
ಸುಳ್ಯ: ಕಳೆದ ವರ್ಷ ಕರಾವಳಿಯನ್ನೇ ತಲ್ಲಣಗೊಳಿಸಿದ್ದ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಬಗ್ಗೆ ಸುಳಿವು ನೀಡಿದವರಿಗೆ ತಲಾ 2ಲಕ್ಷ ರೂ ಬಹುಮಾನ ನೀಡುವುದಾಗಿ ಎನ್‌ಐಎ ಅಧಿಕಾರಿಗಳು ಘೋಷಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಮದ ಪೊಯ್ಯೆಗುಡ್ಡೆ ನಿವಾಸಿ ನೌಷಾದ್(32), ಸೋಮವಾರ ಪೇಟೆಯ ಕಲಕಂದೂರು ಅಬ್ದುಲ್ ರಹಿಮಾನ್(36) ಮತ್ತು ಅಬ್ದುಲ್ ನಾಸಿರ್(41) ತಲೆಮರೆಸಿಕೊಂಡಿರುವ ಆರೋಪಿಗಳಾಗಿದ್ದಾರೆ.
ಇನ್ನು, 2022ರ ಜುಲೈ 26ರಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರು ಹತ್ಯೆಯಾಗಿತ್ತು. ಆರಂಭದಲ್ಲಿ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ಆದರೆ ನಂತರ ಎನ್‌ಐಎ ಮರು ದಾಖಲಿಸಿತ್ತು. ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರು ಮತ್ತು ಬಿಜೆಪಿ ಕಾರ್ಯಕರ್ತರ ಹತ್ಯೆಗಳ ಹಿಂದೆ ಕೇರಳದಿಂದ ಕಾರ್ಯಾಚರಿಸುತ್ತಿರುವ ಸುಸಂಘಟಿತ ಜಾಲದ ಕೈವಾಡವಿದೆ ಎಂಬ ಶಂಕೆ ಇರುವ ಹಿನ್ನೆಲೆ ಪ್ರಕರಣವನ್ನು ಎನ್‌ಐಗೆ ಹಸ್ತಾಂತರಿಸಲಾಗಿತ್ತು.
