Home ಸುದ್ದಿಗಳು ರಾಷ್ಟ್ರೀಯ ಕೊಯಮತ್ತೂರು: ನದಿಯಲ್ಲಿ ಈಜಲು ತೆರಳಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

ಕೊಯಮತ್ತೂರು: ನದಿಯಲ್ಲಿ ಈಜಲು ತೆರಳಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

0

ಕೊಯಮತ್ತೂರು: ತಮಿಳುನಾಡಿನ ಕೊಯಮತ್ತೂರಿನ ಕೂಲಂಗಲ್ ನದಿಯಲ್ಲಿ ಈಜಲು ತೆರಳಿದ್ದ 5ಮಂದಿ ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ.


ಮೃತರನ್ನು ಶರತ್(‌20), ನಬಿಲ್‌ ಅಸಾದ್‌(20), ಧನುಷ್‌ ಕುಮಾರ್‌(20), ಅಜಯ್(‌20) ಮತ್ತು ವಿನಿತ್‌ ಕುಮಾರ್‌ (23) ಎಂದು ಗುರುತಿಸಲಾಗಿದೆ.

ನದಿಗೆ ಈಜಲು ಬಂದಿದ್ದ 10ಮಂದಿ ಕಾಲೇಜು ವಿದ್ಯಾರ್ಥಿಗಳ ಪೈಕಿ ಐವರು ನದಿಯ ಅಳವಾದ ಭಾಗಕ್ಕೆ ಹೋಗಿ ಸುಳಿಯಲ್ಲಿ ಸಿಲುಕಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಐವರ ಶವಗಳನ್ನು ಮೇಲಕ್ಕೆತ್ತಿದ್ದಾರೆ. ಪ್ರಕರಣ ಸಂಬಂಧ ವಾಲ್ಪಾರೈ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

 

LEAVE A REPLY

Please enter your comment!
Please enter your name here