ರೇಶನ್ ಕಾರ್ಡ್ ಮೊದಲಿನಿಂದಲೂ ಅಗತ್ಯ ದಾಖಲೆ ಆಗಿದ್ದು, ಯಾವುದೇ ಸೌಲಭ್ಯ ಪಡೆಯಲು ಈ ಕಾರ್ಡ್ ಅಗತ್ಯ ದಾಖಲೆ. ಇದರಲ್ಲಿ ಬಿಪಿಎಲ್, ಅಂತ್ಯೋದಯ ಎಂದು ವಿಭಾಗ ಮಾಡಲಾಗಿದ್ದು, ರೇಷನ್ ಕಾರ್ಡ್ ಇಂದು ಕೇವಲ ಪಡಿತರ ಪಡೆಯುವುದಕ್ಕೆ ಮಾತ್ರ ಸಹಾಯಕವಾಗಿಲ್ಲ. ವಿವಿಧ ಪಿಂಚಣಿ ಯೋಜನೆಗಳಿಗೆ, ಸರ್ಕಾರದ ಸೌಲಭ್ಯ, ವಸತಿ ಯೋಜನೆಗಳ ಪ್ರಯೋಜನ ಪಡೆಯುವ ಸಂದರ್ಭದಲ್ಲಿ, ನೆರೆ ಹಾವಳಿ, ಪ್ರಕೃತಿ ವಿಕೋಪ ಪರಿಹಾರ ಸಂದರ್ಭದಲ್ಲಿ ಇದರ ಅವಶ್ಯಕತೆ ಇದೆ.
ಸಾಕಷ್ಟು ಸಹಕಾರಿ
ಅದರಲ್ಲೂ ಮಧ್ಯಮ ವರ್ಗದ ಕುಟುಂಬಗಳಿಗೆ ಸರ್ಕಾರಿ ಸೌಲಭ್ಯಗಳು ಸಿಗಲು ಬಿಪಿಎಲ್ ಕಾರ್ಡ್ ಬಹಳಷ್ಟು ಸಹಕಾರಿ. ಆದರೆ ಇಂದು ಕಾಂಗ್ರೆಸ್ ಸರ್ಕಾರದ ಮಹತ್ವದ ಯೋಜನೆಯಾದ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಗೆ ಕೂಡ ರೇಶನ್ ಕಾರ್ಡ್ ಅಗತ್ಯವಾಗಿದ್ದು, ಹೆಚ್ಚಿನ ಕಾರ್ಡ್ ದಾರರು ತಿದ್ದುಪಡಿ ಮಾಡಿ ಮಾಡಲು ಅರ್ಜಿ ಸಲ್ಲಿಕೆ ಮಾಡಿದ್ದರು. ಇದೀಗ ಕೆಲವು ಕಾರ್ಡ್ ಅನ್ನು ತಿದ್ದುಪಡಿ ಮಾಡುವ ಮೊದಲು ತಿರಸ್ಕಾರ ಮಾಡಿದೆ.
ಯಾಕಾಗಿ ತಿರಸ್ಕಾರ
ಕೆಲವೊಂದು ಜಿಲ್ಲೆಯಲ್ಲಿ ಲಕ್ಷಕ್ಕೂ ಹೆಚ್ಚು ಜನರ ಪಡಿತರ ಚೀಟಿಯಲ್ಲಿ ದೋಷ ಕಾಣಿಸಿಕೊಂಡಿದ್ದು, ಅರ್ಜಿ ತಿರಸ್ಕಾರ ಆಗಿದೆ. ಹೌದು, ಕೆಲ ಪಡಿತರ ಚೀಟಿಗಳಲ್ಲಿ ಕುಟುಂಬದ ಎಲ್ಲರ ಹೆಸರೂ ಸೇರ್ಪಡೆಗೊಂಡಿಲ್ಲ. ಇನ್ನು ಕೆಲವರು ಪಕ್ಕದ ಮನೆಯ ಹೆಸರನ್ನು ಸೇರಿಸಿದ್ದಾರೆ. ಕೆಲವರು ಇದ್ದ ಹೆಸರನ್ನು ಡಿಲೀಟ್ ಮಾಡಿದ್ದಾರೆ. ಕೆಲವರ ದಾಖಲೆಗಳು ಸರಿಯಾಗಿ ಇರದೇ ಇದ್ದ ಕಾರಣ ತಿರಸ್ಕಾರ ಮಾಡಿದೆ.
ನವೆಂಬರ್ 1 ರಿಂದ ಮತ್ತೊಮ್ಮೆ ಅವಕಾಶ
ರೇಷನ್ ಕಾರ್ಡ್ ತಿದ್ದುಪಡಿಗೆ ಇನ್ನೂ ಅವಕಾಶ ನೀಡಿದ್ದು, ನವೆಂಬರ್ ನಲ್ಲಿ ಮತ್ತೆ ಅವಕಾಶ ನೀಡಿದೆ. ಸರ್ವರ್ ಸಮಸ್ಯೆಯಿಂದ ಕೆಲವು ಕಡೆ ಯಾವುದೇ ಕಾರ್ಡ್ ತಿದ್ದುಪಡಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ನವೆಂಬರ್ 1 ರಿಂದ ಮತ್ತೊಮ್ಮೆ ತಿದ್ದುಪಡಿಗೆ ಅವಕಾಶ ನೀಡಲಾಗುತ್ತಿದೆ ಎಂದು ಆಹಾರ ಇಲಾಖೆಯ ಸಚಿವರು ಮಾಹಿತಿ ನೀಡಿದ್ದಾರೆ. ರೇಷನ್ ಕಾರ್ಡ್ ತಿದ್ದುಪಡಿಗೆ ಪಡಿತರದಾರರು ಬೆಳಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ತಿದ್ದುಪಡಿಗೆ ಅವಕಾಶ ನೀಡಲಾಗಿದೆ.
ಕಠಿಣ ಕ್ರಮ
ಒಂದೇ ಮನೆಗೆ ಎರಡು ಮೂರು ರೇಶನ್ ಕಾರ್ಡ್ ಮಾಡಿಸುವುದು, ಅರ್ಹತೆ ಇಲ್ಲದವರು ಬಿಪಿಎಲ್ ಕಾರ್ಡ್ ಮಾಡಿಸುವುದು ತಿಳಿದು ಬಂದಿದ್ದು, ಹಾಗಾಗಿ ನಕಲಿ ಜಾಲ ಪತ್ತೆಗೆ ಕಠಿಣ ಕ್ರಮಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಆಧಾರ್ ಮತ್ತು ರೇಶನ್ ಕಾರ್ಡ್ ಲಿಂಕ್ ಪ್ರಕ್ರಿಯೆ ಕಡ್ಡಾಯಗೊಳಿಸಲಾಗುತ್ತಿದೆ.
