Home ಕ್ರೀಡೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಭಾರತ ತಂಡದ ಆರಂಭಿಕ ಆಟಗಾರ ಶುಭ್‌ಮನ್‌ ಗಿಲ್‌

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಭಾರತ ತಂಡದ ಆರಂಭಿಕ ಆಟಗಾರ ಶುಭ್‌ಮನ್‌ ಗಿಲ್‌

0

ಚೆನ್ನೈ: ಐಸಿಸಿ ಪುರಷರ ಕ್ರಿಕೆಟ್‌ ವಿಶ್ವಕಪ್‌ 2023ರ ಪಂದ್ಯ ಆರಂಭಕ್ಕೂ ಮುನ್ನವೇ ಡೆಂಗ್ಯೂಗೆ ತ್ತುತ್ತಾಗಿ ಪ್ಲೇಟ್‌ ಲೇಟ್‌ ಕಡಿಮೆಯಾಗಿರುವ ಹಿನ್ನೆಲೆ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದ ಭಾರತ ತಂಡದ ಆರಂಭಿಕ ಆಟಗಾರ ಶುಭ್‌ಮನ್‌ ಗಿಲ್‌ ಇದೀಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಹೇಳಲಾಗಿದೆ. ಚೆನ್ನೈನ ಹೋಟೆಲ್‌ ಒಂದರಲ್ಲಿ ಶುಭ್‌ಮನ್‌ ಗಿಲ್‌ ವಿಶ್ರಾಂತಿ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಡೆಂಗ್ಯೂಗೆ ತುತ್ತಾಗಿದ್ದ ಶುಭ್‌ಮನ್‌ ಗಿಲ್‌ ಅವರ ಪ್ಲೇಟ್‌ಲೇಟ್‌ ಸಂಖ್ಯೆ 70,000ಕ್ಕೆ ಇಳಿದಿದ್ದ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ವಿಶ್ವಕಪ್‌ ಆರಂಭಕ್ಕೂ ಮುನ್ನವೇ ಅವರು ಡೆಂಗ್ಯೂಗೆ ತುತ್ತಾಗಿದ್ದರಿಂದ ಅವರು ಭಾರತ ತಂಡದಿಂದ ದೂರವೇ ಉಳಿದಿದ್ದರು. ಈ ಹಿನ್ನೆಲೆ ಅವರು ಚೆನ್ನೈನಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯವನ್ನು ಕೂಡ ಅವರು ಆಡಿರಲಿಲ್ಲ.


ಇನ್ನು, ಆಸ್ಪತ್ರೆಯಿಂದ ಈಗಷ್ಟೇ ಡಿಸ್ಚಾರ್ಜ್ ಆಗಿರುವ ಶುಭ್‌ಮನ್‌ ಗಿಲ್‌ ಇಂದು ನಡೆಯಲಿರುವ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲೂ ಆಟ ಆಡುವುದಿಲ್ಲ ಎನ್ನಲಾಗಿದೆ. ಶುಭ್‌ಮನ್‌ ಗಿಲ್ ಆರೋಗ್ಯದ ಬಗ್ಗೆ ಬಿಸಿಸಿಐ ಹೇಳಿಕೆ ಹೊರಡಿಸಿದ್ದು, “ಶುಭ್ಮನ್ ಗಿಲ್ ಅಕ್ಟೋಬರ್ 9, 2023 ರಂದು ತಂಡದೊಂದಿಗೆ ದೆಹಲಿಗೆ ಪ್ರಯಾಣಿಸುವುದಿಲ್ಲ. ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಚೆನ್ನೈನಲ್ಲಿ ನಡೆದ ತಂಡದ ಮೊದಲ ಪಂದ್ಯವನ್ನು ಮಿಸ್ ಮಾಡಿಕೊಂಡ ಆರಂಭಿಕ ಬ್ಯಾಟರ್, ದೆಹಲಿಯಲ್ಲಿ ನಡೆಯಲಿರುವ ಅಫ್ಘಾನಿಸ್ತಾನ ವಿರುದ್ಧದ ಮುಂದಿನ ಪಂದ್ಯವನ್ನು ಮಿಸ್ ಮಾಡಿಕೊಳ್ಳಲಿದ್ದಾರೆ. ಪ್ರಸ್ತುತ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿರುತ್ತಾರೆ” ಎಂದು ತಿಳಿಸಿದೆ.

 

 

LEAVE A REPLY

Please enter your comment!
Please enter your name here