Home ಕರ್ನಾಟಕ ಕರಾವಳಿ ಉಡುಪಿಯಲ್ಲಿ ಇಂದು-ನಾಳೆ ನಿಷೇಧಾಜ್ಞೆ ಜಾರಿ: ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ

ಉಡುಪಿಯಲ್ಲಿ ಇಂದು-ನಾಳೆ ನಿಷೇಧಾಜ್ಞೆ ಜಾರಿ: ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ

0
ಉಡುಪಿಯಲ್ಲಿ ಇಂದು-ನಾಳೆ ನಿಷೇಧಾಜ್ಞೆ ಜಾರಿ: ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ

ಉಡುಪಿ: ಜಿಲ್ಲೆಯಲ್ಲಿ ಮಹಿಷಾ ದಸರಾ ನಡೆಸಲು ಅನುಮತಿ ಸಿಕ್ಕ ಬೆನ್ನಲ್ಲೇ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಇದಿನಿಂದ ಅಕ್ಟೋಬರ್‌ 15ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ.

ಈ ಬಗ್ಗೆ ಆದೇಶ ಹೊರಡಿಸಿರುವ ಅವರು, ಜಿಲ್ಲೆಯಾದ್ಯಂತ ಇಂದು ಬೆಳಿಗ್ಗೆ 6ಗಂಟೆಯಿಂದ ಜಾರಿಗೆ ಬರುವಂತೆ ಅಕ್ಟೋಬರ್‌ 15ರ ಸಂಜೆ 6ರವರೆಗೆ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ. ಆದೇಶದಲ್ಲಿ ಸೂಚಿಸಿರುವಂತೆ ಈ ಅವಧಿಯಲ್ಲಿ ಮಹಿಷ ಪರ-ವಿರೋಧ ಘೋಷಣೆ ಕೂಗುವುದು, ಬ್ಯಾನರ್‌ ಅಳವಡಿಸುವುದು, ಪ್ರಚೋದನಾಕಾರಿ ಭಾಷಣ ಮಾಡುವುದು, ಮೆರವಣಿಗೆ ಮಾಡುವುದು, ಪೋಸ್ಟರ್‌ಗಳನ್ನು‌ ಅಳವಡಿಸುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನು, ನಿಷೇಧಾಜ್ಞೆ ಜಾರಿ ಇರುವ ಈ ವೇಳೆ ನಿಯಮ ಉಲ್ಲಂಘನೆ ಮಾಡವವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವುದಾಗಿಯೂ ಕೂಡ ಸೂಚಿಸಲಾಗಿದೆ.

 

LEAVE A REPLY

Please enter your comment!
Please enter your name here