
ಹದಿಹರೆಯದ ಹೆಣ್ಣುಮಕ್ಕಳ (Young Girls) ಸ್ವಚ್ಛ (Clean) ಹಾಗೂ ಸುರಕ್ಷಿತ ಋತುಚಕ್ರ ನಿರ್ವಹಣೆಗಾಗಿ ಈ ಭಾರಿ ಸರ್ಕಾರ ವಿಶೇಷ ಯೋಜನೆಯನ್ನು ಜಾರಿಗೆ ತರುತ್ತಿದೆ. ಈ ಯೋಜನೆಯ ಮೂಲಕ ಹದಿಹರೆಯದ ಹೆಣ್ಣುಮಕ್ಕಳಿಗೆ ಮರುಬಳಕೆ ಮಾಡುವ ಮುಟ್ಟಿನ ಕಪ್ ಗಳನ್ನು ಪರಿಚಯ ಮಾಡಿದೆ. ಈ ಹಿಂದೆ ಸರ್ಕಾರ ಸ್ಯಾನಿಟರಿ ಪ್ಯಾಡ್ ವಿತರಣೆ ಮಾಡಿತ್ತು. ಇದೀಗ ಮೈತ್ರಿ ಯೋಜನೆಯ ಮೂಲಕ ಮುಟ್ಟಿನ ಕಪ್ ವಿತರಣೆ ಮಾಡಲು ಸರಕಾರ ಮುಂದಾಗಿದೆ. ಇದರಿಂದ ವಿದ್ಯಾರ್ಥಿಗಳು ಅಲ್ಲದೆ ಮಹೀಳೆಯರಿಗೂ ಈ ಕಪ್ ಬಹಳಷ್ಟು ಉಪಯೋಗ ಕಾರಿಯಾಗಿದೆ.
ವಿತರಣೆ
ರಾಜ್ಯದ ಸರ್ಕಾರಿ ಶಾಲಾ ಕಾಲೇಜುಗಳ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಮುಟ್ಟಿನ ಕಪ್ ವಿತರಣೆ ಮಾಡಲು ಪ್ಲಾನ್ ಮಾಡಲಾಗಿದೆ. ಮುಟ್ಟಿನ ಕಪ್ನಿಂದ ಮಹಿಳೆಯರಿಗೆ ಹಣ ಉಳಿತಾಯವಾಗಲಿದೆ. ಈ ಕಪ್ ಮೂಲಕ ಋತುಚಕ್ರದ ದಿನಗಳಲ್ಲಿ ಮುಟ್ಟಿನ ಕಪ್ ಧರಿಸಿ ಹೆಣ್ಣುಮಕ್ಕಳು ಧೈರ್ಯವಾಗಿ ಹೋಗಬಹುದು. ಸ್ಯಾನಿಟರಿ ಪ್ಯಾಡ್ ಸಾಕಷ್ಟು ತ್ಯಾಜ್ಯ ಮತ್ತು ಪರಿಸರಕ್ಕೆ ಹಾನಿ ಮಾಡುತ್ತದೆ. ಈ ಕಪ್ ಅನ್ನು ಕನಿಷ್ಠವೆಂದರೆ ಐದು ವರ್ಷಗಳ ಕಾಲ ಮರುಬಳಕೆ ಮಾಡಬಹುದು.
ಏನಿದು ಮುಟ್ಟಿನ ಕಪ್?
ಸ್ತ್ರೀಯರು, ಇಂದು ಹೆಚ್ಚಾಗಿ ಸ್ಯಾನಿಟರಿ ಪ್ಯಾಡ್ ಬಳಕೆ ಮಾಡುತ್ತಾರೆ. ಅದರೆ ಇದೀಗ ಈ ಕಪ್ ತಿಂಗಳ ಮುಟ್ಟಿನ ಸಮಯದಲ್ಲಿ ಬಳಸಬಹುದಾದ ಒಂದು ಪ್ರಾಡಕ್ಟ್ ಆಗಿದೆ. ಮುಟ್ಟಿನ ಸಮಯದಲ್ಲಿ ರಕ್ತವು ಹೆಚ್ಚಾಗಿ ಸ್ಬಟ್ಟೆ ಕಳೆಯಾಗಬಾರದು, ಮತ್ತು ಇದರಿಂದ ಹಣದ ಉಳಿತಾಯ ಮಾಡಬಹುದಾಗಿದ್ದು ತಿಂಗಳಿಗೊಮ್ಮೆ ಖರೀದಿ ಮಾಡುವ ಅವಶ್ಯಕತೆ ಇರುವುದಿಲ್ಲ. ಮಹಿಳೆಯರಿಗೆ ಮುಟ್ಟಿನ ಕಪ್ ಅಥವಾ ಮುಟ್ಟಿನ ಬಟ್ಟಲಿನ ಕುರಿತು ತಿಳಿವಳಿಕೆಯ ಅರಿವು ಕೂಡ ಮುಡಿಸಲಾಗಿದೆ.
ಯಾರಿಗೆ ದೊರೆಯಲಿದೆ?
ಸರ್ಕಾರ ಮತ್ತು ಅನುದಾನಿತ ಕಾಲೇಜುಗಳ ಹದಿನೆಂಟು ವರ್ಷ ವಯಸ್ಸಿನ ಹೆಣ್ಣುಮಕ್ಕಳಿಗೆ ಈ ಮುಟ್ಟಿನ ಕಪ್ ದೊರಯಲಿದ್ದು ಇದರ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ವಿಶೇಷವೆಂದರೆ ಹದಿಹರೆಯದ ಹೆಣ್ಣುಮಕ್ಕಳ ನೈರ್ಮಲ್ಯಕ್ಕಾಗಿ ಇಂತಹ ಯೋಜನೆಯನ್ನು ಆರಂಭ ಮಾಡಿದ ಮೊದಲ ರಾಜ್ಯವೆಂಬ ಹೆಮ್ಮೆಗೆ ಕರ್ನಾಟಕ ಪಾತ್ರವಾಗಿದೆ.
