯ ಸರ್ಕಾರ ನಿದ್ದೆ ಮಾಡುತ್ತಿದೆ: ಸಚಿವೆ ಶೋಭಾ ಕರಂದ್ಲಾಜೆ ಆಕ್ರೋಶ

ಡಯಾಲಿಸಿಸ್ ರೋಗಿಗಳ‌ ಸಮಸ್ಯೆ ಪರಿಹರಿಸಬೇಕಾದ ರಾಜ್ಯ ಸರ್ಕಾರ ನಿದ್ದೆ ಮಾಡುತ್ತಿದೆ: ಸಚಿವೆ ಶೋಭಾ ಕರಂದ್ಲಾಜೆ ಆಕ್ರೋಶ

0

ಉಡುಪಿ: ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಡಯಾಲಿಸಿಸ್ ಬೆಡ್ ಗಳೆಲ್ಲ ಖಾಲಿ ಇದೆ. ಡಯಾಲಿಸಿಸ್ ಕಾರ್ಯ ಸಂಪೂರ್ಣ ಸ್ಥಗಿತಗೊಂಡಿದ್ದು, ಎಲ್ಲಾ 11 ಡಯಾಲಿಸಿಸ್ ಯಂತ್ರಗಳು ಕೂಡ ವರ್ಕ್ ಆಗುತ್ತಿಲ್ಲ. ರಾಜ್ಯ ಸರ್ಕಾರ ನಿದ್ದೆ ಮಾಡುತ್ತಿದ್ದು, ಬಡವರ ಗೋಳನ್ನು ಕೇಳುವವರಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಒಂದು ತಿಂಗಳಿನಿಂದ ರೋಗಿಗಳು ಖಾಸಗಿ ಆಸ್ಪತ್ರೆಗೆ ಹೋಗುತ್ತಿದ್ದಾರೆ. ರಾಜ್ಯದ 122 ಕೇಂದ್ರದಲ್ಲಿಯೂ ಕೂಡ ಎಸ್ ಕೆ ಸಂಜೀವಿನಿ ಗುತ್ತಿಗೆ ಸಂಸ್ಥೆಯ ಡಯಾಲಿಸೀಸ್ ಯಂತ್ರಗಳು ಸ್ಥಗಿತವಾಗಿದೆ. ಅಕ್ಟೋಬರ್ 1ರಿಂದ ನಮ್ಮ ಸೇವೆ ನಿಲ್ಲಿಸುತ್ತೇವೆ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಹೊಸ ಮಷಿನ್ ಇಲ್ಲ, ರಿಪೇರಿ ಕಾರ್ಯ ಆಗುತ್ತಿಲ್ಲ. ಆರೋಗ್ಯ ಸೇವೆ ನಡೆಯುತ್ತಿಲ್ಲ. ಆರೋಗ್ಯ ಇಲಾಖೆ ಕಮಿಷನರ್ ಗೆ ಮಾಹಿತಿ ಇಲ್ಲ. ಸರ್ಕಾರ ಏನು ಮಾಡುತ್ತಿದೆ?. ಬಡವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ ಬಿಲ್ ಭರಿಸುವವರು ಯಾರು?. ಬೇಜವಾಬ್ದಾರಿ ಸರ್ಕಾರ ಅವರವರೇ ಕಿತ್ತಾಡೋದ್ರಲ್ಲಿ ತಲ್ಲೀನವಾಗಿದೆ ಎಂದು ಗುಡುಗಿದ್ದಾರೆ.

ರಾಜ್ಯದ ಎಲ್ಲಾ ಡಯಾಲಿಸಿಸ್ ಕೇಂದ್ರಗಳ ಪರಿಸ್ಥಿತಿ ಇದೆ ಆಗಿದೆ. ರೋಗಿಗಳ ಡಯಾಲಿಸಿಸ್ ಬಿಲ್ ಸರ್ಕಾರ ವಾಪಸ್ ಕೊಡಬೇಕು. ಖಾಸಗಿ ವ್ಯಕ್ತಿಗಳು, ಶಾಸಕರು ಹಣ ಭರಿಸಲು ಸಾಧ್ಯವಿಲ್ಲ. ರಾಜ್ಯದ ಬಡ ವಗದ ಕಿಡ್ನಿ ರೋಗಿಗಳ ಪರಿಸ್ಥಿತಿ ಏನಾಗಿದೆ ಗೊತ್ತಿಲ್ಲ. ಸಮಸ್ಯೆ ಗೊತ್ತಿದ್ದರೂ ರಾಜ್ಯ ಸರ್ಕಾರ ಪರ್ಯಾಯ ವ್ಯವಸ್ಥೆ ಯಾಕೆ ಮಾಡಿಲ್ಲ. ರಾಜ್ಯ ವಿನಂತಿ ಮಾಡಿದರೆ ಕೇಂದ್ರ ಸಹಕಾರ ಮಾಡುತ್ತದೆ. ಕೇಂದ್ರ ಸರ್ಕಾರ ಹಣ ಕೊಡಲು ಸಿದ್ಧವಿದೆ. ಹೊಸ ಯಂತ್ರಗಳು ಮತ್ತು ತರಬೇತಿಯನ್ನು ಕೇಂದ್ರ ಸರ್ಕಾರ ಕೊಡುತ್ತದೆ. ರಾಜ್ಯ ಸರ್ಕಾರ ನಾಲ್ಕೇ ತಿಂಗಳಲ್ಲಿ ದಿವಾಳಿಯಾಗಿದೆ ಎಂದರು.

 

LEAVE A REPLY

Please enter your comment!
Please enter your name here