
ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆಗಳು ಈಗಾಗಲೇ ಆರಂಭ ವಾಗಿದ್ದು, ಅದರಲ್ಲಿ ಮುಖ್ಯವಾದ ಯೋಜನೆ ಎಂದರೆ ಅದು ಗೃಹಲಕ್ಷ್ಮೀ ಯೋಜನೆ. ಈಗಾಗಲೇ ಈ ಯೊಜನೆಗೆ ಆಗಸ್ಟ್ 30ರಂದು ಚಾಲನೆ ಸಿಕ್ಕಿದೆ. ರಾಜ್ಯದ ಮಹಿಳೆಯರಿಗೆ ಮಾಸಿಕ 2,000 ರೂಪಾಯಿಗಳ ಆರ್ಥಿಕ ನೆರವು ನೀಡುವ ಯೋಜನೆ ಇದಾಗಿದ್ದು, ಈಗಾಗಲೇ ಮೊದಲ ಕಂತಿನ ಹಣವನ್ನು ಕೆಲವು ಮಹಿಳೆಯರು ಪಡೆದುಕೊಂಡಿದ್ದಾರೆ. ಇದೀಗ ಈ ಯೋಜನೆ ಬಗ್ಗೆ ಹೊಸ ಆಪ್ಡೆಟ್ ಮಾಹಿತಿ ಯೊಂದು ಬಂದಿದ್ದು ಈ ಬಗ್ಗೆ ಮಹಿಳೆಯರು ತಿಳಿದುಕೊಳ್ಳಲೆಬೇಕಾಗಿದೆ.
ಮಾರ್ಗಸೂಚಿ ಬಿಡುಗಡೆ ಮಾಡಿದೆ
ಈಗಾಗಲೇ ಗೃಹಲಕ್ಷ್ಮಿ ಯೋಜನೆಗೆ ಯಾರೆಲ್ಲ ಅರ್ಜಿ ಸಲ್ಲಿಸಬಹುದು?ಯಾರಿಗೆ ಈ ಯೋಜನೆ ಆಫ್ಲೈ ಆಗಲಿದೆ ಎನ್ನುವ ಮಾರ್ಗಸೂಚಿಗಳು ಬಿಡುಗಡೆಯಾಗಿದೆ. ಈ ಸೌಲಭ್ಯ ಕ್ಕೆ ಸಲ್ಲಿಸಬೇಕಾಗಿರುವ ಅರ್ಜಿಯ ನಮೂನೆಯನ್ನು ಈ ಹಿಂದೆಯೇ ಬಿಡುಗಡೆ ಮಾಡಲಾಗಿದ್ದು, ಕೆಲವು ಮಹಿಳೆಯರು ಬೇಕಾದ ದಾಖಲೆಗಳನ್ನು ಸರಿಪಡಿಸದೇ ಇರುವುದರಿಂದ ಹಣ ಕೂಡ ಜಮೆ ಯಾಗಿಲ್ಲ.
ಸಿಎಂ ಮಾಹಿತಿ
ಗೃಹಲಕ್ಷ್ಮಿ ಯೋಜನೆ ಕುರಿತಂತೆ ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದಾರೆ. ಯಾರಿಗೆಲ್ಲ ಎರಡು ಕಂತಿನ ಹಣ ಜಮೆಯಾಗಿಲ್ಲವೋ ಅವರಿಗೆ ಎರಡು ಕಂತಿನ ಹಣ ಒಟ್ಟಿಗೆ ಜಮೆ ಮಾಡಲಾಗುವದು, ಅಕ್ಟೋಬರ್ ಹದಿನೈದರ ನಂತರ ಈ ಹಣ ನೇರವಾಗಿ ಖಾತೆಗೆ ಅಂದರೆ ಡಿಬಿಟಿ ಮೂಲಕ ವರ್ಗಾವಣೆಯಾಗಲಿದೆ ಎಂಬ ಮಾಹಿತಿಯನ್ನು ಸಿಎಂ ಸಿದ್ದರಾಮಯ್ಯ ನೀಡಿದ್ದಾರೆ. ಎರಡನೆ ಕಂತಿನ ಹಣವೂ ಇದೇ ತಿಂಗಳು ಜಮೆಯಾಗಲಿದೆ ಎಂದಿದ್ದಾರೆ.
ಇನ್ನು ಅವಕಾಶ ಇದೆ
ರೇಷನ್ ಕಾರ್ಡ್ ಅಭಾವ ದಿಂದ ಕೆಲವು ಮಹಿಳೆಯರು ಇನ್ನೂ ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡದೇ ಇದ್ದವರಿಗೆ ಇನ್ನೂ ಕೂಡ ಅವಕಾಶ ಇದೆ. ಕುಟುಂಬ ಕಲ್ಯಾಣ ಇಲಾಖೆಯು ಈ ಅರ್ಜಿ ನಮೂನೆಯನ್ನು ಬಿಡುಗಡೆ ಮಾಡಿದ್ದು, ಬೆಂಗಳೂರು ಒನ್, ಬಿಬಿಎಂಪಿ ಕಚೇರಿ, ಕರ್ನಾಟಕ ಒನ್, ಬಾಪೂಜಿ ಕೇಂದ್ರಗಳ ಮೂಲಕ ಸೇವಾ ಸಿಂಧು ಪೋರ್ಟಲ್ ನಲ್ಲಿ ಇನ್ನು ಕೂಡ ಅರ್ಜಿ ಸಲ್ಲಿಸಬಹುದು. ಕೊನೆಯ ದಿನಾಂಕ ಇನ್ನೂ ಕೂಡ ನಿಗದಿ ಮಾಡಿಲ್ಲ.
ಇಂತವರಿಗೆ ಹಣ ಇಲ್ಲ
ಈ ಯೋಜನೆಯ ಸೌಲಭ್ಯ ಪಡೆಯಬೇಕಾದರೆ ಮುಖ್ಯವಾಗಿ ರೇಷನ್ ಕಾರ್ಡ್ ಬೇಕು. ಆಧಾರ್ ಕಾರ್ಡ್ ಗೆ ನಿಮ್ಮ ರೇಷನ್ ಕಾರ್ಡ್, ಬ್ಯಾಂಕ್ ಖಾತೆ ಲಿಂಕ್ ಮಾಡದೇ ಇದ್ದಲ್ಲಿ ಈ ಹಣ ಜಮೆಯಾಗಲು ಸಾಧ್ಯವಿಲ್ಲ ಎಂಬ ಮಾಹಿತಿಯನ್ನು ಮತ್ತೊಮ್ಮೆ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
