
ಮಂಗಳೂರು: ದಸರಾ ರಜೆ ಹಿನ್ನೆಲೆ ನೀರಿನಲ್ಲಿ ಆಟ ಆಡಲು ಬೀಚ್ ಗೆ ತೆರಳಿದ್ದ ಬಾಲಕಿಯೋರ್ವಳು ನೀರುಪಾಲಾಗಿರುವ ಘಟನೆ ಸುರತ್ಕಲ್ ಸಮೀಪದ ಚಿತ್ರಾಪುರ ಬೀಚ್ ನಲ್ಲಿ ನಡೆದಿದೆ.
ಮೃತ ಬಾಲಕಿಯನ್ನು ನೇಪಾಲ ಮೂಲದ ನಿಶಾ(15) ಎಂದು ಗುರುತಿಸಲಾಗಿದೆ. ಪ್ರಸ್ತುತ ಈಕೆ ವಿಟ್ಲದಲ್ಲಿ ವಾಸವಾಗಿದ್ದು, ಈಕೆ ದಿಗಂತ ದಿವ್ಯರಾಜ್, ತೇಜಸ್, ಕೀತನ್, ಅಶ್ಮಿತಾ ಎಂಬುವವರ ಜೊತೆ ನೀರಿನಲ್ಲಿ ಆಟ ಆಡಲು ಬೀಚ್‌ಗೆ ತೆರಳಿದ್ದಳು. ಈ ವೇಳೆ ನೀರಿನ ಅಲೆ ರಭಸಕ್ಕೆ ಎಲ್ಲರೂ ನೀರಿನಲ್ಲಿ ಮುಳುಗಿದ್ದರು. ಈ ಸಂದರ್ಭ ಹತ್ತಿರದ ಮೀನುಗಾರರು ಮತ್ತು ಸ್ಥಳೀಯರು ಅವರನ್ನು ನೀರಿನಿಂದ ಮೇಲಕ್ಕೆತ್ತಿದ್ದಾರೆ.
ತಕ್ಷಣವೇ ರಕ್ಷಣಾ ಮಾಡಲಾಯಿತಾದರೂ ನಿಶಾ ಎಂಬ ಬಾಲಕಿ ಮೃತಪಟ್ಟಿದ್ದು, ಓರ್ವ ಬಾಲಕನನ್ನು ಮುಕ್ಕ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಉಳಿದ ನಾಲ್ವರು ಆರೋಗ್ಯವಾಗಿದ್ದಾರೆ ಎನ್ನಲಾಗಿದೆ.
