
ಬೆಂಗಳೂರು: ಹುಲಿ ಉಗುರು ಧರಿಸಿದ್ದ ಹಿನ್ನೆಲೆ ಬಿಗ್ ಬಾಸ್ ಮನೆಯೊಳಗೆ ಹೋಗಿ ವರ್ತೂರು ಸಂತೋಷ್ ಅವರನ್ನು ಬಂಧಿಸಿದ ಬೆನ್ನಲ್ಲೇ ಇದೀಗ ಖ್ಯಾತ ನಟನ ವಿರುದ್ಧ ತನಿಖೆಗೆ ಆಗ್ರಹಿಸಲಾಗುತ್ತಿದೆ.
ಹೌದು, ಚಾಲೆಂಜಿಗ್ ಸ್ಟಾರ್ ದರ್ಶನ್ ಅವರು ಕೂಡ ಹುಲಿ ಉಗುರ ಧರಿಸಿರುವ ಕುರಿತು ಆರೋಪಗಳು ಕೇಳಿ ಬರುತ್ತಿದ್ದು, ಅವರನ್ನು ಸಹ ತನಿಖೆಗೆ ಒಳಪಡಿಸಬೇಕು ಎನ್ನುವ ಆಗ್ರಹ ಕೇಳಿಬರುತ್ತಿದೆ. ಕಳೆದ ಎರಡು ತಿಂಗಳ ಹಿಂದೆ ಕೊಲ್ಲೂರು ಮೂಕಾಂಬಿಕಾ ದೇವಿಯ ದರ್ಶನದ ವೇಳೆ ಹುಲಿ ಉಗುರು ಹೋಲುವ ಡಾಲರ್ ಅನ್ನು ನಟ ದರ್ಶನ್ ಧರಿಸಿದ್ದರು, ಹೀಗಾಗಿ ಅರಣ್ಯ ಸಂರಕ್ಷಣಾ ಅಧಿಕಾರಿಗಳು ಕೂಡಲೇ ಇವರ ವಿರುದ್ಧ ತನಿಖೆಯನ್ನು ಕೈಗೊಳ್ಳಬೇಕು. ಹುಲಿ ಉಗುರು ಪತ್ತೆಯಾದಲ್ಲಿ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಜೆಡಿಯು ಪಕ್ಷ ಆಗ್ರಹಿಸಿದೆ.
ದಶನ್ ವಿರುದ್ಧ ಮಲ್ಲೇಶ್ವರಂನ ಅರಣ್ಯ ಭವನದಲ್ಲಿ ಅಕ್ಟೋಬರ್ 25ರಂದು ದೂರು ದಾಖಲಿಸಲು ಜೆಡಿಯು ಪಕ್ಷ ಮುಂದಾಗಿದೆ. ದೂರಿನಲ್ಲಿ ದರ್ಶನ್ ಕೂಡ ಹುಲಿ ಉಗುರು ಹೋಲುv ಲಾಕೆಟ್ ಧರಿಸಿರುವ ಕುರಿತು ಉಲ್ಲೇಖಿಸಲಾಗಿದೆ ಎನ್ನಲಾಗಿದೆ. ಇದೀಗ ನಟ ದಶನ್ ಅವರಿಗೆ ಸಂಕಷ್ಟ ಎದುರಾಗಿದ್ದು, ಅದು ಹುಲಿ ಉಗುರು ಹೌದೋ ಅಲ್ಲವೋ ಎನ್ನುವುದು ತನಿಖೆಯ ಬಳಿಕ ಹೊರಬರಲಿದೆ.
