Home ಕರ್ನಾಟಕ ಕರಾವಳಿ ಇಂದು ಕುದ್ರೋಳಿಗೆ ಡಿಸಿಎಂ ಡಿಕೆಶಿ ಭೇಟಿ: ನಾಳೆ ಮಂಗಳೂರು ದಸರಾ ಬೃಹತ್‌ ಶೋಭಾಯಾತ್ರೆ

ಇಂದು ಕುದ್ರೋಳಿಗೆ ಡಿಸಿಎಂ ಡಿಕೆಶಿ ಭೇಟಿ: ನಾಳೆ ಮಂಗಳೂರು ದಸರಾ ಬೃಹತ್‌ ಶೋಭಾಯಾತ್ರೆ

0
ಇಂದು ಕುದ್ರೋಳಿಗೆ ಡಿಸಿಎಂ ಡಿಕೆಶಿ ಭೇಟಿ: ನಾಳೆ ಮಂಗಳೂರು ದಸರಾ ಬೃಹತ್‌ ಶೋಭಾಯಾತ್ರೆ

ಮಂಗಳೂರು: ನವರಾತ್ರಿಯ ಸಂದರ್ಭ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಾಲಯದಲ್ಲಿ ನಡೆಯುವ ದಸರಾ ಉತ್ಸವ ನೋಡಲು ಎರಡು ಕಣ್ಣು ಸಾಲದು. ಇಂದು ನವರಾತ್ರಿಯ 9ನೇ ದಿನ ಅದ್ದೂರಿಯಾಗಿ ಪೂಜಾ ಕೈಂಕರ್ಯಗಳು ನಡೆಯಲಿದ್ದು, ಅಕ್ಟೋಬರ್‌ 24ರಂದು ಸಂಜೆ 4ಗಂಟೆಗೆ ಬೃಹತ್‌ ಶೋಭಾಯಾತ್ರೆ ನಡೆಯಲಿದೆ.

ನಾಳೆ ಆರಂಭವಾಗುವ ಶೋಭಾಯಾತ್ರೆ ಅಕ್ಟೋಬರ್‌ 25ರ ಮುಂಜಾನೆ ಶಾರದೆಯ ಜಲಸ್ತಂಭನದ ಮೂಲಕ ಸಮಾಪನಗೊಳ್ಳಲಿದೆ. ಶೋಭಾಯಾತ್ರೆ ಹಿನ್ನೆಲೆ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲೆಯ ವಿವಿಧೆಡೆ ಮದ್ಯದ ಅಂಗಡಿ ಬಂದ್‌ ಮಾಡುವಂತೆ ಈಗಾಗಲೇ ಆದೇಶಿಸಲಾಗಿದೆ. ಮೆರವಣಿಗೆ ಸಾಗುವ ಮಾಗದಲ್ಲಿ ಮತ್ತು ಆಸುಪಾಸಿನ ಸ್ಥಳಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲಾ ಮಧ್ಯದ ಅಂಗಡಿ, ಬಾರ್‌, ವೈನ್‌ ಶಾಪ್‌ಗಳನ್ನು ಬಂದ್‌ ಮಾಡುವಂತೆ ತಿಳಿಸಲಾಗಿದೆ.‌

ಇನ್ನು, ಮೈಸೂರಿನಲ್ಲಿ ನಡೆಯುವ ಜಂಬೂ ಸವಾರಿಯಂತೆ ಮಂಗಳೂರಿನ ದಸರಾದಲ್ಲಿ ಶಾರದಾ ದೇವಿ ಮೆರವಣಿಗೆಯನ್ನು ಮಾಡಲಾಗುತ್ತದೆ. ಈ ವೇಳೆ ಹುಲಿ ಕುಣಿತ, ಜಾನಪದ ಕಲೆ, ಕರಡಿವೇಷದ ಕುಣಿತ ಹೀಗೆ ನಾನಾ ರೀತಿಯ ಸಾಂಸ್ಕೃತಿಕ ಕಾಯಕ್ರಮಗಳು, ಸ್ತಬ್ಧ ಚಿತ್ರಗಳ ಪ್ರದರ್ಶನ ಎಲ್ಲರ ಕಣ್ಮನ ಸೆಳೆಯುತ್ತವೆ. ಇಂದು ದಸರಾ ಕಾಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಭಾಗವಹಿಸಲಿದ್ದಾರೆ ಎನ್ನಲಾಗಿದೆ.

 

LEAVE A REPLY

Please enter your comment!
Please enter your name here