Home ಸರಕಾರಿ ಯೋಜನೆಗಳು ಕೇಂದ್ರ ಸರಕಾರ ಕೇಂದ್ರ ಸರ್ಕಾರದಿಂದ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ಬಂಪರ್ ಬೋನಸ್ ನೀಡಿದ ಕೇಂದ್ರ

ಕೇಂದ್ರ ಸರ್ಕಾರದಿಂದ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ಬಂಪರ್ ಬೋನಸ್ ನೀಡಿದ ಕೇಂದ್ರ

0
ಕೇಂದ್ರ ಸರ್ಕಾರದಿಂದ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ: ಬಂಪರ್ ಬೋನಸ್ ನೀಡಿದ ಕೇಂದ್ರ

ಶಿಕ್ಷಣ ಪಡೆದವರು ಸರ್ಕಾರಿ ಜಾಬ್ ಗಿಟ್ಟಿಸಿಕೊಳ್ಳಬೇಕೆಂಬ ಕನಸನ್ನು ಬಹಳಷ್ಟು ಜನ ಇಟ್ಟು ಕೊಂಡಿರುತ್ತಾರೆ. ಇಂದು ಸರ್ಕಾರಿ ನೌಕರಿಗಾಗಿ ಸರ್ಕಾರ ಹಲವು ರೀತಿಯ ಬಂಪರ್ ಕೊಡುಗೆಗಳನ್ನು ನೀಡುತ್ತಾ ಇದೆ. ಇದೀಗ ಹಬ್ಬದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌ ನೀಡಿದ್ದು, ಏನು ಆ ಗುಡ್ ನ್ಯೂಸ್ ಎಂಬ ಮಾಹಿತಿ ಇಲ್ಲಿದೆ.

ಬೋನಸ್ ನಿಗದಿ ಪಡಿಸಿದೆ
ಗ್ರೂಪ್‌ ಸಿ, ಗ್ರೂಪ್‌ ಡಿ ಮತ್ತು ಗ್ರೂಪ್‌ ಬಿ ಯ ಕೆಲವು ವರ್ಗಗಳಿಗೆ ಸೇರಿದ ಸರ್ಕಾರಿ ಉದ್ಯೋಗ ಹೊಂದಿರುವ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರವು ದೀಪಾವಳಿ ಬೋನಸ್‌ ಅನ್ನು ನೀಡುವುದಾಗಿ ತಿಳಿಸಿದೆ. ಗ್ರೂಪ್ ಸಿ, ಡಿ ನೌಕರರು ಮತ್ತು ಗುತ್ತಿಗೆ ಆಧಾರಿತ ಉದ್ಯೋಗಿಗಳು ನಿಗದಿ ಪಡಿಸಿದ ಸೇವಾ ನಿಯಮಗಳನ್ನು ಪೂರೈಸಿದರೆ ಬೋನಸ್ ಪಡೆಯಲು ಸಾಧ್ಯ ಎಂದಿದ್ದಾರೆ‌‌.

ತುಟ್ಟಿಭತ್ಯೆ ಹೆಚ್ಚಳ
ಕೆಲವು ದಿನಗಳಿಂದ ಸರ್ಕಾರಿ ನೌಕರರು ಇದೇ ವಿಚಾರವಾಗಿ ಕಾದು ಕುಳಿತ್ತಿದ್ದರು. ಹೌದು ಸರ್ಕಾರಿ ನೌಕರರ ತುಟ್ಟಿ ಭತ್ಯೆ ಹೆಚ್ಚಳ ಕೂಡ ಆಗಲಿದೆ. ಇದೇ ತಿಂಗಳು ಸರ್ಕಾರಿ ನೌಕರರ ವೇತನದಲ್ಲಿ ಏರಿಕೆ ಆಗಲಿದ್ದು, 7ನೇ ವೇತನ ಆಯೋಗದ ಪ್ರಕಾರ 4% ರಷ್ಟು ಡಿಎ ಹೆಚ್ಚಳವಾಗಲಿದ್ದು ನೌಕರರ ಮಾಸಿಕ ವೇತನವು ಹೆಚ್ಚಾಗಲಿದೆ.

ಡಿಎ ಹೆಚ್ಚಳ

ತುಟ್ಟಿ ಭತ್ಯೆ ಹೆಚ್ಚಳ ಅಕ್ಟೋಬರ್‌ನಿಂದಲೆ ಆಗಲಿದ್ದು ಅದರಂತೆ ಶೇಕಡಾ ನಾಲ್ಕರಷ್ಟು ಡಿಎ ಹೆಚ್ಚಳ ಆಗಲಿದ್ದು, ಕೇಂದ್ರ ಸರ್ಕಾರಿ ನೌಕರರಿಗೆ ಭಾರಿ ವೇತನ ಹೆಚ್ಚಳವಾಗಿದೆ. ಈಗ ಇರುವ ಡಿಎ 42 ರಿಂದ 46 ಕ್ಕೆ ಹೆಚ್ಚಳ ಆಗುತ್ತದೆ.

ಪ್ರಯೋಜನ ಪಡೆಯಲಿದ್ದಾರೆ

ಈ ತುಟ್ಟಿ ಭತ್ಯೆ ಹೆಚ್ಚಳದ ನಿರ್ಧಾರದಿಂದ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಪ್ರಯೋಜನ ಪಡೆಯಲಿದ್ದು, ಹಬ್ಬದ ಸಂದರ್ಭದಲ್ಲಿಯೇ ಈ ನಿರ್ಧಾರ ಕೈಗೊಂಡಿದ್ದು, ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಬಹಳಷ್ಟು ಅನುಕೂಲವಾಗಲಿದೆ.

 

LEAVE A REPLY

Please enter your comment!
Please enter your name here